Items
0
Total
  0.00 
Welcome Guest.

 
Rs. 150
10%
Rs. 135/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 232
ಪುಸ್ತಕದ ಗಾತ್ರ : 1/8 Demy Size
ISBN : 9788184672411
ಕೋಡ್ : 001831

ವಿಜ್ಞಾನಿ ಎಂಬ ಪದ ಸಾಮಾನ್ಯವಾಗಿ ಚಿತ್ರವಿಚಿತ್ರ ಹೊಗೆಗಳನ್ನು ಉಗುಳುತ್ತಿರುವ ಚಂಚುಪಾತ್ರೆಗಳು, ಪ್ರನಾಳಗಳು, ದುಬಾರಿ ಉಪಕರಣಗಳು ಮತ್ತು ಪುಸ್ತಕಗಳಿಂದ ಸುತ್ತುವರಿಯಲ್ಪಟ್ಟು, ಪ್ರಯೋಗಾಲಯದಲ್ಲಿ ಒಂಟಿಯಾಗಿ ಕುಳಿತಿರುವ ವ್ಯಕ್ತಿಯ ಚಿತ್ರವನ್ನು ಕಣ್ಮುಂದೆ ತರುತ್ತದೆ. ಆದರೆ ವಾಸ್ತವದಲ್ಲಿ, ವಿಜ್ಞಾನಿಗಳು ತಮ್ಮ ವ್ಯಕ್ತಿತ್ವಗಳಲ್ಲಿ ಬಹುಮುಖಗಳನ್ನೂ ಹೊಂದಿರುತ್ತಾರೆ. ಈ ಪುಸ್ತಕದಲ್ಲಿರುವ ಹಲವು ವಿಜ್ಞಾನಿಗಳು ಕಥೆ-ಕವಿತೆಗಳನ್ನೂ ಬರೆಯುತ್ತಿದ್ದರು; ಕೆಲವರಿಗೆ ಚಿತ್ರಕಲೆಯಲ್ಲಿ ಆಸಕ್ತಿಯಿದ್ದರೆ, ಮತ್ತೂ ಕೆಲವರಿಗೆ ಮೋಟಾರ್ ಬೈ‌ಕ್‌ಗಳ ಮೇಲೆ ವೇಗವಾಗಿ ಹೋಗುವುದೆಂದರೆ ಬಲು ಇಷ್ಟ! ಅನೇಕ ವಿಜ್ಞಾನಿಗಳು ತಮ್ಮ ಪ್ರಯೋಗಾಲಯಗಳ ಆಚೆಗಿನ ಸಮಾಜದೊಂದಿಗೂ ಅತಿ ಉತ್ಸಾಹದಿಂದ ತೊಡಗಿಕೊಂಡಿರುತ್ತಿದ್ದರು. ಪ್ರಪಂಚವನ್ನು ಒಂದು ಉತ್ತಮ ತಾಣವಾಗಿಸಲು ಶ್ರಮಿಸಿದರು. ಅವರ ಕೊಡುಗೆಗಳ ಜೊತೆಜೊತೆಗೆ ಅವರ ಜೀವನ-ಚಿತ್ರಗಳನ್ನು ಕೊಡುವ ಪ್ರಯತ್ನ ಇಲ್ಲಿದೆ. ವಿಜ್ಞಾನವನ್ನು ತೆಗೆದುಕೊಳ್ಳಲು ಬಾಲ್ಯದ ಅನುಭವ ಅವರಿಗೆ ಸ್ಫೂರ್ತಿ ನೀಡಿತೆ ? ಈ ವಿಜ್ಞಾನಿಗಳು, ವಿಶೇಷವಾಗಿ ಮಹಿಳಾ ವಿಜ್ಞಾನಿಗಳು ಏನೇನು ಅಡ್ಡಿಆತಂಕಗಳನ್ನು ಎದುರಿಸಿದರು ಹಾಗೂ ಹೇಗೆ ಅವನ್ನು ಮೀರಿ ನಿಂತರು ? ಅವರ ಜೀವನಗಳು ಕಿರಿಯರಲ್ಲಿ ಸ್ಫೂರ್ತಿ ತುಂಬುವುದೆಂಬುದು ನಮ್ಮ ಆಶಯ. ಉಜ್ವಲ ಕಿಡಿಗಳು ಹಿಂದಿನ 39 ಮಂದಿ ಸ್ಫೂರ್ತಿದಾಯಕ ಭಾರತೀಯ ವಿಜ್ಞಾನಿಗಳ ಕೊಡುಗೆಗಳು ಮತ್ತು ಜೀವನಗಳನ್ನು ಕಾಲಕ್ರಮಾಗತವಾಗಿ ದಾಖಲಿಸುತ್ತದೆ.

ಅರವಿಂದ ಗುಪ್ತ ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಿಕ್ ಎಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿದ್ದಾರೆ (1975). ವಿಜ್ಞಾನ ಚಟುವಟಿಕೆಗಳ ಕುರಿತು ೧೫ ಕೃತಿಗಳನ್ನು ರಚಿಸಿದ್ದಾರೆ. ಹಿಂದಿಯಲ್ಲಿ ಅವರ 140 ಕೃತಿಗಳು ಹೊರಬಂದಿವೆ. ದೂರದರ್ಶನಕ್ಕಾಗಿ ವಿಜ್ಞಾನ ಕುರಿತು 125 ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ಮೊದಲ ಪುಸ್ತಕ ‘ಮ್ಯಾಚ್‍ಸ್ಟಿಕ್ ಮಾಡೆಲ್ಸ್ ಅಂಡ್ ಅದರ್ ಸೈನ್ಸ್ ಎಕ್ಸ್‌ಪೆರಿಮೆಂಟ್ಸ್’ ಭಾರತದ 12 ಭಾಷೆಗಳಿಗೆ ಅನುವಾದವಾಗಿದೆ; 5 ಲಕ್ಷ ಪ್ರತಿಗಳು ಮಾರಾಟವಾಗಿವೆ. ಮಕ್ಕಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು ಸ್ಥಾಪಿಸಿರುವ ರಾಷ್ಟ್ರೀಯ ಪ್ರಶಸ್ತಿಗೆ ಮೊದಲು ಭಾಜನರಾದವರು ಇವರು (1988). ಐ.ಐ.ಟಿ. ಕಾನ್ಪುರದ ಹಳೆಯ ವಿದ್ಯಾರ್ಥಿಗಳ ವಿಶೇಷ ಪ್ರಶಸ್ತಿ (2000), ಇಂದಿರಾಗಾಂಧಿ ಜನಪ್ರಿಯ ವಿಜ್ಞಾನ ಪ್ರಶಸ್ತಿ (2008), ಮಕ್ಕಳಲ್ಲಿ ವಿಜ್ಞಾನಾಸಕ್ತಿ ಮೂಡಿಸಲು ಸ್ಥಾಪಿಸಿದ ‘ಥರ್ಡ್ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸ್ ಪ್ರಶಸ್ತಿ’ (2010), ಇವರಿಗೆ ಬಂದಿರುವ ಪ್ರಶಸ್ತಿಗಳಲ್ಲಿ ಕೆಲವು. ಸದ್ಯ ಅವರು ಪುಣೆಯ I.U.C.A.A. ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಅಂತರಜಾಲದಲ್ಲಿ http://arvindguptatoys.com ಮೂಲಕ ಪುಸ್ತಕ ಮತ್ತು ಗೊಂಬೆಗಳ ಕುರಿತು ತಮ್ಮ ಆಸಕ್ತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಲೇಖಕರ ಇತರ ಕೃತಿಗಳು
10%
ಆಹಾ ಎಷ್ಟೊಂದು ಚಟುವಟಿಕೆಗಳು
ಅರವಿಂದ ಗುಪ್ತ, Aravind Gupta
Rs. 150    Rs. 135
10%
ಆಟ ಪಾಠದಲ್ಲಿ (ವಿಜ್ಞಾನದ ....
ಅರವಿಂದ ಗುಪ್ತ, Aravind Gupta
Rs. 40    Rs. 36
10%
ತ್ಯಾಜ್ಯವಸ್ತುಗಳಿಂದ ವಿಜ್ಞಾನ - ....
ಅರವಿಂದ ಗುಪ್ತ, Aravind Gupta
Rs. 50    Rs. 45
10%
ಗಣಿತ ಚಟುವಟಿಕೆಗಳು
ಅರವಿಂದ ಗುಪ್ತ, Aravind Gupta
Rs. 80    Rs. 72
Best Sellers
ನಿಮ್ಮ ಮಗುವಿಗೊಂದು ಅಚ್ಚುಮೆಚ್ಚಿನ ಹೆಸರು
ಶ್ರುತಿ ಕುಮಾರ್, Sruthi Kumar
Rs. 45/-   Rs. 50
Computer : ಕಂಪ್ಯೂಟರ್ - ಶಿಕ್ಷಕರ ನೇಮಕಾತಿಗಾಗಿ ತಯಾರಿಸಿದ ಕೃತಿ
ಗುರುರಾಜ ಎಮ್.ಬಿ, Gururaj M B
Rs. 176/-   Rs. 195
ಸ್ಪರ್ಧಾ ಜ್ಞಾನಕೋಶ (General Knowledge)
ನಾಗರಾಜರಾವ್ ಎಂ ವಿ, Nagarajarao M v
Rs. 198/-   Rs. 220
ಒಮ್ಮೆ ಓದಿ ನೋಡಿ
ನಾಗರಾಜ ಎಸ್, Nagaraja S
Rs. 135/-   Rs. 150

Latest Books
ಅಗಣಿತ ವಿಸ್ಮಯ
ರೋಹಿತ್ ಚಕ್ರತೀರ್ಥ, Rohit Chakrathirtha
Rs. 77/-   Rs. 85
ಮೆರವಣಿಗೆ : ಕಾದಂಬರಿ (ಗೊರೂರು ರಾಮಸ್ವಾಮಿ ಅಯ್ಯಂಗಾರ್)
ಗೊರೂರು ರಾಮಸ್ವಾಮಿ ಅಯ್ಯಂಗಾರ್, Goruru Ramaswamy Iyengar
Rs. 437/-   Rs. 485
ಶ್ರೀ ರಾಮಾಯಣ ದರ್ಶನಂ : ವಿಶೇಷ ಆವೃತ್ತಿ (ಗಮಕದ ಧ್ವನಿ ಮುದ್ರಿಕೆಯ ಸಹಿತ)
ಕುವೆಂಪು, Kuvempu
Rs. 500/-
ನೇತ್ರದಂದದೆ ನೋಟ : ಕಗ್ಗದ ಬೆಳಕಿನಲ್ಲಿ ಕಂಡ ಕಾಣ್ಕೆ
ಕವಿತಾ ಅಡೂರು, Kavitha Adoor
Rs. 135/-   Rs. 150


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.