|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಶಾಂತ ಆಡೂರರ ಕೈಯೊಳಗೆ ಲಾಲಿತ್ಯದ ಅಕ್ಷಯಪಾತ್ರೆ ಇದೆಯೇನೋ ಎಂಬ ಅನುಮಾನ ನನಗಾಗುತ್ತದೆ. ಹೆಂಡತಿ, ಮಗ, ಅವ್ವ, ಹುಬ್ಬಳ್ಳಿ ಊರು - ಇಷ್ಟರಾಗ ಅದೆಷ್ಟು ಲಾಲಿತ್ಯ ಹುಟ್ಟಿಸುತ್ತಾರೆ! ಮುದ ಕೊಡುವ ಹುಬ್ಬಳ್ಳಿ ಭಾಷೆಯೊಳಗೆ ಅವರು ಹೇಳುವ ಸಂಗತಿಗಳೆಲ್ಲಾ ಕಚಗುಳಿ ಇಡುತ್ತಲೇ ಹೋಗುತ್ತವೆ. ಅಚ್ಚರಿಯಾಗುವುದು ಅವರು ಈವರೆಗೆ ಬರೆದ ನೂರಾರು ಹಾಸ್ಯ ಲೇಖನಗಳಿಗಾಗಿ ಅಲ್ಲ, ಇನ್ನೂ ಸಾವಿರಾರು ಅಂತಹ ಲೇಖನಗಳನ್ನು ಮುಂದೆಯೂ ಅವರು ಬರೆಯಬಲ್ಲರು ಎನ್ನುವ ಖಚಿತ ನಂಬಿಕೆ ಅವರ ಮೇಲೆ ಮೂಡುವುದರಿಂದಾಗಿ!
ಸಾಮಾಜಿಕ, ರಾಜಕೀಯ, ಧಾರ್ಮಿಕ, ಆಧುನಿಕ - ಯಾವೊಂದು ಸಂಗತಿಗಳನ್ನೂ ಪ್ರಶಾಂತ್ ಬಿಟ್ಟುಕೊಡುವುದಿಲ್ಲ. ಬಾಣಂತನವನ್ನೂ ಬಿಡುವುದಿಲ್ಲ, ಕಾಂಟ್ರಾಸೆಪ್ಷನ್ ದಿನವನ್ನೂ ಮರೆಯುವುದಿಲ್ಲ. ಕಮೋಡ್ ದಿಕ್ಕನ್ನು ಚರ್ಚಿಸುತ್ತಲೇ, ಕುಂಕುಮ ತೊಗೊಂಡು ಹೋಗ್ರಿ ಎಂದು ಸಂಪ್ರದಾಯವನ್ನು ನುಡಿಯುತ್ತಾರೆ. ಶುದ್ಧ ಹಾಸ್ಯಕ್ಕೆ ಯಾವ ಅಶ್ಲೀಲತೆಯ ಸೋಂಕೂ ಬೇಕಿಲ್ಲವೆನ್ನುವುದನ್ನು ಅರ್ಥ ಮಾಡಿಸುತ್ತಾರೆ. ಅದೇ ವಸ್ತು, ಅದೇ ಪಾತ್ರ, ಅವವೇ ಸನ್ನಿವೇಶಗಳನ್ನು ನೀವು ಏನಾದರೂ ಸುಕೋಮಲ ಕನ್ನಡದಲ್ಲಿ ಬರೆಯಲು ಹೊರಟಿರೋ, ಅದು ತನ್ನ ಲಾಲಿತ್ಯವನ್ನೇ ಕಳೆದುಕೊಂಡು ಬಿಡುತ್ತದೆ. ಈ ಎಲ್ಲಾ ಲೇಖನಗಳ ಬೆನ್ನೆಲುಬಾಗಿ ಹುಬ್ಬಳ್ಳಿಯ ಜವಾರಿ ಭಾಷೆ ನಿಂತಿದೆ! ಇವರು ಆಗಾಗ ಇಂಗ್ಲೀಷ್ ಪದಗಳನ್ನು, ವಾಕ್ಯಗಳನ್ನು ಬಳಸಿದರೂ ಅವೂ ನಮ್ಮ ಕನ್ನಡದ್ದೇ ಏನೋ ಎಂದು ಸಂಭ್ರಮವಾಗುವಷ್ಟು ದೇಸಿತನ ಇವರ ಭಾಷೆಗೆ ದಕ್ಕಿದೆ. ನಿಜ ಹೇಳಬೇಕೆಂದರೆ ಅನುವಾದಕ್ಕೆ ದಕ್ಕದಂತಹ ದೇಸಿಬನಿ ಇವರ ಭಾಷೆಯಲ್ಲಿದೆ.
ನಗಿಸುವುದು ಪುಣ್ಯಕಾರ್ಯ. ಆಧುನಿಕ ಜಂಜಾಟದಲ್ಲಿ ನಾವುಗಳು ಸಂಭ್ರಮದಿಂದ ನಗುವುದನ್ನೇ ಮರೆತುಬಿಟ್ಟಿದ್ದೇವೆ. ಅದನ್ನು ನೆನಪಿಸಿ, ನಮ್ಮ ಮುಖದಲ್ಲಿ ನಗೆಯ ಹೂ ಅರಳಿಸಿ, ಬದುಕನ್ನು ತುಸು ಹಗುರವಾಗಿಸುವ ಪ್ರಶಾಂತ ಆಡೂರರಂತಹವರು ನಿಜಕ್ಕೂ ಅಭಿನಂದನಾರ್ಹರು. ಶುದ್ಧ ನಗೆಯೆನ್ನುವುದು ಸಮಾಜದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ ಎಂದು ನಂಬುವುದಾದರೆ, ಪ್ರಶಾಂತ ಆಡೂರನಂತಹವರು ನಿಜವಾದ ಸಮಾಜ ಸೇವಕರು!
- ವಸುಧೇಂದ್ರ
|
1973ರಾಗ ಹುಟ್ಟಿದ್ದು... ಹಂಗ ನಮ್ಮವ್ವನ ಅವ್ವನ ತವರಮನಿ ಅಂದರ ನಮ್ಮಜ್ಜಿ ತವರಮನಿ ಅಂತ ಮಲೆನಾಡಿನ ಶಿವಮೊಗ್ಗಾದೊಳಗ ಹುಟ್ಟಿದರು ಬೆಳದಿದ್ದು-ಬಲತಿದ್ದು ಎಲ್ಲಾ ಬೈಲನಾಡಿನ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಎಸ್ಸಿ, ಎಮ್.ಬಿ.ಎ (ಸಿಂಬಾಯ್ಸಿಸ್).
ಸದ್ಯೇಕ ಹುಬ್ಬಳ್ಳ್ಯಾಗ ಒಂದ ಪ್ರಾವೇಟ ಕಂಪನಿ ಒಳಗ ಸಿ.ಇ.ಒ. ಅಂತ 20 ವರ್ಷದಿಂದ ನೌಕರಿ, ಕನ್ನಡ ಆನ್ ಲೈನ ಬ್ಲಾಗ ಒಳಗ ಆವಾಗ ಇವಾಗ ಅಂಕಣಾ ಬರಿಯೋದು. ವಿಜಯ ಕರ್ನಾಟಕ ‘ಹಾಳ ಹರಟೆ ಅಂಕಣಕಾರ’ ಇದ್ದೆ, ಈಗ ವಿಜಯವಾಣಿ ‘ಗಿರಮಿಟ್’ ಅಂಕಣ ಬರಿಲಿಕತ್ತೇನಿ. ನಂದ ಒಂದ ಸ್ವಂತ www.adur.org ಅಂತ ಬ್ಲಾಗ ಬ್ಯಾರೆ ಅದ.
ಹಂಗ ಸದ್ಯೇ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಮೆಂಬರ್ ಬ್ಯಾರೆ ಇದ್ದೇನಿ.
ತಲ್ಯಾಗ ತಿಳದಾಗೊಮ್ಮೆ ಪೇಂಟಿಂಗ ಮಾಡ್ತೇನಿ, ವಾರಕ್ಕ ಒಂದ ಮೂರ ಸರತೆ ಫೋಟೊಗ್ರಾಫಿ... ಇವು ಸಂಸಾರೇತರ ಹವ್ಯಾಸ. ಹಂಗ ಸಂಸಾರದ ಜಂಜಾಟದ ಜೊತಿ ಹೆಂಡತಿ ಹೂಂ ಅಂದಾಗ ಒಂದಿಷ್ಟ ಸಮಾಜಿಕ ಕೆಲಸನೂ ಮಾಡತಿರ್ತೇನಿ ಆ ಮಾತ ಬ್ಯಾರೆ. ಅಂದರ ಊರ ಉಸಾಬರಿ ಅನ್ನರಿ.
ಮನ್ಯಾಗ ಸದ್ಯೇಕ ಒಂದ ಹೆಂಡ್ತಿ ಎರಡ ಮಕ್ಕಳನ ಕಟಗೊಂಡ ನಮ್ಮವ್ವನ ನೇತೃತ್ವದೊಳಗ ಸಂಸಾರ ನಡಸಿಗೋತ ಹೊಂಟೇನಿ.
|
|
| |
|
|
|
|
|
|
|
|
|