Items
0
Total
  0.00 
Welcome Guest.

 
Rs. 100   
10%
 
 
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಚಿಂತನ ಪುಸ್ತಕ, Chinthana Pusthaka
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Demy Size
ISBN : 9789381187098
ಕೋಡ್ : 189382

‘ವೈದಿಕ ಯುಗ’ ಎಂಬ ಶೀರ್ಷಿಕೆಯ ಈ ಸಂಪುಟ ಪ್ರಾಚೀನ ಭಾರತದ ಸಂಕ್ರಮಣ ಕಾಲವೆಂದು ಗುರುತಿಸಲ್ಪಡುವ ಮೌರ್ಯರ ಪೂರ್ವದ ಗತಕಾಲದ ಚರಿತ್ರೆಯಾಗಿದೆ. ಕ್ರಿ.ಪೂ. 1500 ರಿಂದ 700ರ ಅವಧಿಯಲ್ಲಿ ರೂಪಿತಗೊಂಡ ಸಮಾಜದ ವರ್ಗೀಕರಣ, ಆರ್ಥಿಕ ಬದಲಾವಣೆಗಳು, ಧರ್ಮ ಹಾಗೂ ತತ್ವಶಾಸ್ತ್ರಗಳ ಉಗಮ, ಸಮುದಾಯಗಳ ಒಡನಾಟ ಮತ್ತು ಆ ಕಾಲದ ಜೀವನ ಕ್ರಮಗಳನ್ನು ಸ್ಪಷ್ಟ ಹಾಗೂ ಸಂಕ್ಷಿಪ್ತವಾಗಿ ಪ್ರಸ್ತುತ ಪಡಿಸಲು ಲೇಖಕರು ಪ್ರಯತ್ನಿಸಿದ್ದಾರೆ.

ಆ ಕಾಲದಲ್ಲಿ ಸಮಾಜ ಪರಿವರ್ತನೆಯ ಜೊತೆಗೆ ಭೌಗೋಳಿಕತೆಯಲ್ಲಿಯೂ ಬದಲಾವಣೆಗಳು ಕಂಡುಬಂದಿವೆ ಎಂಬ ಐತಿಹಾಸಿಕ ಸತ್ಯವನ್ನು ವಿವಿಧ ಅವಶೇಷಗಳನ್ನು ಆಧರಿಸಿ ವಿವರಿಸಲು ಈ ಸಂಪುಟದಲ್ಲಿ ಪ್ರಯತ್ನಿಸಿರುವುದು ಇಲ್ಲಿಯ ಮತ್ತೊಂದು ವೈಶಿಷ್ಟ್ಯ. ಕೇವಲ ಮೂರು ಅಧ್ಯಾಯಗಳಲ್ಲಿರುವ ಈ ಸಂಪುಟದಲ್ಲಿ ಹಲವಾರು ವೈಚಾರಿಕ ಹಾಗೂ ಸೈದ್ಧಾಂತಿಕ ನಿಲುವುಗಳನ್ನು ಆಧರಿಸಿ ಆ ಸಂಕ್ರಮಣ ಕಾಲದ ಚರಿತ್ರೆಯನ್ನು ನೀಡಿದ್ದಾರೆ. ಪ್ರತಿ ಅಧ್ಯಾಯದ ನಂತರ ಪ್ರತ್ಯೇಕವಾಗಿ ಚರ್ಚೆಗಳ ರೂಪದಲ್ಲಿ ಟಿಪ್ಪಣೆಗಳನ್ನು ನೀಡಿರುವುದು ಚರಿತ್ರೆ ರಚನೆಯ ವಿಧಾನಕ್ಕೆ ನೂತನ ಶೈಲಿಯನ್ನು ಲೇಖಕರು ಪರಿಚಯಿಸಿದ್ದಾರೆ ಎಂದೇ ಹೇಳಬಹುದು.

ಸಾಮಾಜಿಕ, ಆರ್ಥಿಕ, ಧಾರ್ಮಿಕ ಇತ್ಯಾದಿ ಅಂಶಗಳು ವೇದಗಳ ಶ್ಲೋಕಗಳಲ್ಲಿ ಉಲ್ಲೇಖನಗೊಂಡಿರುವುದು ಕಂಡುಬರುತ್ತದೆ. ಲೇಖಕರು ಆಯ್ದ ಕೆಲವು ಶ್ಲೋಕಗಳ ಅನುವಾದಗಳನ್ನು ನೀಡಿರುವುದು ಈ ಸಂಪುಟದ ಓದುಗರಿಗೆ ಪೂರಕ ಮಾಹಿತಿಯಂತಿದೆ. ಒಟ್ಟಿನಲ್ಲಿ ಒಂದು ವಿಶಿಷ್ಟ ಪ್ರಯೋಗವನ್ನು ಚರಿತ್ರೆಯ ಬರವಣಿಗೆಗೆ ಲೇಖಕರು ಪರಿಚಯಿಸಿ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.

ಇರ್ಫಾನ್ ಹಬೀಬ್ ನಮ್ಮ ಕಾಲದ ಶ್ರೇಷ್ಠ ಭಾರತೀಯ ಇತಿಹಾಸ ತಜ್ಞರು ಹಾಗೂ ಮಾರ್ಕ್ಸಿಸ್ಟ್ ದೃಷ್ಟಿಕೋನದಿಂದ ಬರೆಯುವ ಎಡಪಂಥೀಯ ಚಿಂತನೆಯ ಲೇಖಕರಲ್ಲಿ ಪ್ರಮುಖರು. ಅಂತರರಾಷ್ಟ್ರೀಯ ಖ್ಯಾತಿ ಹೊಂದಿರುವ ಇತಿಹಾಸ ಬರಹಗಾರರು - ‘ಭಾರತೀಯ ಐತಿಹಾಸಿಕ ಸಂಶೋಧನಾ ಪರಿಷತ್’ನ ಅಧ್ಯಕ್ಷರಾಗಿದ್ದ ಇವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್. ಮೊಘಲ್ ಇಂಡಿಯಾ, ಬ್ರಿಟಿಷ್ ಇಂಡಿಯಾ, ಮಧ್ಯಕಾಲೀನ ಇಂಡಿಯಾ ಬಗ್ಗೆ ನಿಖರವಾಗಿ ಬರೆಯಬಲ್ಲವರು.

ಲೇಖಕರ ಇತರ ಕೃತಿಗಳು
10%
ಸಿಂಧೂ ನಾಗರಿಕತೆ
ಇರ್ಫಾನ್ ಹಬೀಬ್, Irfan Habib
Rs. 135    Rs. 122
10%
ಮೌರ್ಯರ ಕಾಲದ ಭಾರತ
ಇರ್ಫಾನ್ ಹಬೀಬ್, Irfan Habib
Rs. 160    Rs. 144
10%
ಪ್ರಾಚೀನ ಭಾರತದಲ್ಲಿ ಜಾತಿಗಳ ....
ಇರ್ಫಾನ್ ಹಬೀಬ್, Irfan Habib
Rs. 25    Rs. 23
10%
ರಾಷ್ಟ್ರೀಯ ಆಂದೋಲನ
ಇರ್ಫಾನ್ ಹಬೀಬ್, Irfan Habib
Rs. 100    Rs. 90
Best Sellers
ಪ್ರಾಣಪದಕ - ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ನೆನಪಿನಾಳದಲ್ಲಿ ಡಾ. ರಾಜ್
ಪ್ರಹ್ಲಾದರಾವ್ ಅ ನಾ, Prahlada Rao A n
Rs. 81/-   Rs. 90
ದುಡ್ಡು ಮಾಡುವುದು ಹೇಗೆ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 27/-   Rs. 30
ಧರ್ಮರಾಯನ ಸಂಸಾರ (PB)
ಶಿವರಾಮ ಕಾರಂತ ಕೆ, Shivarama Karantha K
Rs. 158/-   Rs. 175
ಚಿಣ್ಣರ ಮಹಾಭಾರತ
ನಾಗರಾಜ್ ಬಿ, Nagaraj B
Rs. 171/-   Rs. 190

Latest Books
ಗುರುಗಳಾಗಿ ತಾಯಿ - ತಂದೆ
ಗಟ್ಟಿ ಕೆ ಟಿ, Gatti K T
Rs. 158/-   Rs. 175
ವಚನಗಳಲ್ಲಿ ಗಣಿತ
ಮಲ್ಲಿಕಾರ್ಜುನ ಯಾಳವಾರ, Mallikarjuna Yaalavara
Rs. 225/-   Rs. 250
ಹಮಾರಾ ಬಜಾಜ್ : ಕತೆಗಳು
ವಿಕ್ರಮ ಹತ್ವಾರ,Vikram Hatwar
Rs. 135/-   Rs. 150
ಇಡಿ ಕಿಡಿ ಕವನಗಳು
ಡುಂಡಿರಾಜ್ ಎಚ್, Dundiraj H
Rs. 176/-   Rs. 195


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.