|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೦೬ನೇ ಸಾಲಿನ ಪ್ರಶಸ್ತಿಯನ್ನು ಗಳಿಸಿದ ಶ್ರೀ ರಾಘವೇಂದ್ರ ಪಾಟೀಲರು ವೃತ್ತಿಯಿಂದ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರಾಗಿದ್ದರೂ, ತಮ್ಮ ಮೂಲ ಸಾಹಿತ್ಯಿಕ ಪ್ರವೃತ್ತಿಯನ್ನು ಉಳಿಸಿ, ಬೆಳೆಸಿಕೊಂಡು ಬಂದು, ಅದರಲ್ಲಿ ಅತ್ಯುಚ್ಚ ಸಾಧನೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾವ್ಯ ರಚನೆಯ ಕ್ಷೇತ್ರದಲ್ಲಿ ಕೈ ಆಡಿಸಿದರೂ, ಕಥೆ-ಕಾದಂಬರಿಗಳ ಕ್ಷೇತ್ರವನ್ನು ಆಪ್ತವಾಗಿ ಅಪ್ಪಿಕೊಂಡ ಅವರು ಕನ್ನಡನಾಡಿನ ಪ್ರಮುಖ ಕತೆಗಾರರಾಗಿ, ಕಾದಂಬರಿಕಾರರಾಗಿ ಮನ್ನಣೆಯನ್ನು ಪಡೆದುಕೊಂಡಿದ್ದಾರೆ. ವಸ್ತು ವೈವಿಧ್ಯ ಮತ್ತು ಭಾಷಿಕ ವೈಶಿಷ್ಟ್ಯಗಳಿಂದ ಒಂದು ರೀತಿಯ ಅನನ್ಯತೆಯನ್ನು ಅವರು ಮೆರೆದಿದ್ದಾರೆ. ಅವರ ಐದು ಕಥಾಸಂಕಲನಗಳು ಮತ್ತು ಎರಡು ಕಾದಂಬರಿಗಳು ಕನ್ನಡ ಸಾಹಿತ್ಯಕ್ಕೆ ಅವರು ನೀಡಿರುವ ವಿಶಿಷ್ಟ ಕಾಣಿಕೆಗಳೇ ಆಗಿದ್ದು ಅವರನ್ನು ನವ್ಯೋತ್ತರ ಸಾಹಿತ್ಯದ ಪ್ರತಿಷ್ಠಿತ ಲೇಖಕರನ್ನಾಗಿಸಿವೆ. ವಿಮರ್ಶೆ ಮತ್ತು ಪ್ರವಾಸಕಥನದ ಕ್ಷೇತ್ರಕ್ಕೂ ಪಾಟೀಲರು ನೀಡಿರುವ ಕೊಡುಗೆ ಗಮನಾರ್ಹವಾಗಿದೆ. ಈ ಕೃತಿಗಳು ಅವರ ಸೂಕ್ಷ್ಮ ಅವಲೋಕನ ಹಾಗೂ ವಸ್ತುನಿಷ್ಠ ದೃಷ್ಟಿಯ ಪ್ರತೀಕವಾಗಿ ನಿಲ್ಲುತ್ತವೆ.
|
| |
|
|
|
|
|
|
|
|
|