|
|
|

| Rs. 250 | 10% |
Rs. 225/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
296 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
1132657 |
ಡಾ. ಬಿ. ಎ. ವಿವೇಕ್ ರೈ ಇವರು ತುಳು ವಿದ್ವಾಂಸರು, ಕನ್ನಡ ಪ್ರಾಧ್ಯಾಪಕರು, ವಿಮರ್ಶಕರು. ಕಳೆದ ೫೦ ವರ್ಷದಿಂದ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನ ತನ್ನನ್ನು ಅರ್ಪಿಸಿಕೊಂಡಿದ್ದಾರೆ ಕರ್ನಾಟಕದ ಕನ್ನಡಕ್ಕು, ಕರಾವಳಿಯ ತುಳುವಿನ ಬೆಳವಣಿಗೆಗೆ ದುಡಿಯುತ್ತಿದ್ದಾರೆ.ಇವರ ಮನೆ ಭಾಷೆ ತುಳು. ಇವರಿಗೆ ಚಿಕ್ಕ ವಯಸ್ಸಿಗೆ ಕಾರಂತರ ಪರಿಚಯ ಇತ್ತು. ಆ ಕಾರಣದಿಂದ ಭಾಷೆ, ಸಂಸ್ಕೃತಿಯ ಕ್ಷೇತ್ರದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ವಿವೇಕ ರೈಯವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಪುಣಚಾ ಗ್ರಾಮದ ವಿವೇಕ ರೈ (1946)ಅಗ್ರಾಳ ಪುರಂದರ ರೈಯವರು ಇವರ ತಂದೆ, ಶಿವರಾಮ ಕಾರಂತ ರ ಶಿಷ್ಯ ಹಾಗೂ, ಅವರ ದೊಡ್ಡ ಅಭಿಮಾನಿ. ಪುರಂದರ ರೈಯವರ ಸಾಹಿತ್ಯ ಸ್ಪಂದನೆಯಲ್ಲಿ, ಬೆಳೆದ ವಿವೇಕ ರೈಯವರು, ದೊಡ್ಡ ವಿದ್ವಾಂಸರಾಗಿದ್ದಾರೆ.ಇವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿ ಎಸ್ಸಿ., ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂಎ ಪದವಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು. ಮಂಗಳೂರು ಸ್ನಾತಕೋತ್ತರ ಕೇಂದ್ರ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ 34 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ, 18 ವರ್ಷಗಳ ಕಾಲ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಕನ್ನಡ ವಿಶ್ವವಿದ್ಯಾಲಯ ಹಂಪಿ (2004-07) ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು (2007-09)ಗಳಲ್ಲಿ ಕುಲಪತಿಗಳಾಗಿ ಸಂಸ್ಥೆಗಳನ್ನು ಮುನ್ನಡೆಸಿದರು. ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿವಿಯ ಇಂಡಾಲಜಿ ವಿಭಾಗದಲ್ಲಿ ಅತಿಥಿ-ಪ್ರಾಧ್ಯಾಪಕರಾಗಿ ಯುರೋಪಿಯನ್ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಯನ್ನು ಬೋಧಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರು (1994-98). ಕನ್ನಡದಲ್ಲಿ ಇವರ 21 ಸ್ವತಂತ್ರ ಕೃತಿಗಳು ಮತ್ತು 18 ಸಂಪಾದಿತ ಕೃತಿಗಳು, ತುಳುವಿನಲ್ಲಿ ಎರಡು ಕೃತಿಗಳು, ಇಂಗ್ಲಿಷ್ ನಲ್ಲಿ ಇತರರೊಡನೆ ಆರು ಕೃತಿಗಳು ಪ್ರಕಟವಾಗಿವೆ. ಇವರು ಡಾ. ಕತ್ರಿನ್ ಬಿಂದರ್ ಜೊತೆಗೆ ತೇಜಸ್ವಿ ಅವರ ``ಕರ್ವಾಲೊ`` ಕಾದಂಬರಿಯನ್ನು ಜರ್ಮನ್ ಭಾಷೆಗೆ ಅನುವಾದಿಸಿದ್ದಾರೆ. ಇವರು ಹೆಂಡತಿ ವಸಂತಕೋಕಿಲ ಅವರ ಜೊತೆಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.
|
|
| |
|
|
|
|
|
|
|
|
|