Items
0
Total
  0.00 
Welcome Guest.

 
ಶ್ರೀರಂಗ ಸಂಪದ
ಸಂಪಾದಕರು:

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 710
10%
Rs. 639/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಿರಿವರ ಪ್ರಕಾಶನ, Sirivara Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಉತ್ತಮ
ಪುಟಗಳು : 624
ಪುಸ್ತಕದ ಗಾತ್ರ : 1/4 Crown Size
ಕೋಡ್ : 1105105

‘ವೈವಿಧ್ಯಮಯವಾದ ಭಾರತೀಯ ಸಂಸ್ಕೃತಿ ಮೇಲೆ ಇಂದು ದಬ್ಬಾಳಿಕೆ ನಡೆಯುತ್ತಿದೆ. ಬಹುಸಂಸ್ಕೃತಿ, ಬಹುತತ್ವಗಳನ್ನು ನಿರ್ನಾಮ ಮಾಡುವ ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ’ ಎಂದು ಲೇಖಕ ಜೆ.ಶ್ರೀನಿವಾಸಮೂರ್ತಿ ಕಿಡಿಕಾರಿದರು.
‘ಬಹುಸಂಸ್ಕೃತಿ ನಾಶ ಮಾಡುವ ಷಡ್ಯಂತ್ರ’

ಬೆಂಗಳೂರು:‘ವೈವಿಧ್ಯಮಯವಾದ ಭಾರತೀಯ ಸಂಸ್ಕೃತಿ ಮೇಲೆ ಇಂದು ದಬ್ಬಾಳಿಕೆ ನಡೆಯುತ್ತಿದೆ. ಬಹುಸಂಸ್ಕೃತಿ, ಬಹುತತ್ವಗಳನ್ನು ನಿರ್ನಾಮ ಮಾಡುವ ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ’ ಎಂದು ಲೇಖಕ ಜೆ.ಶ್ರೀನಿವಾಸಮೂರ್ತಿ ಕಿಡಿಕಾರಿದರು.

ಹಿರಿಯ ರಂಗಕರ್ಮಿ ಎಚ್.ವಿ.ವೆಂಕಟಸುಬ್ಬಯ್ಯ (ಸುಬ್ಬಣ್ಣ) ಅವರ 80ನೇ ಜನ್ಮದಿನಾಚರಣೆ ಅಂಗವಾಗಿ ಸುಬ್ಬಣ್ಣ ಅಭಿನಂದನಾ ಬಳಗದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬುದ್ಧಿಜೀವಿಗಳನ್ನು ಹಾಗೂ ಅವರ ಜ್ಞಾನವನ್ನು ಅವಹೇಳನ ಮಾಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಶ್ರೀರಂಗ ಅವರ ಚಿಂತನೆಗಳು ಪ್ರಸ್ತುತ’ ಎಂದರು.
ವಿಮರ್ಶಕ ಗಿರಡ್ಡಿ ಗೋವಿಂದರಾಜ ಮಾತನಾಡಿ, ‘ನಾಟಕಕಾರ ಶ್ರೀರಂಗ ಅವರು ಧಾರವಾಡದ ಜತೆಗೆ ನಿಕಟವಾದ ಸಂಬಂಧ ಹೊಂದಿದ್ದರು. ಅವರ ಕುರಿತ ಲೇಖನಗಳು, ನಾಟಕಗಳು, ಕೃತಿಗಳ ವಸ್ತುಪ್ರದರ್ಶನವನ್ನು ಧಾರವಾಡದ ರಂಗಾಯಣದಲ್ಲಿ ನಡೆಸಬೇಕು’
ಎಂದು ಹೇಳಿದರು.

‘ರಾಜ್ಯದ ರಂಗಭೂಮಿಗೆ ಶ್ರೀರಂಗ ಅವರು ಸೃಜನಾತ್ಮಕ ಸ್ಪರ್ಶ ನೀಡಿದರು. ಧಾರವಾಡದಲ್ಲಿದ್ದ ವೇಳೆ ಅವರು ಹವ್ಯಾಸಿ ರಂಗಭೂಮಿಯನ್ನು ಕಟ್ಟಿ ಬೆಳೆಸಿದರು. ಅದರ ಫಲವಾಗಿ ರಾಷ್ಟ್ರಮಟ್ಟದಲ್ಲಿ ಕನ್ನಡ ರಂಗಭೂಮಿ ಗುರುತಿಸಿ ಕೊಂಡಿತು’ ಎಂದರು.

ಎಚ್.ವಿ.ವೆಂಕಟಸುಬ್ಬಯ್ಯ ಅವರು ಮಾತನಾಡಿ, ‘ನಾನೊಬ್ಬ ರಂಗಭೂಮಿ ಪರಿಚಾರಕ. ರಂಗಭೂಮಿಗೆ ಅಪಾರ ಕೊಡುಗೆ ನೀಡಿದ ಶ್ರೀರಂಗ ಅವರ ಬದುಕಿನ ಕುರಿತ ಬರಹಗಳನ್ನು ಒಗ್ಗೂಡಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ನನ್ನ ಕರ್ತವ್ಯ’ ಎಂದು ಹೇಳಿದರು.

ಕೃತಿ ಬಿಡುಗಡೆ: ಶ್ರೀರಂಗ ಅವರ ಜೀವನದ ಕುರಿತ ಸಮಗ್ರ ಮಾಹಿತಿ ಯುಳ್ಳ ‘ಶ್ರೀರಂಗ ಸಂಪದ’ ಕೃತಿ ಯನ್ನು ಸಿರಿವರ ಪ್ರಕಾಶನದಡಿ ಸುಬ್ಬಣ್ಣ ಅವರು ಹೊರತಂದಿದ್ದಾರೆ. ಅದನ್ನು ಗಿರಡ್ಡಿ ಅವರು ಬಿಡುಗಡೆ ಮಾಡಿದರು. 605 ಪುಟಗಳುಳ್ಳ ಈ ಕೃತಿಯ ಬೆಲೆಯು 710.

ಲೇಖಕರ ಇತರ ಕೃತಿಗಳು
10%
ಪತ್ನಿಯರು ಕಂಡಂತೆ ಪ್ರಸಿದ್ಧರು ....
Rs. 300    Rs. 270
 
ಮಹಾಕವಿ ಕುಮಾರವ್ಯಾಸ ವಿರಚಿತ ....
Rs. 400
5%
ಬೆಂಗಳೂರು ಮಹಾನಗರ ಸಾರಿಗೆ ....
Rs. 360    Rs. 342
10%
ಆಧುನಿಕ ಕನ್ನಡ ನಾಟಕ
Rs. 250    Rs. 225
Best Sellers
Yoga For Health
Ravishankar N S
Rs. 176/-   Rs. 195
Rapidex English Speaking Course in (Tamil) - CD
Rapidex
Rs. 194/-   Rs. 215
ಮಕ್ಕಳಿಗಾಗಿ ಅಕ್ಬರ್ ಬೀರ್‍ಬಲ್ ಜಾಣ್ಮೆಯ ಕಥೆಗಳು
ಮಧ್ಯಸ್ಥ ಜಿ ಕೆ, Madhyastha G k
Rs. 36/-   Rs. 40
ಗೀತಾ ನಾಗಭೂಷಣ (ಜೀವನ ಮತ್ತು ಸಾಧನೆ)
ಗಾಯತ್ರಿ ಎನ್, Gayathri N
Rs. 72/-   Rs. 80

Latest Books
ಎಚ್. ಎಸ್. ಶಿವಪ್ರಕಾಶ್
ಬಿದರಹಳ್ಳಿ ನರಸಿಂಹಮೂರ್ತಿ, Bidarahalli narasimhamurthy
Rs. 63/-   Rs. 70
ಜೇನು ಕಲ್ಲಿನ ರಹಸ್ಯ ಕಣಿವೆ (ಮಲೆನಾಡಿನ ರೋಚಕ ಕತೆಗಳು - ೪)
ಗಿರಿಮನೆ ಶ್ಯಾಮರಾವ್, Girimane Shyamarao
Rs. 117/-   Rs. 130
ಸೃಷ್ಟಿ ಸೊಬಗೆಲ್ಲಾ ನಿನ್ನಿಂದಲೇ - ಕಾದಂಬರಿ
ಸಿ ಎಸ್ ಶಶಿಧರ್, C S Shashidhar
Rs. 225/-   Rs. 250
ಬೆಂಕಿಬಿದ್ದ ಬಯಲು ಮತ್ತು ಪೆದ್ರೊ ಪರಾಮೊ : ಸಮಗ್ರ ಸಾಹಿತ್ಯ
ನಾಗಭೂಷಣ ಸ್ವಾಮಿ ಓ ಎಲ್, O L Nagabhushana Swamy
Rs. 257/-   Rs. 285


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.