Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 60   
10%
 
 
Rs. 54/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Demy Size
ISBN : 9788173022647
ಕೋಡ್ : 002022

ಅಂತರಿಕ್ಷ ಎಷ್ಟು ವಿಶಾಲ, ಎಷ್ಟು ಅಗಾಧ, ಎಷ್ಟು ಅನಂತ! ನೋಡಲೇ ಬಲು ಸೊಗಸು. ಮಹದದ್ಭುತ. ಅದರ ಅಷ್ಟು ವಿಶಾಲವಾದ ಹರವೂ ಬರಿದೋ ಬರಿದು. ಅದೊಂದು ನಿಗೂಢ ವೈಚಿತ್ರ್ಯ. ಅದನ್ನು ಮಾನವ ಅನಾದಿಕಾಲದಿಂದಲೂ ಭಯಭಕ್ತಿಗಳಿಂದ ನೋಡುತ್ತ ಬಂದಿದ್ದಾನೆ. ಅದು ತನ್ನೆಲ್ಲ ರಹಸ್ಯಗಳನ್ನೂ ಎಂದಾದರೂ ಬಯಲು ಮಾಡೀತೆ? ಮಾಡಿದರೂ ಅದು ತನ್ನ ವಿಶ್ವರೂಪ ದರ್ಶನ ಮಾಡಿಸಲು ಇನ್ನೂ ಎಷ್ಟು ಜ್ಯೋತಿರ್ವರ್ಷಗಳು ಬೇಕೋ. ಆದರೂ ಮಾನವನ ಅಂತಃಪ್ರತಿಭೆ ಅದರ ಕೊನೆಯಪಕ್ಷ ಕೆಲವು ರಹಸ್ಯಗಳನ್ನಾದರೂ ಬಯಲು ಮಾಡಿದೆ. ಅಂಥ ಅಂತರಿಕ್ಷದ ಆಳಗಳೊಳಕ್ಕೆ ಮುಳುಗಿ ಅಲ್ಲಿನ ಕೌತುಕಗಳ ಅಲ್ಪ ಅರಿವನ್ನಾದರೂ ಪಡೆಯಲು ತಜ್ಞನಲ್ಲದ ಶ್ರೀಸಾಮಾನ್ಯನಿಗೂ ಸಾಧ್ಯಮಾಡಿಕೊಡುವಂತೆ ಈ ಕಿರುಹೊತ್ತಗೆಯನ್ನು ಸರಳ ಭಾಷೆ ಶೈಲಿಗಳಲ್ಲಿ ರಚಿಸಲಾಗಿದೆ, ವಿವರಣಾ ಚಿತ್ರಗಳನ್ನು ಪುಟಪುಟಗಳಲ್ಲೂ ತುಂಬಿಸಿದೆ. ಹಕ್ಕಿಯಂತೆ ಹಾರಬೇಕು, ಅಜ್ಞಾತದ ಒಳಹೊಕ್ಕು ಅದರ ಅಂತರಂಗವನ್ನು ಶೋಧಿಸಬೆಕು ಅನ್ನುವುದು ಆದಿಕಾಲದಿಂದಲೂ ಮಾನವನಲ್ಲಿ ಬೆಳೆದುಬಂದಿರುವ ಉತ್ಕಟೇಚ್ಛೆ. ಅದು ಅವನನ್ನು ಅರಿವಿರದ ನಾನಾ ಹಾದಿಗಳಲ್ಲಿ ಕರೆದೊಯ್ದಿದೆ. ಅವೆಲ್ಲವುಗಳ ಸೂಕ್ಷ್ಮ ಪರಿಚಯ ನೀಡಿ ಈ ಕೃತಿ ಅವನು ಇಂದು ಅಂತರಿಕ್ಷದ ಬಗೆಗೆ ಎಂಥ ಜ್ಞಾನದ ಆಣಿಮುತ್ತುಗಳನ್ನು ಸಂಗ್ರಹಿಸಿದ್ದಾನೆಂಬ ಬಗೆಗೆ ವಿವರವಾಗಿ ತಿಳಿಸುತ್ತದೆ. ರಾಕೆಟ್ಟುಗಳನ್ನು, ಅಂತರಿಕ್ಷನೌಕೆಗಳನ್ನು ಹೇಗೆ ನಿರ್ಮಿಸಲಾಯಿತು ಎಂಬುದನ್ನು ಹಂತಹಂತವಾಗಿ ತಿಳಿಸಿ ಈ ಕೃತಿ ಮಾನವನ ಅಂತರಿಕ್ಷ ಯಾತ್ರೆಹಲ್ಲಿ ಎಷ್ಟು ಗಂಡಾಂತರಗಳುಂಟು, ಜೊತೆಗೇ ಎಂಥ ಮಹದಾನಂದವೂ ಉಂಟು ಎಂಬುದನ್ನು ವಿವರಿಸುತ್ತದೆ. ಇಂದಷ್ಟೆ ಅಲ್ಲ, ನಾಳೆ ಹಾಗೂ ದೂರ ಭವಿಷ್ಯತ್ತಿನಲ್ಲಿ ಹೇಗೆ ಮತ್ತು ಎಂಥ ಅಂತರಿಕ್ಷ ನಿಲ್ದಾಣಗಳು ನಿರ್ಮಿಸಲ್ಪಡುವುವು,ಹೇಗೆ ಅಂತರಿಕ್ಷ ಅಕ್ಷರಶಃ ಮಾನವನ ನಿವಾಸ ಸ್ಥಾನವಾಗಲಿರುವುದು ಎಂಬ ಮುನ್ನೋಟವನ್ನೂ ಈ ಕೃತಿ ಒದಗಿಸುತ್ತದೆ.

ಪಿ ರಾಧಾಕೃಷ್ಣನ್ ಕೇರಳ ವಿಶ್ವವಿದ್ಯಾಲಯದ ಭೌತಶಾಸ್ತ್ರ ಎಂ.ಎಸ್.ಸಿ. ಪದವೀಧರರು. 1966ರಲ್ಲಿ ಶಿಕ್ಷಣಾರ್ಥಿಯಾಗಿ ‘ಇಸ್ರೋ’ ಸೇರಿದರು. ಮರುವರ್ಷ ಅದರ ಉದ್ಯೋಗಿಯಾದರು. 1985ರಲ್ಲಿ ಭಾರತದ ಮೊದಲ ಉಪಗ್ರಹ ‘ಆರ್ಯಭಟ’ ನಿರ್ಮಿಸಿದ ತಂಡದಲ್ಲಿ ಇವರೂ ಸದಸ್ಯರಾಗಿದ್ದರು. ಅಮೆರಿಕದ ಸ್ಪೇಸ್ ಷಟಲ್‌ನಲ್ಲಿ ಯಾನ ಹೋಗಲೂ ಆಯ್ಕೆಯಗಿದ್ದರು. ಆದರೆ 1986ರ ಜನವರಿಯಲ್ಲಿ ಜರುಗಿದ ‘ಚಾಲೆಂಜರ್’ ದುರಂತದ ಪರಿಣಾಮವಾಗಿ ಆ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಯಿತು. ಇವರು ಎಲೆಕ್ಟ್ರಾನಿಕ್ಸ್, ಪ್ರೋಗ್ರಾಮ್ ಪ್ಲಾನಿಂಗ್, ಸಾಧನಗಳ ವಿಶ್ವಾಸಾರ್ಹತೆ ಹಾಗೂ ಗುಣಮಟ್ಟ ಖಾತರಿ-ಇಂಥ ಅನೇಕ ಕ್ಷೇತ್ರಗಳಲ್ಲಿ ದುಡಿದು ಅಪಾರ ಅನುಭವ ಗಳಿಸಿದ್ದಾರೆ.

Best Sellers
ಲೋಹಿಯಾ ಮುಟ್ಟಿದ ಚಿಗುರು - Hard Cover
ತಿಪ್ಪೇಸ್ವಾಮಿ ಎನ್ ಡಿ, Tippeswamy N D
Rs. 315/-   Rs. 350
ಯೋಗ ಪ್ರಾಣಾಮಾಮ
ಶ್ರೀವತ್ಸ ಯೋಗಾನಂದ, Srivathsa Yogananda
Rs. 99/-   Rs. 110
ಅಸ್ಪೃಶ್ಯತೆ ವೈಕಂ ಸತ್ಯಾಗ್ರಹ
ಪೆರಿಯಾರ್, Periyar
Rs. 54/-   Rs. 60
ತಾಯ್ನುಡಿಯ ಸಂಕಟಕ್ಕೆ ದನಿಯಾಗಿ
ರೂಪ ಹಾಸನ, Rupa Hasana
Rs. 135/-   Rs. 150

Latest Books
ಕತ್ತೆಗೊಂದು ಕಾಲ : ಕಾದಂಬರಿ
ವೀರಭದ್ರಪ್ಪ ಕುಂ, Veerabhadrappa Kum
Rs. 270/-   Rs. 300
The Streeties And Others Stories
ವಿದ್ಯಾ ರಾಮನಾಥನ್ , Vidya Ramanathan
Rs. 113/-   Rs. 125
ಇದು ಕಥಾಕಾಲ : ಕತೆಗಳು (ಭಾಗ 3)
ಗಂಗಾವತಿ ಬಿ ಪ್ರಾಣೇಶ್, Gangavathi Pranesh
Rs. 90/-   Rs. 100
ಎಲ್ಲಿಗೆ ಅನ್ನದೆ ನಡೆ - ಆತ್ಮ ಕಥನ
ಗೋವಿಂದ ಪ್ರಹ್ಲಾದ ಭಾಗೋಜಿ, Govinda Prahalada Bhagoji
Rs. 72/-   Rs. 80


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.