Items
0
Total
  0.00 
Welcome Guest.

 
Rs. 150    
10%
Rs. 135/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 208
ಪುಸ್ತಕದ ಗಾತ್ರ : 1/8 Demy Size
ಕೋಡ್ : 187903

ಈ ಕೃತಿಯಲ್ಲಿ ಶ್ರೀ ಜಿ.ಟಿ. ನಾರಾಯಣರಾಯರ ನಾಲ್ಕು ನಿಡು ಲೇಖನಗಳಿವೆ. ಅವುಗಳಲ್ಲೆಲ್ಲ ಸಾಮಾನ್ಯವಾಗಿ ಮನುಷ್ಯಛಲದ ವಿವಿಧ ವರಸೆಗಳು ಹಾದು ಹೋಗಿರುವುದನ್ನು ಕಾಣುತ್ತೇವೆ. ಅವರೇ ಒಂದೆಡೆ ಹೇಳುವಂತೆ “ಸವಾಲು ಎಂಬುದು ಭೌತವಸ್ತುವಾಗಿರಬಹುದು; ವಿಜ್ಞಾನ ವಿಸ್ಮಯವಾಗಿರಬಹುದು; ಬೌದ್ಧಿಕ/ಆಧ್ಯಾತ್ಮಿಕ ಸಮಸ್ಯೆಯಾಗಿರಬಹುದು.. ಕೊನೆಗೆ ಅದೊಂದು ದೈನಂದಿನ ಜೇವನದ ಜಟಿಲ ಪ್ರಶ್ನೆಯೂ ಆಗಿರಬಹುದು.” ಅದನ್ನು ಸ್ವೀಕರಿಸುವ ಛಲ ಬದುಕಿನಲ್ಲಿ ನಾನಾ ಸನ್ನಿವೇಶಗಳಲ್ಲಿ ನಾನಾ ರೀತಿಗಳಲ್ಲಿ ಪ್ರಕಟವಾಗಬಹುದು. ಇಂಥವುಗಳಲ್ಲಿ ಮೂರರ ಚಿತ್ರಣ ಮೂರು ಲೇಖನಗಳಲ್ಲಿವೆ; ಯುವ ಪೀಳಿಗೆಯನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ‘ಸವಾಲನ್ನು ಎದುರಿಸುವ ಛಲ’ದ ವಿಶ್ಲೇಷಣೆ ಮತ್ತೊಂದು ಲೇಖನದಲ್ಲಿದೆ.

ನಡೆದ ಘಟನೆಗಳ ಆಧಾರದ ಮೇಲೆ ನಾಲ್ಕೂ ಲೇಖನಗಳು ಮೂಡಿಬಂದಿವೆ. ಇಲ್ಲಿ ಲೇಖಕರೇ ಪ್ರಮುಖ ಪಾತ್ರಧಾರಿ ಅಥವಾ ವೀಕ್ಷಕ. ಆದ್ದರಿಂದ ನಿರೂಪಣೆಗೆ ಹೆಚ್ಚಿನ ವಿಶ್ವಾಸಾರ್ಹತೆ ಬಂದಿದೆ, ಆತ್ಮವೃತ್ತಾಂತದ ಛಾಯೆಯೂ ಬಿದ್ದಿದೆ. ಲೇಖಗಳನ್ನು ಇಲ್ಲಿ ಪೋಣಿಸಿರುವುದು ಆಯಾ ಲೇಖನವನ್ನು ಬರೆದ ಕಾಲಾನುಕ್ರಮದಲ್ಲಿ. ಮೊದಲಿಗೆ ಬರೆದದ್ದು ಮೊದಲಿಗೆ, ಅನಂತರದ್ದು ಆಮೇಲೆ. ಆದರೆ ನಡೆದುಹೋದ ಸನ್ನಿವೇಶಗಳ ಕಾಲ ಚೌಕಟ್ಟುಗಳಿಗನುಗುಣವಾಗಿ ಈ ಲೇಖನಗಳನ್ನು ಓದಿದರೆ ಸಾಮುದಾಯಿಕ ಬದುಕಿನ ಕೆಲವು ಮಗ್ಗುಲುಗಳೂ ಕಾಲಾಂತರದಲ್ಲಿ ಅವುಗಳಲ್ಲಿ ಆಗುವ ಸ್ಥಿತ್ಯಂತರಗಳೂ ಗೋಚರಿಸುತ್ತವೆ.

ಮಡಿಕೇರಿಯ ಜಿ ಟಿ ನಾರಾಯಣರಾವ್ (1926-2008) ಅಂದಿನ ಮದರಾಸು ವಿಶ್ವವಿದ್ಯಾಲಯದ ಎಂ.ಎ. (ಗಣಿತ) ಪದವೀಧರರು (1947). ಗಣಿತದ ಉಪನ್ಯಾಸಕರಾಗಿದ್ದುದಲ್ಲದೆ ಅತ್ಯಂತ ಜನಪ್ರಿಯ ವಿಜ್ಞಾನ ಬರಹಗಾರರಾಗಿಯೂ ಅವರು ಪ್ರಸಿದ್ಧರು. ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಪ್ರಕಟಣೆಯಾದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಆಕಾಶ ವಿಜ್ಞಾನದ ಲೆಕ್ಕಾಚಾರಗಳ ಇವರ ತಿಳುವಳಿಕೆ ಇವರು ಬರೆದ್ ಪುಸ್ತಕಗಳ ಮೂಲಕ ಇಂದು ಜೀವಂತವಾಗಿದ್ದು ನಮಗೆ ಲಭ್ಯವಿದೆ. ಇವರು ಪ್ರಧಾನ ಸಂಪಾದಕರಾಗಿದ್ದ ‘ನವಕರ್ನಾಟಕ ವಿಜ್ಞಾನ ಪದವಿವರಣ ಕೋಶ’ ಮಾತ್ರವಲ್ಲದೇ ಇವರ ಹಲವಾರು ಅಮೂಲ್ಯ ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ.

ಲೇಖಕರ ಇತರ ಕೃತಿಗಳು
10%
ಶ್ರೀನಿವಾಸ ರಾಮಾನುಜನ್ : ....
ನಾರಾಯಣರಾವ್ ಜಿ ಟಿ, Narayanarao G T
Rs. 135    Rs. 122
10%
ವೈಜ್ಞಾನಿಕ ಮನೋಧರ್ಮ
ನಾರಾಯಣರಾವ್ ಜಿ ಟಿ, Narayanarao G T
Rs. 85    Rs. 77
Best Sellers
ಹಿಂದೀ ಕನ್ನಡ ಶಬ್ದಕೋಶ
ಗುರುನಾಥ ಜೋಶಿ , Gurunatha Joshi
Rs. 135/-   Rs. 150
ಮೈಕ್ರೋವೇವ್ ಅಡಿಗೆಗಳು
ವಿಜಯಲಕ್ಷ್ಮಿ ರೆಡ್ಡಿ ಕೆ ಪಿ, Vijayalakshmi Reddy K p
Rs. 144/-   Rs. 160
ಚೌಕಟ್ಟಿನಾಚೆ (ಕತೆಗಳು)
ಉಮೇಶ್ ದೇಸಾಯಿ, Umesh Desai
Rs. 108/-   Rs. 120
ಮಾವೋನ ಕೊನೆಯ ನರ್ತಕ (ಲೀ ಕುನ್‌ಕ್ಸಿನ್ ಆತ್ಮಕತೆ)
ಜಯಶ್ರೀ ಭಟ್, Jayashree Bhat
Rs. 198/-   Rs. 220

Latest Books
ಸಂಧಿಕಾಲ : ಕಾದಂಬರಿ
ವಸುಮತಿ ಉಡುಪ, Vasumathi Udupa
Rs. 153/-   Rs. 170
ಭಾರತದ ಸಂಸತ್ತು : ಒಂದು ಕಾರ್ಯನಿರತ ಪ್ರಜಾಪ್ರಭುತ್ವ
ಡಾ. ಬಿ ಎಲ್ ಶಂಕರ್ , Dr. B L Shankar
Rs. 720/-   Rs. 800
ಕಲಿಕೆಯ ಪೂರ್ವಾಪೇಕ್ಷಿತ ಕೌಶಲಗಳು : ಒಂದು ಪ್ರಾಯೋಗಿಕ ಕೈಪಿಡಿ
ಸಂಪಾದಕರು : ಡಾ. ಪ್ರತಿಭಾ ಕಾರಂತ್, Dr. Pratibha Karant
Rs. 135/-   Rs. 150
ಕೇರಳ ಕಾಂತಾಸಮ್ಮಿತ (ಮಲೆಯಾಳಂ ಕತೆಗಳು)
ಕಮಲಾ ಹೆಮ್ಮಿಗೆ, Kamala Hemmige
Rs. 234/-   Rs. 260


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.