Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಶ್ರೀಮದ್ಭಗವದ್ಗೀತಾ ಮತ್ತು ಕಗ್ಗ ತಾತ್ಪರ್ಯ
ಲೇಖಕರು: ಶ್ರೀಕಾಂತ್, Srikanth

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 400    
5%
Rs. 380/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಶ್ರೀಕಾಂತ್, Srikanth
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಉತ್ತಮ
ಪುಟಗಳು : 1120
ಪುಸ್ತಕದ ಗಾತ್ರ : 1/8 Demy Size
ಕೋಡ್ : 187039

ಶ್ರೀ ಶ್ರೀಕಾಂತ್ ಅವರು ಅನುಕ್ರಮವಾಗಿ ಭಗವದ್ಗೀತೆಯ ಅಷ್ಟೂ ಶ್ಲೋಕಗಳನ್ನು ಒಂದೊಂದಾಗಿ ಪರಾಮರ್ಶಿಸಿ ಆ ಶ್ಲೋಕಗಳ ಅಂತರ್ನಿಹಿತ ಅರ್ಥಸೂಕ್ಷ್ಮಗಳು ‘ಮಂಕುತಿಮ್ಮನ ಕಗ್ಗ’ದ ಮತ್ತು ‘ಮರುಳಮುನಿಯನ ಕಗ್ಗ’ದ ಪದ್ಯಗಳಲ್ಲಿ ಹೇಗೆ ಅನುರನನಗೊಂಡಿವೆ ಎಂದು ಎತ್ತಿತೋರಿಸಿದ್ದಾರೆ. ಇದೊಂದು ಅಗಾಧವಾದ ಸಾಹಸ; ಅತಿಶಯವಾದ ಅವಧಾನವೂ ಕಗ್ಗದ್ವಯದ ಹಾಗೂ ಭಗವದ್ಗೀತೆಯ ಆಳವಾದ ಅಭ್ಯಾಸವೂ ಇದ್ದಲ್ಲಿ ಮಾತ್ರ ಶಕ್ಯವಾಗುವಂಥದು. ಶ್ರೀ ಶ್ರೀಕಾಂತನ್ ಅವರು ಈ ಕಾರ್ಯಕ್ಕೆ ತಮ್ಮನ್ನು ನಾಲ್ಕಾರು ವರ್ಷಗಳಿಂದ ಸಜ್ಜುಗೊಳಿಸಿಕೊಂಡಿರುವುದು ಈ ಗ್ರಂಥದ ಪುಟಪುಟಗಳಲ್ಲಿಯೂ ಎದ್ದು ಕಾಣುತ್ತದೆ. ವಿಷಯದಲ್ಲಿ ಅಸೀಮ ಪ್ರೀತಿ ಇದ್ದಲ್ಲಿ ಮಾತ್ರ ಇಂತಹ ಕ್ಲೇಶಪೂರ್ಣ ಕಾರ್ಯಕ್ಕೆ ಪ್ರೇರಣೆ ದೊರೆತೀತು. ಅರ್ಥವಿಶೇಷಗಳನ್ನು ಸ್ಪಷ್ಟೀಕರಿಸುವಲ್ಲಿ ಶ್ರೀ ಶೀಕಾಂತನ್ ಅಲ್ಲಲ್ಲಿ ವಿವಿಧ ಗ್ರಂಥಾಂತರಗಳ ಹಿನ್ನೆಲೆಯನ್ನೂ ಬಳಸಿಕೊಂಡಿದ್ದಾರೆ. ಹೀಗೆ ಇದೊಂದು ಉಚ್ಚಕೋಟಿಯ ಸಂಶೋಧನಗ್ರಂಥವೇ ಆಗಿದೆ. ಡಿ.ವಿ.ಜಿ. ವಾಙಯಕ್ಕೆ ಈ ಮಟ್ಟದ ಮತ್ತು ಇಷ್ಟು ಸಾರ್ಥಕವಾದ ಕೈಂಕರ್ಯ ಇದುವರೆಗೆ ಸಂದಿಲ್ಲವೆಂದು ನಿಶ್ಚಿತವಾಗಿ ಹೇಳಬಹುದು.

ಕಗ್ಗದ್ವಯದ ಬಗೆಗೆ ಶ್ರೀ ಶ್ರೀಕಾಂತನ್ ಬೆಳೆಸಿಕೊಂಡಿರುವ ತಪಃದೃಶ ನಿಷ್ಠೆಗೆ ಇದೀಗ ಹೊರಬರುತ್ತಿರುವ ಅವರ ‘ಶ್ರೀಮದ್ಭಗವದ್ಗೀತೆ ಮತ್ತು ಕಗ್ಗ ತಾತ್ಪರ್ಯ’ ಮುಕುಟಪ್ರಾಯವಾಗಿದೆ. ‘ಕಗ್ಗ’-ಆಸಕ್ತರಿಗೆಲ್ಲ ಅನುಪಮವಾದ ದೊಡ್ಡ ನಿಧಿಯನ್ನೇ ಈ ವ್ಯಾಖ್ಯಾನದಲ್ಲಿ ಶ್ರೀ ಶ್ರೀಕಾಂತನ್ ಒದಗಿಸಿದ್ದಾರೆ. ಡಿ.ವಿ.ಜಿ. ವಾಙಯ ಪರಾಮರ್ಶನ ಸಾಹಿತ್ಯಕ್ಕೆ ಇದು ಕಲಶೋಪಮವಾಗಿದೆ.

ಲೇಖಕರ ಇತರ ಕೃತಿಗಳು
10%
ಮಂಕುತಿಮ್ಮನ ಕಗ್ಗ - ....
ಶ್ರೀಕಾಂತ್, Srikanth
Rs. 125    Rs. 113
10%
ಮರುಳ ಮುನಿಯನ ಕಗ್ಗ ....
ಶ್ರೀಕಾಂತ್, Srikanth
Rs. 120    Rs. 108
Best Sellers
ಭಾರತ ಸಂವಿಧಾನ (ಅಬ್ದುಲ್ ಹಕೀಂ) (Indian Constitution )
ಅಬ್ದುಲ್ ಹಕೀಂ, Abdul Hakeem
Rs. 225/-   Rs. 250
ಕಿಚ್ಚು - ಕಾದಂಬರಿ
ಉಷಾನವರತ್ನ ರಾಮ್, Ushanavaratna Ram
Rs. 81/-   Rs. 90
ಜೇನುತುಪ್ಪ (ಆಯುರ್ವೇದ ಮತ್ತು ಪ್ರಕೃತಿ ಸಂಜೀವಿನಿ ಮಾಲೆ)
ಸ್ವಾಮಿ ನಾರಾಯಣ ತೀರ್ಥ, Swami Narayana Teertha
Rs. 45/-   Rs. 50
ಟೀಪು ಸುಲ್ತಾನ (NBT)
ಷೇಕ್ ಅಲಿ, Shek Ali
Rs. 27/-   Rs. 30

Latest Books
ಸಂಗಾತಿ ರೂವ್ವ ಬರಸೇನಾ : ಹೆಣ್ಣು ಕಣ್ಣೋಟದ ವಿಮರ್ಶಾ ಲೇಖನಗಳು
ಸುನಂದಮ್ಮ ಆರ್, Sunandamma R
Rs. 162/-   Rs. 180
ಪ್ರೀತಿ ಎಂಬುದು ಚಂದ್ರನ ದಯೆ
ಯೋಗಪ್ಪನವರ್ ಎಸ್ ಎಫ್, Yogappanavar S F
Rs. 162/-   Rs. 180
ಜೀವ ಜೀವದ ನಂಟು
ಜಯಪ್ರಕಾಶ ನಾರಾಯಣ ಬಿ ಎಸ್, Jayaprakash Narayan B S
Rs. 86/-   Rs. 95
ವಾಣಿಯರಿವಿನ ಬೆಳಗು : ಪ್ರಾಚೀನ ಕನ್ನಡ ಕಾವ್ಯದ ನಾಂದಿ ಪದ್ಯಗಳು
ಡಾ. ಸಾವಿತ್ರಿಬಾಯಿ ಪವಾರ, Dr. Savitribai Pawar
Rs. 158/-   Rs. 175


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.