|
|

| Rs. 30 | 10% |
Rs. 27/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸುಬ್ರಹ್ಮಣ್ಯನ್ ಚಂದ್ರಶೇಖರ್ 19 ವರ್ಷದ ಹುಡುಗ. ಭಾರತದಿಂದ ಇಂಗ್ಲೆಂಡಿಗೆ ಹೊರಟಿದ್ದ. ಎರಡು ವಾರಗಳ ಹಡಗು ಪಯಣ. ಕಣ್ಣು ಹಾಯಿಸಿದೆಡೆಯಲ್ಲೆಲ್ಲ ನೀರು. ರಾತ್ರಿಯ ಆಕಾಶದ ತುಂಬಾ ನಕ್ಷತ್ರಗಳು! ಈ ನಕ್ಷತ್ರಗಳಿಗೆ ಹುಟ್ಟು, ಬದುಕು ಮತ್ತು ಸಾವಿದೆಯೆ? ನಮ್ಮ ಸೂರ್ಯನೂ ಒಂದು ನಕ್ಷತ್ರವಲ್ಲವೆ! ಅವನೂ ಒಂದು ದಿನ ಸಾಯುವನೆ? ಹೀಗೆ ಹಲವು ಹತ್ತು ಪ್ರಶ್ನೆಗಳು ಯುವಕನನ್ನು ಕಾಡಿದವು. ತಕ್ಷಣವೇ ತಾನು ಅದುವರೆಗೂ ಕಲಿತಿದ್ದ ಗಣಿತ ಹಾಗೂ ಭೌತಶಾಸ್ತ್ರದ ಆಧಾರದ ಮೇಲೆ ಲೆಕ್ಕ ಹಾಕಲು ಆರಂಭಿಸಿದ. ಇಂಗ್ಲೆಂಡ್ ತಲುಪುವುದಕ್ಕೆ ಮೊದಲೇ ತನ್ನ ಲೆಕ್ಕಾಚಾರವನ್ನು ಮುಗಿಸಿದ. ನಮ್ಮ ಸೂರ್ಯನ ದ್ರವ್ಯರಾಶಿಗಿಂತ 1.44 ಪಟ್ಟು ಅಥವಾ ಕಡಿಮೆ ಇರುವ ನಕ್ಷತ್ರಗಳು ತಮ್ಮನ್ನೇ ಹಿಂಡಿಕೊಂಡು ಕುಗ್ಗುತ್ತವೆ. ಅತಿಭಾರದ ಕುಬ್ಜರೂಪಿಗಳಾಗಿ ತಮ್ಮ ವೃದ್ಧಾಪ್ಯವನ್ನು ಕಳೆಯುತ್ತವೆ. ಹುಡುಗ ಚಂದ್ರಶೇಖರ್ ಹೇಳಿದ ಈ ಮಾತುಗಳನ್ನು ಜಗತ್ತಿನ ವಿಜ್ಞಾನಿಗಳು ಸುಮಾರು 50 ವರ್ಷಗಳ ಕಾಲ ಪರೀಕ್ಷಿಸಿದರು. ಅನೇಕ ಪ್ರಯೋಗಗಳನ್ನು ನಡೆಸಿ, ನಿಜವೆಂದು ಒಪ್ಪಿಕೊಂಡರು. 19ನೆಯ ವರ್ಷದಲ್ಲಿ ಮಾಡಿದ ಸಂಶೋಧನೆಗೆ 73ನೆಯ ವಯಸ್ಸಿನಲ್ಲಿ ಜಗತ್ತಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ದೊರೆಯಿತು.
|
ರೋಹಿತ್ ಚಕ್ರತೀರ್ಥ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಪ್ರವಾಸಿ. ನಾಟಕ, ಜನಪದ, ಛಾಯಾಗ್ರಹಣ - ಇನ್ನಿತರ ಆಸಕ್ತಿಗಳು.
|
|
| |
|
|
|
|
|
|
|
|
|