|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಪ್ಪು ಮೋಡಗಳು ಕರಗಿ ಭೂಮಿಗಿಳಿದ ದಿಕ್ಕಿನತ್ತ ಹಾರುವ ವಲಸೆ ಹಕ್ಕಿಗಳಂತೆ ಬದುಕು ಹುಡುಕಿ ಊರುಕೇರಿಗಳತ್ತ ಚದುರಿ ಹೋಗುವ ಅಲೆಮಾರಿ ಜನಾಂಗ. ಅವರ ಆಚಾರ, ವಿಚಾರ, ನಂಬಿಕೆ, ಮೂಢನಂಬಿಕೆಗಳೆಲ್ಲ ಶ್ರೀ ಕುಪ್ಪೆ ನಾಗರಾಜ ಅವರ ಆತ್ಮಕಥೆಯ ಕವಚದಲ್ಲಿ ಅನಾವರಣಗೊಂಡಿರುವುದು ವಿಶೇಷ. ಸಮುದಾಯವನ್ನು ಮುಖ್ಯವಾಹಿನಿಗೆ ಕರೆತರುವ ಸರ್ಕಾರದ ಪ್ರಯತ್ನ, ಬದಲಾವಣೆಯನ್ನು ಒಪ್ಪಿಕೊಳ್ಳಲಾಗದೆ ಗೊಂದಲಕ್ಕೆ ಸಿಕ್ಕಿಬೀಳುವ ಸಂಸ್ಕೃತಿ, ಅವರ ಅಸಹಾಯಕತೆ, ಸಂಕಷ್ಟ - ಸವಾಲುಗಳೆಲ್ಲ ಸಹಜ ನಿರೂಪಣೆಯಿಂದ ಓದುಗನ ಮನ ಕಲುಕುತ್ತವೆ. ಅಧ್ಯಯನದ ಹಿಡಿತಕ್ಕೆ ಎಂದೂ ಸುಲಭವಾಗಿ ತೆರೆದುಕೊಳ್ಳದ ಅಲೆಮಾರಿಗಳ ಬದುಕಿನ ಒಳನೋಟ ಸಮಾಜ ವಿಜ್ಞಾನಿಗಳಿಗೆ ಉಚಿತ ಉಡುಗೊರೆಯಾಗಬಹುದು. ಇದಲ್ಲದೆ ಮೀಸಲಾತಿ ಏಕೆ ಬೇಕು? ಎಂದು ನಗರದ ಬೀದಿಗಳಲ್ಲಿ ನಿಂತು ಚರ್ಚಿಸುವ ವರ್ಗಕ್ಕೆ ಈ ಕೃತಿಯ ಅಂತರಾಳ ಉತ್ತರವಾಗಬಹುದು.
|
ಶ್ರೀ ಕುಪ್ಪೆ ನಾಗರಾಜ ಸಮಾಜದ ಅಲಕ್ಷಿತ ಸಮುದಾಯದ ಕುಟುಂಬವೊಂದರಲ್ಲಿ ಬಂದವರು. ಸ್ವ-ಸಾಮರ್ಥ್ಯದಿಂದ ಆಶ್ರಮ ಶಾಲೆಯಲ್ಲಿ ಕಲಿತು ವಿದ್ಯಾಭ್ಯಾಸ ಮಾಡಿದವರು. ವಿದ್ಯಾರ್ಥಿ ದೆಸೆಯಿಂದಲೇ ದಲಿತ ಮತ್ತು ಪ್ರಗತಿಪರ ಚಳುವಳಿಗಳಲ್ಲಿ ಭಾಗಿ. ಇದೀಗ ಕರ್ನಾಟಕ ಖಜಾನೆ ಇಲಾಖೆಯಲ್ಲಿ ಪತ್ರಾಂಕಿತ ಉಪಖಜಾನಾಧಿಕಾರಿ. ಅಲಕ್ಷಿತ ಅಲೆಮಾರಿ ಸಮುದಾಯವನ್ನು ಸಂಘಟಿಸುವಲ್ಲಿ ಸಕ್ರಿಯ ಪಾತ್ರ. ಅಲೆಮಾರಿ ಸಿರಿ, ಸುವರ್ಣ ಕನ್ನಡಿಗ, ಬೋಧಿವರ್ಧನ ಇವರಿಗೆ ದೊರೆತ ಪ್ರಶಸ್ತಿಗಳು.
|
|
| |
|
|
|
|
|
|
|
|