|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸುಧಾ ಎಂಟರ್ಪ್ರೈಸಸ್, Sudha Enterprises |
ಈಗಿನ ಮುದ್ರಣದ ಸಂಖ್ಯೆ |
: |
5 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
166 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9798190685367 |
ಕೋಡ್ |
: |
186141 |
ಡಿ.ವಿ.ಜಿ.ಯವರ ಮಾತು “ನಿನಗೆ ಸ್ವಾಭಾವಿಕವಾಗಿರುವ ಶಕ್ತಿ ಮತ್ತು ನೀನು ಮಾಡಬೆಕಾದ ಕೆಲಸಗಳೆರಡಕ್ಕೂ ಮಿತಿ ಇದೆ. ಅದನ್ನು ಮೀರಿದರೆ ಕೆಲಸವಾಗದು. ಆದರೆ ಈ ಮಿತಿ ಮತ್ತು ಅತಿಗಳ ವ್ಯತ್ಯಾಸವನ್ನು ತಿಳಿದುಕೊಳ್ಳುವುದೇ ಕಷ್ಟ. ನೀನು ಮಾಡಬೇಕಾದದ್ದು ಇಷ್ಟೇ: ನಿನಗೆ ಹಿತವೆನಿಸಿದ್ದನ್ನು ಮಾಡು, ಮಿಕ್ಕಿದ್ದನ್ನು ದೇವರಿಗೆ ಬಿಡು. ದೇವರಿಗೂ ಸ್ವಲ್ಪ ಕೆಲಸವಿರಲಿ”. ಈ ಅಮೃತ ನುಡಿಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡೇ, ಸಾಯಿಸುತೆಯವರು ಈ ಕಾದಂಬರಿಯನ್ನು ಬರೆದು ಮುಕ್ತಾಯಗೊಳಿಸಿದ್ದಾರೆ.
|
ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.
|
|
| |
|
|
|
|
|
|
|
|
|