Items
0
Total
  0.00 
Welcome Guest.

 
Rs. 300    
10%
Rs. 270/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 320
ಪುಸ್ತಕದ ಗಾತ್ರ : 1/8 Demy Size
ಕೋಡ್ : 1105059

ಅಭಿನವ ಪ್ರಕಟಿಸಿರುವ ಕೆ. ಸತ್ಯನಾರಾಯಣ ಅವರ ಆತ್ಮವೃತ್ತಾಂತದ ಮೂರನೆಯ ಭಾಗ `ವೃತ್ತಿ ವಿಲಾಸ` ಇದೀಗ ಮುದ್ರಣಗೊಂಡು ಹೊರಬಂದಿದೆ. ಸಧ್ಯದಲ್ಲೇ ಮಾರುಕಟ್ಟೆಗೆ ಬರಲಿದೆ.
ಮೊದಲನೆಯ ಭಾಗ `ನಾವೇನು ಬಡವರಲ್ಲ`(ಎರಡು ಮುದ್ರಣ) ಎರಡನೆಯ ಭಾಗ `ಸಣ್ಣ ಪುಟ್ಟ ಆಸೆಗಳ ಆತ್ಮಚರಿತ್ರೆ` ಕೃತಿಗಳನ್ನೂ ಅಭಿನವ ಪ್ರಕಟಿಸಿದೆ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ ಆಸಕ್ತರು ಖರೀದಿಸಿ.

ಇದು ನನ್ನ ಆತ್ಮಕಥಾನಕದ ಮೂರನೆಯ ಭಾಗ. `ನಾವೇನು ಬಡವರಲ್ಲ`, `ಸಣ್ಣಪುಟ್ಟ ಆಸೆಗಳ ಆತ್ಮ ಚರಿತ್ರೆ` ಎಂಬ ಮೊದಲ ಎರಡು ಭಾಗಗಳು ಈಗಾಗಲೇ ಓದುಗರ ಕೈ ಸೇರಿದ್ದು – ಓದುಗರಿಂದ ಒಳ್ಳೆಯ ಉತ್ತೇಜಕ ಪ್ರತಿಕ್ರಿಯೆ ಪಡೆದಿದೆ. ಇದಕ್ಕಾಗಿ ನಾನು ಓದುಗರಿಗೆ ಆಭಾರಿಯಾಗಿದ್ದೇನೆ.
ಈ ಭಾಗವು ನನ್ನ ದೀರ್ಘಕಾಲದ ಸರ್ಕಾರಿ ಸೇವೆಯ ವೃತ್ತಿ ಸಂಬಂಧಿ ಅನುಭವಗಳನ್ನು ಕುರಿತದ್ದಾಗಿದೆ. ಮೊದಲನೆಯ ಭಾಗವು ಬಾಲ್ಯ ಜೀವನದ ಗ್ರಾಮಾಂತರ ಅನುಭವ ಮತ್ತು ನಂತರದ ದೊಡ್ಡ ಪಟ್ಟಣಗಳ ಹಿನ್ನೆಲೆಯಲ್ಲಿ ನಮ್ಮ ಕಾಲದ ಸಾಮಾಜಿಕ ನಂಬಿಕೆ, ಪ್ರಮೇಯಗಳನ್ನು ಶೋಧಿಸಿಲು ಪ್ರಯತ್ನ ಪಟ್ಟರೆ; ಎರಡನೆಯ ಭಾಗವು ಬಾಲ್ಯದ ಯೌವ್ವನದ ಸಣ್ಣಪುಟ್ಟ ಜೀವಂತ ಆಸೆಗಳನ್ನು ಕುರಿತದ್ದಾಗಿತ್ತು. ಈ ಎರಡೂ ಬರವಣಿಗೆಗಳ ವಿಶಿಷ್ಟತೆ, ಹೊಸತನವನ್ನು ಓದುಗರು ಮೆಚ್ಚಿದ್ದು ನನಗೆ ಸಂತೋಷವನ್ನುಂಟುಮಾಡಿತು. `ನಾವೇನು ಬಡವರಲ್ಲ` ಮೂರು ವರ್ಷಗಳಲ್ಲಿ ಪುನರ್ಮುದ್ರಣ ಕಂಡಿದೆ. `ಸಣ್ಣಪುಟ್ಟ ಆಸೆಗಳ ಚರಿತ್ರೆ` ಎರಡನೆಯ ಮುದ್ರಣ ಕಾಣುವ ಸೂಚನೆಗಳು ಕಾಣುತ್ತಿವೆ.
ಆತ್ಮಕಥಾನಕದ ಮೂರು ಭಾಗಗಳನ್ನು ತಮ್ಮದೆಂದೇ ಪ್ರಕಟಿಸಿ, ನನ್ನನ್ನು ಪ್ರೋತ್ಸಾಹಿಸಿದ ಆತ್ಮೀಯರಾದ ರವಿಕುಮಾರ್, ಚಂದ್ರಿಕಾ, ಕೃಷ್ಣ ಚೆಂಗಡಿ ಇವರಿಗೆ ಕೃತಜ್ಞತೆಗಳು.
ರವಿಕುಮಾರ್ ಪ್ರಕಾಶಕರ ಪಾತ್ರವನ್ನೂ ಮೀರಿ, ಈ ಪುಸ್ತಕದ ಬರವಣಿಗೆಯ ವಿವಿಧ ಹಂತಗಳಲ್ಲಿ ನನ್ನನ್ನು ಹಲವು ರೀತಿಯಲ್ಲಿ ಪ್ರೇರೇಪಿಸಿದ್ದಾರೆ. ಓದುಗರ ನಾಡಿ ಮಿಡಿತವನ್ನು ಚೆನ್ನಾಗಿ ಬಲ್ಲ ಅವರ ಸಲಹೆ-ಸೂಚನೆಗಳಿಂದ ನನಗೆ ಬರೆಯುವ ಉತ್ಸಾಹ, ಶ್ರದ್ಧೆ ಹೆಚ್ಚಿದೆ.
ಈ ಭಾಗದಲ್ಲಿ ಬರೆದಿರುವ ಎಲ್ಲ ಅನುಭವಗಳು ನನ್ನವಲ್ಲ. ಕೆಲವು ನನ್ನ ಸಹೋದ್ಯೋಗಿಗಳದ್ದು, ಇನ್ನು ಕೆಲವು ಕೇಳಿದ್ದು. ಇಷ್ಟೊಂದು ಜನಸಂಪರ್ಕ ಬಂದಿರುವ ನಾನೊಬ್ಬ ವಿಶೇಷ ವ್ಯಕ್ತಿಯೆಂಬ ಭಾವನೆ ಓದುಗರಲ್ಲಿ ಮೂಡಿಬಂದರೆ ಅದು ತಪ್ಪು. ನನಗಿಂತಲೂ ಹೆಚ್ಚು ಮತ್ತು ಸೂಕ್ಷ್ಮವಾದ ಜನಸಂಪರ್ಕ ಪಡೆದ, ನಾಗರಿಕರ ಬಗ್ಗೆ ಹೆಚ್ಚು ಸಹಾನುಭೂತಿ, ಪ್ರೀತಿ ಹೊಂದಿದ, ನನಗಿಂತಲೂ ಹೆಚ್ಚು ಪ್ರಾಮಾಣಿಕರಾಗಿ, ನಿಸ್ಪøಹರಾಗಿ ದುಡಿದ ಸಹೋದ್ಯೋಗಿಗಳು/ಹಿರಿಯ ಅಧಿಕಾರಿಗಳ ಪರಿಚಯ ನನಗೆ ಇದೆ. ಆದರೆ ಅವರಿಗೆ ಬರವಣಿಗೆಯಲ್ಲಿ ಆಸಕ್ತಿ ಇರಬೇಕಲ್ಲ! ಮುಖ್ಯವಾದ ಮಾತೆಂದರೆ ಇಂತಹವರ ದೃಷ್ಟಿಕೋನವೂ ಈ ಕೃತಿಯಲ್ಲಿ ಅಂತರ್ಗತವಾಗಿದೆಯೆಂದು ನಂಬಿದ್ದೇನೆ.
ಈ ಭಾಗದಲ್ಲಿ ಪ್ರಸ್ತಾಪಿಸಿರುವ ಬಹುಪಾಲು ವ್ಯಕ್ತಿಗಳು ಈಗ ನನ್ನ ಸಂಪರ್ಕದಲ್ಲಿಲ್ಲ. ಇವರೆಲ್ಲ ನನ್ನ ಜೀವನದಲ್ಲಿ ಬಂದು ಹೋದವರು. ಹಾಗೆಂದು ಅವರು ಕೂಡ ನನ್ನ ಬಗ್ಗೆ ಹೇಳಬಹುದು, ಹೇಳುತ್ತಾರೆ. ಕಾಲ-ದೇಶಗಳ ಚಲನೆ -ಪ್ರವಾಹದಲ್ಲಿ-ಹೀಗೆ ಎಲ್ಲರೂ ಎಲ್ಲರಿಂದಲೂ ವಿಮುಖರಾಗುತ್ತಾ ಹೋಗುವುದು. ಹಾಗಿದ್ದೂ ನಾವೆಲ್ಲ ಒಂದೇ ಕಾಲ, ಒಂದೇ ದೇಶಕ್ಕೆ ಸೇರಿರುವುದೇ ಬದುಕಿನ ಸೊಗಸು. ಬದುಕು ಯಾವಾಗಲೂ ಚಲನೆಯಲ್ಲಿರುತ್ತದೆ. ಚಲನೆಯಲ್ಲಿದ್ದರೂ ಇದ್ದ ಕಡೆಯೇ ಇರುತ್ತದೆ. ಹೋಗಿ ತಲುಪುವ ಸ್ಥಳ ಕೂಡ ಹಿಂದಿನ ಸ್ಥಳದಂತೆಯೇ ಇರುತ್ತದೆ. ನಾವು ಬಲ್ಲವರೆಲ್ಲ ನಮ್ಮ ಮನಸ್ಸಿನಲ್ಲಂತೂ ಇದ್ದೇ ಇರುತ್ತಾರೆ. ನಾವು ಹೋಗುವ ಮುಂದಿನ ಜಾಗದಲ್ಲೂ, ಎಲ್ಲ ಜಾಗಗಳನ್ನೂ ಮೀರಿದ ಪ್ರಪಂಚದಲ್ಲೂ ಕೂಡ. ಆದರೆ ಇವರೆಲ್ಲ ನಮಗೆ ಸಿಕ್ಕಿದ್ದ ಹಿಂದಿನ ಪ್ರಪಂಚದಲ್ಲೂ ಇನ್ನೂ ಇದ್ದಾರೆ- ಯಾರ ಕೈಗೂ ಸಿಗದೆ. ನಾವು ಬಲ್ಲವರನ್ನೆಲ್ಲ, ಕಂಡು ಕೇಳಿದ ಅನುಭವವನ್ನೆಲ್ಲ ಬರವಣಿಗೆಯಲ್ಲಿ ಹಿಡಿದಿಡುತ್ತೇವೆಂದು ಭಾವಿಸುವುದು ಒಂದು ಭ್ರಮೆ. ನಮ್ಮ ಬರವಣಿಗೆಯಲ್ಲಿ ದಾಖಲಾದ ಮೇಲೂ-ಇವರೆಲ್ಲರಿಗೂ ಇನ್ನೂ ಒಂದು ಸ್ವತಂತ್ರವಾದ, ಕಾಲಾತೀತವಾದ ಅಸ್ತಿತ್ವವಿದ್ದೇ ಇರುತ್ತದೆ-ಅದನ್ನು ಮನಸ್ಸಿನಲ್ಲಿಟ್ಟು ಕೊಂಡೇ ಈ ಬರವಣಿಗೆಯನ್ನು ಓದಬೇಕು.ಇದನ್ನು ನನ್ನ ವೃತ್ತಿ ಜೀವನದ ಆತ್ಮಚರಿತ್ರೆಯೆಂದು ಯಾರೂ ಭಾವಿಸಬಾರದು. ಅಂತಹ ಆತ್ಮಚರಿತ್ರೆಯನ್ನು ಶೋಧಿಸುವ ಒಂದು ಪ್ರಯತ್ನ ಮಾತ್ರ ಎಂದು ಭಾವಿಸಬಹುದು. ದೇಶದ ಮತ್ತು ಸಮಾಜದ ಚರಿತ್ರೆ ಕೂಡ ವಾಸ್ತವದಲ್ಲಿ ಇರುವಂತದಲ್ಲ, ನಾವು ಶೋಧಿಸಿದ್ದು, ಕಟ್ಟಿದ್ದು, ಕಲ್ಪಿಸಿದ್ದು ಮಾತ್ರ ಚರಿತ್ರೆಯಾಗುತ್ತದೆ. ಇಲ್ಲಿನ ಈ ಬರವಣಿಗೆಗೂ ಈ ಮಾತು ಅನ್ವಯಿಸುತ್ತದೆ.
ಇಲ್ಲಿನ ಬರವಣಿಗೆಯಲ್ಲಿ ಕೆಲವು ಪ್ರಸಂಗಗಳು, ವ್ಯಕ್ತಿಗಳು ಹೇಗೆ ಕೆಲವು ಕಥೆಗಳಿಗೆ ಕಾರಣವಾದುವು ಎಂಬುದನ್ನು ಅಲ್ಲಲ್ಲಿ ಸೂಚಿಸಿದ್ದೇನೆ. ಇನ್ನೂ ಎಷ್ಟೋ ಪ್ರಸಂಗಗಳು ಒಳ್ಳೆಯ ಕಥೆಯಾಗಿ ಇಲ್ಲ ಪ್ರಬಂಧವಾಗಿ ರೂಪುಗೊಳ್ಳಬಲ್ಲವು ಎಂಬುದು ನಿಜ. ಆದರೆ ಎಷ್ಟು ದಿನ ಸುಮ್ಮನೆ ಕಥೆಗಳನ್ನು ಬರೆಯುತ್ತಲೇ ಹೋಗುವುದು? ಕಥನದ ಓದುಗ ಸ್ನೇಹಿಗುಣ ಮತ್ತು ಪ್ರಬಂಧ ಪ್ರಕಾರದ ಲಹರಿ ಹಾಗೂ ಸ್ವಚ್ಛಂದತೆ ಎರಡನ್ನೂ ಇಲ್ಲಿ ಬಳಸಿಕೊಂಡಿದ್ದೇನೆ. ಈ ಮೂರನೆಯ ಭಾಗವನ್ನು ಕೂಡ ಓದುಗರು ಪ್ರೋತ್ಸಾಹಿಸುತ್ತಾರೆಂದು ನಂಬಿದ್ದೇನೆ.

ಲೇಖಕರ ಇತರ ಕೃತಿಗಳು
10%
ನಿಜವಾದ ಸೋದರಮಾವ ಅಥವಾ... ....
ಸತ್ಯನಾರಾಯಣ ಕೆ, Satyanarayana K
Rs. 110    Rs. 99
10%
ವೈವಿಧ್ಯ - ಸಾಹಿತ್ಯಕ ....
ಸತ್ಯನಾರಾಯಣ ಕೆ, Satyanarayana K
Rs. 250    Rs. 225
10%
ಸ್ಕೂಲು ಬಿಡುವ ಸಮಯ ....
ಸತ್ಯನಾರಾಯಣ ಕೆ, Satyanarayana K
Rs. 250    Rs. 225
10%
ಜಾರ್ಜ್ ಆರ್ವೆಲ್ : ....
ಸತ್ಯನಾರಾಯಣ ಕೆ, Satyanarayana K
Rs. 150    Rs. 135
Best Sellers
ಮನಸ್ಸೇ ರಿಲ್ಯಾಕ್ಸ್ ಪ್ಲೀಸ್—ಭಾಗ-2
ಸ್ವಾಮಿ ಸುಖಬೋಧಾನಂದ, Swami Sukhabodhanahda
Rs. 180/-   Rs. 200
ಕುಮಾರವ್ಯಾಸ ಕಥಾಂತರ - ಅರಣ್ಯ ಪರ್ವ ವಿರಾಟ ಪರ್ವ
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 225/-   Rs. 250
Cambridge Advanced learners Dictionary (CD-Rom)
Colin Mclntost
Rs. 626/-   Rs. 695
ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು - ಭಾಗ - 2
ಗಿರಿಮನೆ ಶ್ಯಾಮರಾವ್, Girimane Shyamarao
Rs. 108/-   Rs. 120

Latest Books
ನಿರ್ದಿಗಂತವಾಗಿ ಏರಿ : ಕನ್ನಡ ಕಾದಂಬರಿ ವಿಮರ್ಶೆಯ ವಿಮರ್ಶೆ
ಸುಭಾಷ್ ರಾಜಮಾನೆ, Shubash Rajamane
Rs. 221/-   Rs. 245
ಇದು ಕಥಾಕಾಲ : ಕತೆಗಳು (ಭಾಗ 2)
ಗಂಗಾವತಿ ಬಿ ಪ್ರಾಣೇಶ್, Gangavathi Pranesh
Rs. 135/-   Rs. 150
ಟಾಲ್ ಸ್ಟಾಯ್ ಅವರ ಕಥೆಗಳು
ಲೆವ್ ಟಾಲ್‌ಸ್ಟಾಯ್, Leo Tolstoy
Rs. 252/-   Rs. 280
ಮಂದಾರ ಕುಸುಮ : ಸಾಮಾಜಿಕ ಕಾದಂಬರಿ
ಸಾಯಿಸುತೆ, Saisuthe
Rs. 86/-   Rs. 95


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.