|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಭಾರತೀಯ ಕಮ್ಯುನಿಸ್ಟ್ ಇತಿಹಾಸದಲ್ಲಿ ಶ್ರಮಜೀವಿಗಳ ರಕ್ಷಣೆಗಾಗಿ ಹೋರಾಡಿದ ಬಡವರ ದಂಡನಾಯಕ ಅಯ್ಯಿಲ್ಯಾತ್ ಕುಟ್ಟಿಯಾರಿ ಗೋಪಾಲನ್ ಶಾಲಾಮಾಸ್ತರರಾಗಿದ್ದಾಗ ಮಹಾತ್ಮ ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಖಿಲಾಫತ್ ಚಳವಳಿಯಲ್ಲಿ ಭಾಗವಹಿಸಿದರು. ಈ ಚಳವಳಿಯು ಗೋಪಾಲನ್ ಅವರ ಮೇಲೆ ಅಪಾರ ಪರಿಣಾಮ ಬೀರಿತು. ಅವರು ಮಾಸ್ತರ್ ಕೆಲಸವನ್ನು ಬಿಟ್ಟು ಪೂರ್ಣಾವಧಿ ಸಾಮಾಜಿಕ ಹಾಗೂ ರಾಜಕೀಯ ಕಾರ್ಯಕರ್ತರಾದರು. 1927ರಲ್ಲಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಸೇರಿದರು. 1930ರ ದಂಡಿಯಾತ್ರೆಯಲ್ಲಿ ಪಾಲುಗೊಂಡು ಬಂಧನಕ್ಕೊಳಗಾದರು. ಗೋಪಾಲನ್ ಅವರು ಜೈಲಿನಲ್ಲಿದ್ದಾರೆ ಅವರಿಗೆ ಕಮ್ಯುನಿಸಂ ಪರಿಚಯ ಮೊದಲಬಾರಿಗೆ ಆಯಿತು. ಗೋಪಾಲನ್ ಅವರಂತಹ ಕಾರ್ಯಕರ್ತರಿಂದ ಕಮ್ಯುನಿಸಂ ಕೇರಳದಲ್ಲಿ ಬಲವಾಗಿ ಬೇರು ಬಿಡುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಮೊದಲ ಬಾರಿಗೆ ಲೋಕಸಭೆ ರೂಪುಗೊಂಡಾಗ ಗೋಪಾಲನ್ ವಿರೋಧ ಪಕ್ಷದ ನಾಯಕರಾಗುತ್ತಾರೆ. 1964ರಲ್ಲಿ ಸಿಪಿಐ ಒಡೆದಾಘ ಗೋಪಾಲನ್ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯ (ಮಾರ್ಕಿಸ್ಟ್)ವನ್ನು ಕಟ್ಟಿ ಹೊಸ ಇತಿಹಾಸವನ್ನು ಬರೆಯುತ್ತಾರೆ.
|
| |
|
|
|
|
|
|
|
|
|