|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2015 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
208 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184675764 |
ಕೋಡ್ |
: |
002453 |
ತತ್ತ್ವಶಾಸ್ತ್ರದ ಉಗಮ ಮತ್ತು ವಿಕಾಸದ ಇತಿಹಾಸ ಏನೇ ಇರಲಿ ಅದರ ಅಧ್ಯಯನದ ಮೂಲ ಉದ್ದೇಶವಾದರೂ ಏನು? ಬೌದ್ಧಿಕ ಪಾಂಡಿತ್ಯವನ್ನು ಹೆಚ್ಚಿಸಿಕೊಳ್ಳುವುದೆ, ಪ್ರವಚನಗಳನ್ನು ನೀಡುವುದೆ, ಸೂಕ್ಷ್ಮ ವಿಶ್ಲೇಷಣೆಗಳಲ್ಲಿ ಪಾರಂಗತರಾಗುವುದೆ? ಅಥವಾ ಇವೂ ಸೇರಿದಂತೆ ವ್ಯಕ್ತಿ ಮತ್ತು ಸಮಷ್ಟಿಯ ಜೀವನ ವಿಧಾನ ಮತ್ತು ಮೌಲ್ಯಗಳನ್ನು ಸಮುದಾಯದ ಉನ್ನತ ವಿಕಾಸ ಹಾಗೂ ಒಳಿತಿನ ಸಾಧನೆಗಾಗಿ ರೂಪಿಸಿಕೊಳ್ಳುವುದಕ್ಕೊ? ಕೂದಲು ಸೀಳುವ ವಿದ್ವತ್ತು ಅನಾದರಣೆಗೆ ಪಾತ್ರವಾಗಬಾರದು; ಅಂತೆಯೇ ಅದು ವಿದ್ವತ್ತಿನ ಮಟ್ಟಿಗೆ ಸೀಮಿತವೂ ಆಗಬಾರದು. ತತ್ತ್ವಶಾಸ್ತ್ರವು ನಿಜ ಜೀವನದಲ್ಲಿ ಸಾಂಗತ್ಯ ಉಂಟುಮಾಡಲು ಶಕ್ತವಾಗಬೇಕು, ಆಗಲೇ ಅದರ ಮೌಲಿಕತೆಯು ಶ್ರೇಷ್ಠವೆನಿಸಿಕೊಳ್ಳುವುದು. ಮಾಲಿಕೆಯ ಈ ಕಡೆಯ ಸಂಪುಟವು ಸಮಕಾಲೀನ ಸಂದರ್ಭದಲ್ಲಿ ತತ್ತ್ವಶಾಸ್ತ್ರದ ಆನ್ವಯಿಕ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ಕುರಿತಾದದ್ದು. ಎಂದೇ ಅದು ಹೆಚ್ಚು ಆಪ್ತವಾಗುವಂಥದು ಹಾಗೂ ಮುಂದಿನ ಜ್ವಲಂತ ಸಮಸ್ಯೆಗಳ ಬಗ್ಗೆ ದರ್ಶನ ಮಾಡಿಸುವಂಥದು. ಪ್ರಕೃತದ ವಿಶ್ವವನ್ನು ಕಣ್ತೆರೆದು ನೋಡಲು ತತ್ತ್ವಶಾಸ್ತ್ರದ ದೃಷ್ಟಿಯೊಂದನ್ನು ನವಿರಾಗು ಮತ್ತು ಕಳಕಳಿಯ ನೆಲೆಯಲ್ಲಿ ಬೆಳೆಸುವುದು ಇಡೀ ಮಾಲಿಕೆಯ ಆಶಯ. ಅಧ್ಯಯನದ ಪ್ರಾಯೋಗಿಕ ಅನ್ವಯಕ್ಕೆ ಸೂಚನೆಗಳು ಇಲ್ಲಿವೆ.
ಲೇಖಕರು ಮಾಲಿಕೆಯ ಸಂಪಾದಕರಾದ ಡಾ|| ದೇವಿಪ್ರಸಾದ್ ಚಟ್ಟೋಪಾಧ್ಯಾಯ. ಅವರು ಸುವಿಖ್ಯಾತ ತತ್ತ್ವಶಾಸ್ತ್ರಜ್ಞ, ಇತಿಹಾಸಕಾರ ಮತ್ತು ಪ್ರಾಧ್ಯಾಪಕ. ಅವರ ಹಲವಾರು ಕೃತಿಗಳು ಕನ್ನಡದಲ್ಲಿ ಲಭ್ಯವಿವೆ. ಅವೆಲ್ಲ ನವಕರ್ನಾಟಕ ಪ್ರಕಾಶನ ಸಂಸ್ಥೆಯ ಪ್ರಕಟಣೆಗಳು.
ಅನುವಾದಕ ಶ್ರೀ ಮ.ಶ್ರೀ. ಮುರಳಿ ಕೃಷ್ಣ ವಿಜ್ಞಾನ ಪದವೀಧರರು, ಬ್ಯಾಂಕ್ ಉದ್ಯೋಗಿ ಮತ್ತು ಪ್ರಸಿದ್ಧ ಲೇಖಕರು. ಆಂಗ್ಲಭಾಷೆಯ ಕಠಿಣವಾದ ತತ್ತ್ವಶಾಶ್ತ್ರ ಗ್ರಂಥವೊಂದನ್ನು ಎಷ್ಟು ಸಮರ್ಥವಾಗಿ ಅನುವಾದಿಸಿದ್ದಾರೆಂಬುದನ್ನು ಓದಿಯೇ ತಿಳಿಯಬೇಕು.
|
| | |
|
|
|
|
|
|
|
|