|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸುಂದರಲಾಲ್ ಬಹುಗುಣರವರು ತಮ್ಮ ಚಿಪ್ಕೋ ಚಳವಳಿಯ ಮೂಲಕ ಜಾಗತಿಕ ಸಮ್ಮಾನವನ್ನು ಪಡೆದವರು. ಆದರೆ ಅವರು ಅಷ್ಟೇ ಒಳ್ಳೆಯ ಕೆಲಸವನ್ನು ಗಾಂಧೀಜಿಯವರ ತತ್ವಗಳನ್ನು ಪ್ರಸರಿಸುವುದರಲ್ಲಿಯೂ ಮಾಡಿದ್ದಾರೆ. ಅಸ್ಪೃಶ್ಯತೆಯ ನಿವಾರಣೆಗೆ, ಮದ್ಯಪಾನ ನಿರೋಧ, ವ್ಯಾಜ್ಯಗಳನ್ನು ಸ್ಥಳೀಯವಾಗಿ ಬಗೆಹರಿಸಿಕೊಳ್ಳುವುದು, ಖಾದಿಯ ನೇಯ್ಗೆ ಮುಂತಾದವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು. ರಾಮ್ ಲೀಲ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರನ್ನು ತಮ್ಮ ಹೋರಾಟಕ್ಕೆ ಸಜ್ಜುಗೊಳಿಸುತ್ತಿದ್ದರು. ಚಮೋಲಿ ಜಿಲ್ಲೆಯ ‘ರೇನಿ‘ ಎಂಬ ಪುಟ್ಟ ಹಳ್ಳಿ. ಅಲ್ಲಿ ‘ಗೌರವ್ ದೇವಿ‘ ಎಂಬ ಅನಕ್ಷರಸ್ಥ ಮಹಿಲೆ. ಆಕೆ ‘ಮರವನ್ನು ಕಡಿಯುವುದಾದರೆ, ಮರದೊಂದಿಗೆ ನನ್ನನು ಕಡಿದುಹಾಕಿ‘ ಎಂದು ಮರವನ್ನು ಅಪ್ಪಿಕೊಂಡಳು. ಇಡೀ ಹಳ್ಳಿಯ ಹೆಣ್ಣುಮಕ್ಕಳು ಮರಗಳನ್ನು ಅಪ್ಪಿಕೊಂಡರು. ಗೌರವ್ ದೇವಿಯ ಈ ಸರಳ ಆದರೆ ಅಸಾಧಾರಣ ಪ್ರತಿಭಟನೆಯು ಹಿಮಾಲಯದಾದ್ಯಂತ ಮಾತ್ರವಲ್ಲ. ನಮ್ಮ ಕರ್ನಾಟಕವನ್ನೂ ಒಳಗೊಂಡಂತೆ ಭಾರತದಾದ್ಯಂತ ಪ್ರಸಿದ್ಧವಾಯಿತು. ಅದಕ್ಕೆ ಕಾರಣ ಸುಂದರಲಾಲ್ ಬಹುಗುಣ!
|
ಶ್ರೀ ಎನ್ ಎಲ್ ಆನಂದ್ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಕಾರ್ಯ ಸ್ನಾತಕೋತ್ತರ ಪದವಿ, ಅನಂತಪುರದ ಕೃಷ್ಣದೇವರಾಯ ವಿ.ವಿ.ಯಿಂದ ಎಮ್.ಫಿಲ್. ಪದವಿಯನ್ನು ಪಡೆದಿದ್ದಾರೆ. ಹಲವು ಪರಿಸರದ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸಮಾಜದ ಹುಲ್ಲು ಬೇರುಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಶ್ರೀ ಗುಂಡಪ್ಪ ದೇವಿಕೇರಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಕಾರ್ಯ ಸ್ನಾತಕೋತ್ತರ ಪದವಿ ಹಾಗೂ ತಮಿಳುನಾಡಿನ ಭಾರತಿ ದಾಸನ್ ವಿ.ವಿ.ಯಿಂದ ಎಮ್.ಫಿಲ್. ಪದವಿಯನ್ನು ಗಳಿಸಿದ್ದಾರೆ. ಇವರು ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸರ್ಕಾರಿ ಮತ್ತು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
|
|
| |
|
|
|
|
|
|
|
|
|