Items
0
Total
  0.00 
Welcome Guest.

 
Rs. 165
10%
Rs. 149/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಮರಾಠಿ
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 148
ಪುಸ್ತಕದ ಗಾತ್ರ : 1/4 Crown Size
ISBN : 9788184674224
ಕೋಡ್ : 002281

ದೇವರ ಬಗೆಗಿನ ಕಲ್ಪನೆ ಇಂದು ನಿನ್ನೆಯದಲ್ಲ. ಮನುಷ್ಯನ ಬುದ್ಧಿ ವಿಕಾಸಗೊಳ್ಳಲು ಪ್ರಾರಂಭ ಆದಾಗಿನಿಂದಲೂ ಆತನನ್ನು ಕಾಡುತ್ತಿರುವ ಪ್ರಶ್ನೆ ಒಂದೇ - ದೇವರಿದ್ದಾನೆಯೇ ಇಲ್ಲವೇ ಎಂದು! ಜ್ಞಾನಿಗಳು ಇದಕ್ಕೆ ಉತ್ತರವನ್ನು ತಂತಮ್ಮಲ್ಲೇ ಕಂಡುಕೊಂಡರು. ಅಧ್ಯಾತ್ಮವಾದಿಗಳಿಗೆ ಮಾತ್ರ ಏನೇ ತಿಣುಕಾಡಿದರೂ ಇದಮಿತ್ಥಂ ಎಂದು ಹೇಳಲಾಗದ ಸಂದಿಗ್ಧ ಉಂಟಾದರೆ ನಿರೀಶ್ವರವಾದಿಗಳು ಖಡಾಖಂಡಿತವಾಗಿ ದೇವರ ಇರುವಿಕೆಯನ್ನು ಅಲ್ಲಗಳೆದಿದ್ದಾರೆ. ಈ ಅನಾದಿ - ಅನಂತ ವಿಶ್ವವು ಹಲವು ಪಂಡಿತೋತ್ತಮರ ಬುದ್ಧಿ ಮತ್ತೆಗೆ ಸಿಲುಕದ ಸೋಜಿಗವಾದರೂ ವಿಜ್ಞಾನಿಗಳು ಹೆಚ್ಚಿನಂಶ ನಿಗೂಢಗಳನ್ನು ಬಯಲಿಗೆಳೆದು ಪ್ರಯೋಗಸಹಿತ ಪ್ರಮಾಣೀಕರಿಸಿದ್ದಾರೆ. ಈಶ್ವರವಾದಿಗಳು ದೇವರು ನಿರಾಕಾರಿ, ಅಂತಃಚಕ್ಷುಗಳಿಂದ ಮಾತ್ರ ಅರಿಯುವ ಅಗೋಚರ ಶಕ್ತಿ ಎಂದರು. ಹಲವು ದೇವರುಗಳನ್ನು ಸೃಷ್ಟಿಸಿದರು, ತನ್ನಂತೆಯೇ ರೂಪ ಕೊಟ್ಟರು, ಗುಡಿಗಳಲ್ಲಿ ಬಂಧಿಸಿಟ್ಟರು. ಕಲ್ಲು ದೇವರ ವಿಗ್ರಹಕ್ಕೆ ಅಪಾರ ಪ್ರಮಾಣದ ಬೆಲೆಬಾಳುವ ಆಹಾರ ಪದಾರ್ಥಗಳನ್ನು ಪೂಜೆಯ ನೆಪದಲ್ಲಿ ಸುರಿದು ಪೋಲು ಮಾಡಿದರು. ಇಲ್ಲದ ದೇವರನ್ನು ಸೃಷ್ಟಿಸಿ ಮುಗ್ಧ ಜನರನ್ನು ನಂಬಿಸಿ ಸುಲಿಗೆ ಮಾಡಿದರು. ದೇವರ ಹೆಸರಿನಲ್ಲಿ ಮನುಷ್ಯ ಸ್ವಾರ್ಥಿಯಾಗತೊಡಗಿದ! ನಂಬಿಕೆ-ಅಪನಂಬಿಕೆ-ಮೂಢನಂಬಿಕೆ ಪರಸ್ಪರ ಮೇಲುಗೈಯಾಗಿ ಬೆಳೆಯತೊಡಗಿತು. ನಿರೀಶ್ವರವಾದಿಗಳು ಸ್ವತಂತ್ರವಾಗಿ ಯೋಚಿಸತೊಡಗಿದರು. ದೇವರ ಅಸ್ತಿತ್ವವನ್ನು ಪ್ರಾಚೀನರು ಒಪ್ಪಿದ್ದಾರೆ ಎಂಬುದು ಅದಕ್ಕೆ ಪುರಾವೆ ಖಂಡಿತ ಅಲ್ಲವೆಂದು ಅವರು ವಾದಿಸಿದರು. ಈ ಕೃತಿಯಲ್ಲಿ ಜುಗಲಬಂದಿಯಂತೆ ಈಶ್ವರವಾದಿ-ನಿರೀಶ್ವರವಾದಿ ತಂತಮ್ಮ ಅನಿಸಿಕೆಗಳನ್ನು ಪ್ರಸ್ತುತಪಡಿಸಿದಂತೆ ರೂಪಿಸಲಾಗಿದೆ. ಎಲ್ಲವೂ ದೈವ ನಿರ್ಮಿತವೆಂಬ ವಾದ ಈಶ್ವರವಾದಿಯದಾದರೆ ಈ ಭೌತಜಗತ್ತು ಕಾಲಾಂತರದಲ್ಲಿ ಉತ್ಕ್ರಾಂತಿಯಿಂದ ರೂಪುಗೊಂಡು ಬದಲಾಗುತ್ತಾ ಇಂದಿನ ಸ್ಥಿತಿ ತಲುಪಿದೆಯೆಂದು ಸ್ಪಷ್ಟನೇರ ಉತ್ತರಗಳಿಂದ ನಿರೀಶ್ವರವಾದಿ ಮನವರಿಕೆ ಮಾಡಿಕೊಟ್ಟಿದ್ದಾನೆ.

Best Sellers
ಎಚ್ಚೆತ್ತ ಚೇತನ
ಸ್ವಾಮಿ ವಿವೇಕಾನಂದ, Swami Vivekananda
Rs. 14/-   Rs. 15
ಬುದ್ಧ ಬದುಕು ನಿಜಸ್ವರೂಪದಲ್ಲಿ ಅರಿತವನೇ ಗೆಲ್ಲುವ ನಿರತ (ಬುದ್ಧ ಸಾಹಿತ್ಯ ಮಾಲೆ-15)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ಭಾರತೀಯ ಜನಪದ ಕತೆಗಳು
ರಾಮಾನುಜನ್ ಎ ಕೆ, Ramanujan A K
Rs. 131/-   Rs. 145
A Tiger For Malgudi
Narayan R K
Rs. 117/-   Rs. 130

Latest Books
ನನ್ನೊಳಗಿನ ನಾನು : ಬಿ ಎ ಮೊಹಿದೀನ್ ಆತ್ಮಕಥನ
ಮುಹಮ್ಮದ್ ಕುಳಾಯಿ, Mohammad Kulai
Rs. 225/-   Rs. 250
ಭಾರತ ಚರಿತ್ರೆಯಲ್ಲಿ ರೈತ
ಇರ್ಫಾನ್ ಹಬೀಬ್, Irfan Habib
Rs. 54/-   Rs. 60
ಮತ್ತೊಬ್ಬ ರಾಧೆ : ಕೀರ್ತನಕಾರ್ತಿ ಗಲಗಲಿ ಅವ್ವನವರನ್ನು ಕುರಿತು ನಾಟಕ
ಬಸವರಾಜ ಸಬರದ, Basavaraja Sabarada
Rs. 63/-   Rs. 70
ಗಾಂಧಿ ಅಂಬೇಡ್ಕರ್ ಮತ್ತು ಸಮಾಜವಾದ
ಬಾಪು ಹೆದ್ದೂರಶೆಟ್ಟಿ, Bapu Heddur Shetti
Rs. 108/-   Rs. 120


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.