|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕೃತಿ ಕುರಿತು : ಪತ್ರಿಕೋದ್ಯಮದಲ್ಲಿನ ನನ್ನ 20 ವರ್ಷಗಳ ಅನುಭವಕ್ಕೆ ಅಕ್ಷರ ರೂಪ ನೀಡಲಾಗಿದೆ. ದೀಪದ ಕೆಳಗಿನ ಕತ್ತಲೆಗೆ ಬೆಳಕು ಹಿಡಿಯುವ ಬರಹಗಳು ಕೃತಿಯ ಜೀವಾಳವಾಗಿವೆ, ಪತ್ರಕರ್ತನಿಗೆ ಎದುರಾಗುವ ಸಂದಿಗ್ಧತೆಗಳು, ಹೋರಾಟದ ಹಾದಿ, ಬದುಕಿನ ಅನಿವಾರ್ಯ, ವಿಜೃಂಭಿಸುವ ಸುಳ್ಳುಗಳು, ರಾಜಕಾರಣಿಗಳೊಂದಿಗೆ ಒಡನಾಟ, ಅಪರಾಧ ವೈಭವೀಕರಣ ಮತ್ತು ಸಭ್ಯ ಸಮಾಜ ನಿರ್ಮಾಣ ಸೇರಿದಂತೆ ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆ ಅನುಭವಗಳು ಇವುಗಳಲ್ಲದೇ ಕೃತಿಯಲ್ಲಿ ಮಾಧ್ಯಮಕ್ಕೆ ಸೀಮಿತಗೊಂಡ ಹೋರಾಟ ಮತ್ತು ಜಯಂತಿಗಳು, ಗ್ರಾಮೀಣ ಪತ್ರಕರ್ತರ ಸಂಕಷ್ಟ ಸವಾಲು, ವಿತರಕರು ಏಜೆಂಟರಿಗೆ ಮಾನ್ಯತೆ ಹಾಗೂ ಆದರ್ಶ ಪತ್ರಕರ್ತರನ್ನು ಸಮಾಜಕ್ಕೆ ಪರಿಚಯಿಸುವ ಪ್ರಯತ್ನವನ್ನು ಮೂಡಿಸುವ ಪ್ರಯತ್ನವಾಗಿದೆ. ಕೃತಿಯಲ್ಲಿ ಸಾಹಿತ್ಯಕ್ಕಿಂತಲೂ ಸತ್ಯತೆಗೆ, ವ್ಯಕ್ತಿಗಿಂತಲೂ ವ್ಯಕ್ತಿತ್ವಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕೃತಿ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಂಗಾಯಣ ಮಾಜಿ ನಿರ್ದೇಶಕ ಜನಾರ್ಧನ್, ಹಿರಿಯ ಛಾಯಾಗ್ರಾಹಕ ಪ್ರಗತಿ ಗೋಪಾಲಕೃಷ್ಣ, ವಿಜಯವಾಣಿ ಮೈಸೂರು ಬ್ಯೂರೋ ಮುಖ್ಯಸ್ಥ ಸಿ.ಕೆ.ಮಹೇಂದ್ರ, ಸೋಸಲೆ ಸಿದ್ದರಾಜು ಹಾಜರಿದ್ದರು. (ವರದಿ : ಕೆ.ಎಂ.ಆರ್, ಎಲ್.ಜಿ)
|
| |
|
|
|
|
|
|
|
|