Items
0
Total
  0.00 
Welcome Guest.

 
Rs. 250
10%
Rs. 225/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 376
ಪುಸ್ತಕದ ಗಾತ್ರ : 1/8 Demy Size
ಕೋಡ್ : 104957

ಒಳ್ಳೆಯ ಅಂಕಣ ಬರಹಗಳಿಗೆ ಆಟದ ಗುಣವಿರುತ್ತದೆ; ಬರಹಗಾರ ಆಟದ ನಿಯಮಗಳನ್ನು ರೂಪಿಸಿದರೂ, ಇದು ತಾನೊಬ್ಬನೇ ಆಡುವ ಆಟವಲ್ಲ ಎಂದೂ, ಓದುಗರನ್ನು ಹೆಚ್ಚು ಸಂಖ್ಯೆಯಲ್ಲಿ ಅಂಕಣಕ್ಕೆ ಸೆಳೆದಷ್ಟೂ ಆಟ ರೋಚಕವಾಗಿರುತ್ತದೆ ಎಂದೂ ಬಲ್ಲವನಾಗಿರುತ್ತಾನೆ. ಅನಂತಮೂರ್ತಿಯವರ ಪ್ರಸ್ತುತ ಅಂಕಣದ ಮುಕ್ಕಾಲುವಾಸಿ ಬರಹಗಳಿಗೆ, ವೈಚಾರಿಕವಾಗಿ ತನ್ನಂತಲ್ಲದ ಓದುಗರನ್ನು ಅಂಕಣದಿಂದ ಹೊರದೂಡದ, ಆದರೆ ಆಟದ ಕೆಚ್ಚನ್ನು ಮರೆಯದೇ ಅಂಕಣ ಸುತ್ತಿಸುವ ‘ಫೇರ್ ಪ್ಲೇ’ಯ ಸತ್ವ ಇರುವುದರಿಂದಲೇ, ಅವರ ಜೊತೆ ವಾಗ್ವಾದ ಸಾಧ್ಯವಾಗಿದೆ.

ಯು.ಆರ್. ಅನಂತಮೂರ್ತಿಯವರು ಹುಟ್ಟಿದ್ದು ೧೯೩೨ರಲ್ಲಿ, ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ. ೧೯೫೬ರಲ್ಲಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ. ಎ. ಪದವಿ ಪಡೆದರು; ೧೯೬೩ರಲ್ಲಿ ಕಾಮನ್ವೆಲ್ತ್ ಫೆಲೊಶಿಪ್ ಪಡೆದು ಇಂಗ್ಲೆಂಡಿಗೆ ಹೋಗಿ ಬರ್ಮಿಂಗಂ ವಿಶ್ವವಿದ್ಯಾಲಯದಿಂದ ಪಿ.ಎಚ್ಡಿ ಗಳಿಸಿದರು; ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ, ಮೈಸೂರಿನ ರೀಜನಲ್ ಕಾಲೇಜಿನಲ್ಲಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು; ಅಮೆರಿಕದ ಅಯೋವಾ ವಿಶ್ವವಿದ್ಯಾಲಯದಲ್ಲಿ, ಟಫ್ಟ್ಸ್ ವಿಶ್ವವಿದ್ಯಾಲಯದಲ್ಲಿ, ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ, ಕಾರ್ನೆಗಿ ವಿಶ್ವವಿದ್ಯಾಲಯದಲ್ಲಿ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಫುಲ್ಬ್ರೈಟ್ ಪ್ರೊಫೆಸರ್ ಆಗಿ ಬೋಧಿಸಿದರು; ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷ, ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ನ ನಿರ್ದೇಶಕ, ಹೀಗೆ ಹಲವು ಹುದ್ದೆಗಳನ್ನು ನಿರ್ವಹಿಸಿದರು. ಸಂಸ್ಕಾರ ಅನಂತಮೂರ್ತಿಯವರ ಮೊದಲ ಕಾದಂಬರಿ. ಇದು ಭಾರತದ ಭಾಷೆಗಳಿಗಲ್ಲದೆ, ಯೂರೋಪಿನ ಹಾಗೂ ಏಷ್ಯದ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದೆ; ಚಲನಚಿತ್ರವಾಗಿಯೂ ಪ್ರಸಿದ್ಧವಾಗಿದೆ. ಎಂದೆಂದೂ ಮುಗಿಯದ ಕಥೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಸೂರ್ಯನ ಕುದುರೆ, ಪಚ್ಚೆ ರಿಸಾರ್ಟ್ ಅವರ ಮುಖ್ಯ ಕಥಾ ಸಂಕಲನಗಳು. ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ, ಶತಮಾನದ ಕವಿ ಯೇಟ್ಸ್, ಶತಮಾನದ ಕವಿ ರಿಲ್ಕೆ ಅವರ ಕವನ ಸಂಕಲನಗಳು. ಭಾರತೀಪುರ, ಅವಸ್ಥೆ, ಭವ, ದಿವ್ಯ ಅವರ ಇತರ ಕಾದಂಬರಿಗಳು. ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ, ಬೆತ್ತಲೆ ಸೇವೆ ಯಾಕೆ ಕೂಡದು?, ಯುಗಪಲ್ಲಟ, ನವ್ಯಾಲೋಕ, ವಾಲ್ಮೀಕಿಯ ನೆವದಲ್ಲಿ, ಆಚೀಚೆ, ಮಾತು ಸೋತ ಭಾರತ, ಕಾಲಮಾನ ಮೊದಲಾದ ವಿಮರ್ಶಾತ್ಮಕ ಚಿಂತನಪರ ಪ್ರಬಂಧ ಸಂಕಲನಗಳು ಪ್ರಕಟವಾಗಿವೆ. ಅನಂತಮೂರ್ತಿಯವರು ಪಡೆದಿರುವ ಪ್ರಶಸ್ತಿ ಪುರಸ್ಕಾರಗಳಲ್ಲಿ ಹಲವು ವಿಶ್ವವಿದ್ಯಾಲಯಗಳ ಗೌರವ ಡಿ.ಲಿಟ್, ಹೋಮಿಬಾಬಾ ಫೆಲೊಶಿಪ್, ಮಾಸ್ತಿ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಭಾರತ ಸರ್ಕಾರ ನೀಡುವ ಪದ್ಮಭೂಷಣ ಪ್ರಶಸ್ತಿ ಮುಖ್ಯವಾದುವು. ೨೦೦೨ರಲ್ಲಿ ಅವರು ತುಮಕೂರಿನಲ್ಲಿ ನಡೆದ ೬೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

uploads/authorimages/616.jpg
ಲೇಖಕರ ಇತರ ಕೃತಿಗಳು
Rs. 225    Rs. 203
10%
ಕನ್ನಡ ಕಾವ್ಯ ಸಂಗ್ರಹ
ಅನಂತಮೂರ್ತಿ ಯು ಆರ್, Ananthamurthy U R
Rs. 55    Rs. 50
Rs. 150    Rs. 135
Best Sellers
ಮುದ್ದುರಾಮನ ಬದುಕು-ಬೆಳಕು - ಭಾಗ - 2
ಶಿವಪ್ಪ ಕೆ ಸಿ, Shivappa K C
Rs. 135/-   Rs. 150
ಸರ್ ಎಂ ವಿಶ್ವೇಶ್ವರಯ್ಯ (ವಿಶ್ವಮಾನ್ಯರು)
ಇಂದಿರಾ ಹೆಗ್ಗಡೆ, Indira Hegde
Rs. 20/-   Rs. 25
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ (ಮಲೆನಾಡಿನ ರೋಚಕ ಕತೆಗಳು ಭಾಗ 3)
ಗಿರಿಮನೆ ಶ್ಯಾಮರಾವ್, Girimane Shyamarao
Rs. 117/-   Rs. 130
ಕೌಟುಂಬಿಕ ಕಾನೂನು ಕೈಪಿಡಿ
ಗೀತಾ ಕೃಷ್ಣಮೂರ್ತಿ, Geetha Krishnamurthy
Rs. 180/-   Rs. 200

Latest Books
ಆನಂದ ಕುಮಾರಸ್ವಾಮಿ
ದೀಕ್ಷಿತ್ ಸಿ ಕೆ ವೈ, Deekshith C K Y
Rs. 135/-   Rs. 150
ಹಾಯ್ ಅಂಗೋಲಾ : ನಾನೊಬ್ಬ ಮುಸಾಫಿರ್... ಪಯಣವೇ ನನ್ನ ಬದುಕು
ಪ್ರಸಾದ್ ನಾಯ್ಕ್, Prasad Naik
Rs. 216/-   Rs. 240
ಆದಿವಾಸಿ ಹೋರಾಟಗಾರ ಕೊಮುರಂ ಭೀಮು : ವರ್ತಮಾನದ ಮುಖಾಮುಖಿ
ವರವರರಾವು, Varavara Rao
Rs. 72/-   Rs. 80
ಅಸುರ
ಆನಂದ್ ನೀಲಕಂಠನ್, Anand Neelakantan
Rs. 225/-   Rs. 250


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.