|
|

| Rs. 25 | 10% |
Rs. 23/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವಿಕ್ರಮ್ ಸಾರಾಭಾಯಿ ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ! 1966ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿ ಹಾಗೂ 1972ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯು ಮರಣೋತ್ತರವಾಗಿ ದೊರೆಯಿತು. ವಿಕ್ರಮ್ ಸಾರಾಭಾಯಿ ಶಾಸ್ತ್ರೀಯ ನೃತ್ಯಪಟು ಮೃಣಾಲಿನಿ ಸಾರಾಭಾಯಿಯವರನ್ನು ಮದುವೆಯಾದರು. ಇವರಿಗೆ ಇಬ್ಬರು ಮಕ್ಕಳು. ಕಾರ್ತಿಕೇಯ ಸಾರಾಭಾಯಿ ಹಾಗೂ ಮಲ್ಲಿಕಾ ಸಾರಾಭಾಯಿ. ಒಂದು ವಿಶೇಷವೆಂದರೆ ಇವರೆಲ್ಲರೂ ಪದ್ಮಪ್ರಶಸ್ತಿ ವಿಜೇತರು. ಮೃಣಾಲಿನಿ ಸಾರಾಭಾಯಿಯವರಿಗೆ ಪದ್ಮಭೂಷಣ, ಮಲ್ಲಿಕಾ ಸಾರಾಭಾಯಿಯವರಿಗೆ ಪದ್ಮಭೂಷಣ ಹಾಗೂ ಕಾರ್ತಿಕೇಯ ಸಾರಾಭಾಯಿಯವರಿಗೆ ಪದ್ಮಶ್ರೀ ಪ್ರಶಸ್ತಿಗಳು ದೊರೆತಿವೆ.
ತುಂಬಾ ರಾಕೆಟ್ ಉಡ್ಡಯನ ಕೇಂದ್ರವನ್ನು ‘ವಿಕ್ರಮ್ ಸಾರಾಭಾಯಿ ರಾಕೆಟ್ ಉಡ್ಡಯನ ಕೇಂದ್ರ‘ ಎಂದು ಮರುನಾಮಕರಣ ಮಾಡಿದ್ದೇವೆ. ಚಂದ್ರನ ಒಡಲ ಮೇಲೆ ಪ್ರಶಾಂತಿಯ ಕಡಲು ಎನ್ನುವ ಪ್ರದೇಶದಲ್ಲಿರುವ ಒಂದು ಕುಳಿಗೆ ‘ಸಾರಾಭಾಯಿ ಕುಳಿ‘ ಎಂದು ನಾಮಕರಣ ಮಾಡುವ ಮೂಲಕ ವಿಶ್ವ ವಿಜ್ಞಾನ ಸಮುದಾಯವೂ ಸಾರಾಭಾಯಿಯವರಿಗೆ ಗೌರವವನ್ನು ಸೂಚಿಸಿದೆ.
|
ರೋಹಿತ್ ಚಕ್ರತೀರ್ಥ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಪ್ರವಾಸಿ. ನಾಟಕ, ಜನಪದ, ಛಾಯಾಗ್ರಹಣ - ಇನ್ನಿತರ ಆಸಕ್ತಿಗಳು.
|
|
| |
|
|
|
|
|
|
|
|
|