|
|
|

| Rs. 85 | 10% |
Rs. 77/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮೊದಲ ಲೇಖನ ‘ಬಿಂದು’ವಿನಿಂದ ಪ್ರಾರಂಭಿಸಿ ಗಣಿತದಲ್ಲಿ ಬೆಚ್ಚಿಬೀಳಬಹುದಾದ ಹಲವು ಆಯಾಮಗಳನ್ನು ವಿವರಿಸಿ, ಬೆರಗುಗೊಳಿಸುವ ಗಣಿತದ ವಿಸ್ಮಯಲೋಕವೊಂದನ್ನು ನಮಗೆ ತಿಳಿಸಿಕೊಡುವ ಕೃತಿಯಿದು. ಗಣಿತದಲ್ಲಿ ಶೂನ್ಯಕ್ಕೆ ಪ್ರಾಧಾನ್ಯ ಬಹಳ. ಗಣಿತವೆಂದರೆ ಅದೊಂದು ಕರಾರುವಾಕ್ಕಾದ ಲೆಕ್ಕಾಚಾರ, ಅದಕ್ಕೆ ಪುಟ್ಟದು - ದೊಡ್ಡದು ಎಂಬ ತಾರತಮ್ಯವಿಲ್ಲ; ಎಲ್ಲವನ್ನೂ ಅದು ಕೂಡಿ-ಕಳೆದು-ಗುಣಿಸಿ-ಭಾಗಿಸುತ್ತದೆ - ಬ್ರಹ್ಮಾಂಡವನ್ನಷ್ಟೆ ಅಲ್ಲ; ಪರಮಾಣುವನ್ನೂ ಸಹ - ಇಂಥ ಹೇಳಿಕೆಯನ್ನೇ ಗಣಿತಲೋಕ ತಲೆಕೆಳಗಾಗಿ ಮಾಡಿಬಿಡಬಲ್ಲದಲ್ಲವೇ ? ಅಗಣಿತವೂ ಅನಂತವೂ ಆದ ಗಣಿತಲೋಕದಲ್ಲಿ ವಿಹಾರ ಹೊರಟರೆ ವಿಸ್ಮಯಗಳೂ - ಚಮತ್ಕಾರಗಳು - ಮನರಂಜನಾ ಸಾಧನಗಳೂ ಅಡಿಗಡಿಗೆ ನಿಮಗೆದುರಾಗುತ್ತವೆ. ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಹಿಡಿಯುವುದೇ ನಿಮಗೆ ಸವಾಲಾಗುತ್ತದೆ. ಇದುವರೆಗೂ ಗಣಿತ ವಿಜ್ಞಾನಿಗಳು ಜಾಗತಿಕ ಮಟ್ಟದಲ್ಲಿ ತಲೆಕೆಡಿಸಿಕೊಂಡಿದ್ದೂ ಸಹ ಇದಕ್ಕಾಗಿಯೇ - ಓದಿ ಖುಷಿಪಡುವಂಥ ಲೇಖನಗಳು ಸ್ವಾರಸ್ಯವಾಗಿವೆ.
|
ರೋಹಿತ್ ಚಕ್ರತೀರ್ಥ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಪ್ರವಾಸಿ. ನಾಟಕ, ಜನಪದ, ಛಾಯಾಗ್ರಹಣ - ಇನ್ನಿತರ ಆಸಕ್ತಿಗಳು.
|
|
| |
|
|
|
|
|
|
|
|
|