Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 260    
10%
Rs. 234/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಕ್ಷರ ಪ್ರಕಾಶನ, Akshara Prakashana
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 332
ಪುಸ್ತಕದ ಗಾತ್ರ : 1/8 Demy Size
ಕೋಡ್ : 178720

ಪ್ರಬಂಧದ ವ್ಯಾಪ್ತಿ ದೊಡ್ಡದು: ‘ಭೂಮಿ ಮತ್ತು ಮನುಷ್ಯ’, ‘ಕಾಲ ಮತ್ತು ಮನುಷ್ಯ’, ‘ಕಾಮ ಮತ್ತು ಮನುಷ್ಯ’, ‘ಸಮಾಜ ಮತ್ತು ಮನುಷ್ಯ’ - ಹೀಗೆ ನಾಲ್ಕು ಭಾಗಗಳಲ್ಲಿರುವ ಪ್ರಬಂಧ, ಕನ್ನಡ ಕಾವ್ಯದ ಮುಖ್ಯ ಕಾಳಜಿಗಳನ್ನು ಪರೀಕ್ಷಿಸುವುದರ ಜೊತೆಯಲ್ಲೆ, ಕನ್ನಡದ ಎಲ್ಲ ಮುಖ್ಯ ಆಧುನಿಕ ಕವಿಗಳ ಮೇಜರ್ ಎನ್ನಬಹುದಾದ ಕೃತಿಗಳೆಲ್ಲವನ್ನೂ ಆಳವಾಗಿ, ಸೂಕ್ಷ್ಮವಾಗಿ ಒಂದು ಕೇಂದ್ರ ದೃಷ್ಟಿಕೋನದ ಪ್ರವೇಶಕ್ಕೆ ಸಿಕ್ಕುವಂತೆ ಚರ್ಚಿಸಲು ಪ್ರಬಂಧದಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ. ಎಲ್ಲೂ ಪ್ರಬಂಧದ ವ್ಯಾಪ್ತಿ ಕೃತಕವೆನ್ನಿಸುವುದಿಲ್ಲ. ಲೇಖಕನ ದೃಷ್ಟಿಕೋನಕ್ಕೆ ಅಧೀನವಾಗಿ ಇಡೀ ಚರ್ಚೆ ಮೊದಲಿನಿಂದ ಕೊನೆಯವರೆಗೆ ಹಲವು ಕವಿಗಳ ಹಲವು ಕವನಗಳನ್ನು ಸಹಜವಾಗಿ ಒಳಗೊಳ್ಳುತ್ತಾ ಬೆಳೆಯುತ್ತಾ ಹೋಗಿದೆ. ಲೇಖಕರ ದೃಷ್ಟಿಕೋನ ಮೇಲೆ ಹೇಳಿದ ಬೀಸಿನಲ್ಲಿ ಇಡಿಯಾಗಿ ಆಧುನಿಕ ಕನ್ನಡ ಕಾವ್ಯವನ್ನು ಪರೀಕ್ಷಿಸುವಾಗ ತಾರತಮ್ಯ ವಿವೇಚನೆಯನ್ನು ಕಳೆದುಕೊಳ್ಳದ ಸಾಹಿತ್ಯ ವಿಮರ್ಶೆಯ ಎಚ್ಚರವನ್ನೂ, ತಾತ್ವಿಕ ವ್ಯಾಖ್ಯಾನಕ್ಕೆ ಅಗತ್ಯವಾದ ವೈವಿಧ್ಯದ ಉದಾರ ಗ್ರಹಿಕೆಯನ್ನೂ ಒಂದಕ್ಕೊಂದು ವಿರೋಧವಾಗದಂತೆ ಒಳಗೊಂಡಿರುವುದು ಈ ಪ್ರಬಂಧದ ಇನ್ನೊಂದು ವಿಶೇಷವಾಗಿದೆ. ಲೇಖಕರ ‘ಮಾರ್ಕ್ಸಿಸ್ಟ್’ ಎನ್ನಬಹುದಾದ ದೃಷ್ಟಿಕೋನ ಎಲ್ಲೂ ಒರಟಾಗಿ ಕೆಲಸ ಮಾಡಿಲ್ಲ. ಕಾವ್ಯದ ಆತ್ಮನಿಷ್ಠ ಅನುಭವದ ವಿಶ್ಲೇಷಣೆಯನ್ನು ಸೂಕ್ಷ್ಮವಾದ ವೈಜ್ಞಾನಿಕ ಮಾರ್ಕ್ಸ್‌ವಾದೀ ದೃಷ್ಟಿ ಓದುಗನ ರಸಗ್ರಹಣದ ಶಕ್ತಿಗೆ ಕುಂದು ಬಾರದಂತೆ ಮಾಡಬಲ್ಲುದೆಂಬುದನ್ನೂ, ಹಾಗೆ ಮಾಡಿದಾಗ ಮಾತ್ರ ಮಾರ್ಕ್ಸ್‌ವಾದವೂ ಸಾಹಿತ್ಯದಿಂದ ಕಲಿಯಬಲ್ಲುದೆಂಬುದನ್ನೂ ಶ್ರೀ ಡಿ. ಆರ್.ನಾಗರಾಜರು ಈ ಪ್ರಬಂಧದಲ್ಲಿ ರುಜುವಾತು ಪಡಿಸಿದ್ದಾರೆ.

ಲೇಖಕರ ಇತರ ಕೃತಿಗಳು
Rs. 240    Rs. 216
10%
ಅಲ್ಲಮಪ್ರಭು ಮತ್ತು ಶೈವಪ್ರತಿಭೆ
ನಾಗರಾಜ್ ಡಿ ಆರ್, Nagaraj D R
Rs. 185    Rs. 167
10%
ಅಮೃತ ಮತ್ತು ಗರುಡ
ನಾಗರಾಜ್ ಡಿ ಆರ್, Nagaraj D R
Rs. 100    Rs. 90
Best Sellers
ಕಲಾಂ ನಿಮಗಿದೋ ಸಲಾಂ
ಮಧ್ಯಸ್ಥ ಜಿ ಕೆ, Madhyastha G k
Rs. 108/-   Rs. 120
ಮೋಹನಸ್ವಾಮಿ
ವಸುಧೇಂದ್ರ, Vasudhendra
Rs. 200/-
ಕಲಾಂ ಅವರ ಕನಸು ಸಂಪನ್ನ ಭಾರತ ಸಮೃದ್ಧ ಭಾರತ
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 126/-   Rs. 140
ವಿ ಸೀತಾರಾಮಯ್ಯ (ಜೀವನ ಮತ್ತು ಸಾಧನೆ)
ರಾಮಚಂದ್ರ ಎಂ, Ramachandra M
Rs. 54/-   Rs. 60

Latest Books
ವೈವಸ್ವತ : ಒಂದು ಮನ್ವಂತರದ ಹಾದಿ (ಕಾದಂಬರಿ)
ರೇಖಾ ಕಾಖಂಡಕಿ, Rekha Kakhandaki
Rs. 315/-   Rs. 350
ಸಾಮಾನ್ಯ ಜ್ಞಾನ (General Knowledge IAS, KAS)
ಗೈಡ್ ಸಂಪಾದಕೀಯ ಮಂಡಳಿ, Guide Editorial Board
Rs. 225/-   Rs. 250
ಅಸ್ಪೃಶ್ಯತೆ ವೈಕಂ ಸತ್ಯಾಗ್ರಹ
ಪೆರಿಯಾರ್, Periyar
Rs. 54/-   Rs. 60
ತ್ರಿಶಂಕು ನರಕ
ರೋಹಿತ್ ಚಕ್ರತೀರ್ಥ, Rohit Chakrathirtha
Rs. 99/-   Rs. 110


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.