|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸ್ವಾಮಿ ವಿವೇಕಾನಂದರು ಸ್ವಾಭಾವಿಕವಾಗಿ ಅದ್ಭುತ ಪ್ರತಿಭಾ ಸಂಪನ್ನರು. ಅವರ ಬುದ್ಧಿ ವಿದ್ಯುದ್ವೇಗದಿಂದ ಸಂಚಾರ ಮಾಡತಕ್ಕದ್ದು; ಅದು ಒಮ್ಮೆ ಲೀಲೆಯಿಂದ ಸಮುದ್ರ ತಳಕ್ಕೆ ಧುಮುಕುವುದು; ಇನ್ನೊಮ್ಮೆ ಪಕ್ಷಿಯಂತೆ ಗಿರಿಶಿಖರಕ್ಕೆ ಹಾರುವುದು; ಮತ್ತೊಮ್ಮೆ ಹುಲ್ಲುಗಾವಲಿನ ಮೇಲೆ ಮಂದಮಾರುತದಂತೆ ಸುಳಿದಾಡುವುದು. ಒಂದು ತೀಕ್ಷ್ಣತೆ, ಒಂದು ಲಘುತೆ, ಒಂದು ಆವೇಶ, ಒಂದು ವಿಲಾಸ - ಇವು ಆ ಬುದ್ಧಿಯ ಗುಣಗಳು. ಅವರು ಸಂಸ್ಕೃತದಲ್ಲಿ ವ್ಯಾಕರಣ ತರ್ಕಶಾಸ್ತ್ರಗಳನ್ನು ಸಾಂಗವಾಗಿ ಅಭ್ಯಾಸ ಮಾಡಿದ್ದರು. ಹಾಗೆಯೇ ಇಂಗ್ಲಿಷ್ನಲ್ಲಿ ಕಾವ್ಯ ಇತಿಹಾಸಗಳನ್ನೂ ವಿಜ್ಞಾನಶಾಸ್ತ್ರ ತತ್ತ್ವಮೀಮಾಂಸೆಗಳನ್ನೂ ವಿಸ್ತಾರವಾಗಿ ಪರಾಮರ್ಶಿಸಿ ಸ್ವಾಧೀನಪಡಿಸಿಕೊಂಡಿದ್ದರು. ಈ ಉಭಯ ವಿದ್ಯಾಪ್ರಾವೀಣ್ಯಕ್ಕೆ ಅನುರೂಪವಾದ ವಾಗ್ಧೋರಣೆ, ತದನುಗುಣವಾದ ಉತ್ತಾಲಧ್ವನಿ, ಉನ್ನತವಾದ ವರ್ಚಸ್ವಿಯಾದ ಗಂಭೀರಾಕಾರ, ಸಕಲ ಜನಮನೋಗ್ರಾಹಿಯಾದ ಹಾಸ್ಯ ವಿನೋದ ರಸಿಕತೆ, ಹೃದಯ ವಿದ್ರಾವಕವಾದ ಗಾನಮಾಧುರ್ಯ ಇದೆಲ್ಲವೂ ಅವರಲ್ಲಿ ಸಮ್ಮಿಳಿತವಾಗಿದ್ದುವು. ಈ ನಾನಾ ಗುಣಶಕ್ತಿಗಳಿಗೆ ಕಿರೀಟಪ್ರಾಯವಾಗಿದ್ದು ಶ್ರೀರಾಮಕೃಷ್ಣ ಪರಮಹಂಸ ಗುರುಗಳ ಅನುಗ್ರಹ. ಇಂಥ ಮಹಾನುಭಾವರ ಜೀವಿತದ ಚಿತ್ರವನ್ನು ಕುವೆಂಪುರವರು ಈ ಪುಸ್ತಕದಲ್ಲಿ ಚಿತ್ರಿಸಿದ್ದಾರೆ.
|
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಡಿಸೆಂಬರ್ 29, 1904 - ನವೆಂಬರ್ 11, 1994)ನವರು ತಮ್ಮ ಕುವೆಂಪು ಎನ್ನುವ ಕಾವ್ಯನಾಮದಿಂದಲೇ ಪ್ರಸಿದ್ಧರು. 20ನೆಯ ಶತಮಾನದ ಮಹಾನ್ ಕನ್ನಡ ಕವಿ, ಸಾಹಿತಿ ಹಾಗೂ ಮಹಾಮಾನವತಾವಾದಿ. ಕುವೆಂಪು ಅವರು ತಮ್ಮ ಅಮರಕೃತಿ `ಶ್ರೀರಾಮಾಯಣ ದರ್ಶನಂ` ಬರೆದು `ಮಹಾಕಾವ್ಯ`ಯುಗಕ್ಕೆ ಮತ್ತೊಮ್ಮೆ ಮರುಚೇತನ ನೀಡಿದರು. ಈ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಅಪರೂಪದ ಕೃತಿಯಾಗಿದೆ. ರಾಷ್ಟ್ರಕವಿ ಪ್ರಶಸ್ತಿಯೊಂದಿಗೆ `ಪದ್ಮವಿಭೂಷಣ` ಪ್ರಶಸ್ತಿ ಪಡೆದಿರುವ ಕನ್ನಡದ ಏಕೈಕ ಕವಿ. ಕುವೆಂಪು ಬರೆದ `ಜಯಭಾರತ ಜನನಿಯ ತನುಜಾತೆ` ನಾಡಗೀತೆಯಾಗಿ ಇಂದು ಸುಪ್ರಸಿದ್ಧವಾಗಿದೆ.
ಕುವೆಂಪು ಅವರು ಗಂಭೀರ ವ್ಯಕ್ತಿ. ಇದು ಎಲ್ಲರಿಗೂ ತಿಳಿದ ವಿಷಯ. ಆದರೆ ಅವರು ಅಷ್ಟೇ ಹಾಸ್ಯಪ್ರಿಯರು ಎನ್ನುವುದು ಹೆಚ್ಚಿಗೆ ತಿಳಿದಿಲ್ಲ. ಕುವೆಂಪು ಅವರ ಪರಿಚಯವನ್ನು ಶ್ರೀ ಟಿ.ಎಸ್.ಗೋಪಾಲ್ ಅವರು ಈ ಪುಸ್ತಕದಲ್ಲಿ ಸೊಗಸಾಗಿ ಮಾಡಿಕೊಟ್ಟಿದ್ದಾರೆ.
|
|
| |
|
|
|
|
|
|
|
|
|