|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
`ಆಲದ ಮರದ ಕೆಳಗೆ` ನಾರಾಯಣ್ ಅವರ ಪ್ರಸಿದ್ಧ ಕಥಾ ಸಂಕಲನ. ಇದೇ ಶೀರ್ಷಿಕೆ ಇರುವ ಕತೆಯಲ್ಲಿ ನಂಬಿ ಎಂಬ ಪಾತ್ರವನ್ನು ಸೃಷ್ಟಿಸುವ ಮೂಲಕ ಅವರು ಅನಾದಿ ಕಾಲದಿಂದ ನಮ್ಮಲ್ಲಿರುವ ಕತೆ ಹೇಳುವ ಪರಂಪರೆಯನ್ನು ಬೆಳಗಿಸಿದ್ದಾರೆ. ಕೇವಲ ಐದಾರು ಪುಟಗಳಷ್ಟೇ ಇರುವ ಈ ಸಂಕಲನದ 28 ಕತೆಗಳುಗೆ ನಮ್ಮ ಕಾಲದ ಹಳ್ಲಿಗಳು ಮತ್ತು ನಗರಗಳು ಕ್ರಿಯಾಕ್ಷೇತ್ರಗಳಾಗಿವೆ. ಇವು ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಸಮಾಜದ ನ್ಯಾಯಾನ್ಯಾಯಗಳನ್ನು ಪರಿಶೀಲಿಸುತ್ತವೆ. ಕೆಲವು ಕತೆಗಳ ಕಥಾ ಸಂವಿಧಾನದಲ್ಲಿ ಹಾಸುಹೊಕ್ಕಾಗಿರುವುದು ಸೂಕ್ಷ್ಮ ವ್ಯಂಗ್ಯ. ಜೊತೆಗೆ ಇಲ್ಲಿನ ಪಾತ್ರಗಳಿಗೆ ಹಾಗೂ ಸನ್ನಿವೇಶಗಳಿಗೆ ನಾರಾಯಣ್ ಸೃಷ್ಟಿಸಿದ ಮಾಲ್ಗುಡಿಯ ಸ್ಪರ್ಶವಿದ್ದು ಅದು ದೇಸಿ ಜನಜೀವನವನ್ನೂ ಸಂಸ್ಕೃತಿಯನ್ನೂ ಪದಿಮೂಡಿಸಬಲ್ಲ ಸಾರ್ಥಕ ಪ್ರತೀಕವಾಗಿದೆ. ಪುಟ ತೆರೆದೊಡನೆ ಓದುಗರ ಮನಸ್ಸನ್ನು ಸೆರೆಹಿಡಿದು ಓದಿಸಿಕೊಳ್ಳುವ ಈ ಕತೆಗಳಲ್ಲಿ ತಿಳಿಯಾದ ಹಾಸ್ಯವಿದೆ, ಉದಾರವಾದೀ ಮನೋಧರ್ಮವಿದೆ, ಮಾಗಿದ ಚೇತನವೊಂದರ ಅನನ್ಯ ಜೀವನದರ್ಶನವಿದೆ.
|
| | |
|
|
|
|
|
|
|
|