|
|
|

 |
Rs. 150 10% |
|
Rs. 135/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2015 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
164 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184675726 |
ಕೋಡ್ |
: |
002449 |
ಯೂರೋಪಿನ ಸಾಹಿತ್ಯ, ಸಂಸ್ಕೃತಿ ಮತ್ತು ವೈಜ್ಞಾನಿಕ ಬೆಳವಣಿಗೆ ಕುರಿತು ಹೇಳುವಾಗ ಅವೆಲ್ಲಕ್ಕೂ ಪ್ರಾಚೀನ ಗ್ರೀಸ್ ತೊಟ್ಟಿಲು ಎನ್ನುವುದುಂಟು. ಆದರೆ ಮತಧರ್ಮದ ವಿಚಾರಕ್ಕೆ ಬಂದರೆ ಯಹೂದಿ ಮತ್ತು ಕ್ರೈಸ್ತ ಮತಗಳು ಪ್ರಾಚೀನ ಗ್ರೀಸಿನ ಮತವನ್ನು ಪೂರ್ತಿಯಾಗಿ ನಿರಾಕರಿಸಿವೆ. ಇತಿಹಾಸದ ಶಿಸ್ತನ್ನು ಗ್ರೀಸ್ ಅಪಾರವಾಗಿ ಬೆಳೆಸಿಕೊಂಡಿತ್ತು. ಆದರೂ ಪ್ರಾಚೀನ ಗ್ರೀಸಿನ ತತ್ತ್ವಶಾಸ್ತ್ರವನ್ನು ನಿರೂಪಿಸುವಾಗ ಅಂದಿನ ಚಾರಿತ್ರಿಕ ಸನ್ನಿವೇಶವನ್ನು ಗೌಣವಾಗಿಸಿ, ಪ್ರತಿಪಾದನೆಗಳನ್ನು ಸ್ವಯಮುತ್ಪಾದಿತ ಎನ್ನುವಂತೆ ಚಿತ್ರಿಸುವುದು ರೂಢಿಯಾಗಿಹೋಗಿತ್ತು. ಸಾಕ್ರಟೀಸ್, ಪ್ಲೇಟೊ ಮತ್ತು ಅರಿಸ್ಟಾಟಲ್ ಗುಲಾಮಿ ವ್ಯವಸ್ಥೆಯ ಕಾಲದಲ್ಲಿದ್ದವರು, ಅದನ್ನು ಬೆಂಬಲಿಸಿದ್ದವರು. ಅದನ್ನು ಮರೆತು ಅವರ ದಾರ್ಶನಿಕ ಕೊಡುಗೆಗಳನ್ನು ಅರ್ಥೈಸಲಾಗದೆಂದು ಹೇಳಿ ಜಾರ್ಜ್ ಥಾಮ್ಸನ್, ಬೆಂಜಮಿನ್ ಫ್ಯಾರಿಂಗ್ಟನ್ ಮೊದಲಾದವರು ಗ್ರೀಸಿನ ತತ್ತ್ವಶಾಸ್ತ್ರದ ಇತಿಹಾಸಕ್ಕೆ ಅನನ್ಯವಾದ ತಿರುವು ಕೊಟ್ಟರು. ಅಯೋನಿಯಾದ ಪಂಥ, ಥೇಲಿಸ್, ಹೆರಾಕ್ಲಿಟಿಸ್, ಡೆಮಾಕ್ರಿಟಸ್, ಮುಂತಾದವರು ಆರಂಭಿಕ ಹಂತಗಳಲ್ಲಿ ವಿಶಿಷ್ಟ ಚಿಂತನಾ ಪರಂಪರೆಯೊಂದನ್ನು ಪ್ರಾಚೀನ ಗ್ರೀಸಿನಲ್ಲಿ ಬೆಳೆಸಿದ್ದರು.
ಡಾ. ಆರ್. ದತ್ತ ಕೊಲ್ಕತ್ತಾದಲ್ಲಿ ತತ್ತ್ವಶಾಸ್ತ್ರ ಪ್ರಾಧ್ಯಾಪಕರು. ಡಾ. ದೇವಿಪ್ರಸಾದ್ ಚಟ್ಟೋಪಾಧ್ಯಾಯರ ಮಾರ್ಗದರ್ಶನದಲ್ಲಿ ಅಚ್ಚುಕಟ್ಟಾಗಿ ಮತ್ತು ಸರಳವಾಗಿ ಗ್ರೀಸಿನ ತತ್ತ್ವಶಾಸ್ತ್ರ ಶಾಖೆಗಳ ನಿರೂಪಣೆಯನ್ನವರು ಮಾಡಿದ್ದಾರೆ. ಸಾಮಾನ್ಯರು ಮತ್ತು ವಿದ್ವಾಂಸರು ಏಕಪ್ರಕಾರವಾಗಿ ಸ್ವಾಗತಿಸಲು ಈ ಗ್ರಂಥವು ಅರ್ಹವಾಗಿದೆ. ಚಟ್ಟೋಪಾಧ್ಯಾಯ ಅವರು ಅತ್ಯುಪಯುಕ್ತವಾದ ಉಪಸಂಹಾರ ರೂಪದ ಅಧ್ಯಾಯವನ್ನು ತಾವೇ ಬರೆದು ಸೇರಿಸಿದ್ದಾರೆ.
ತತ್ತ್ವಶಾಸ್ತ್ರದಲ್ಲಿ ಆಸಕ್ತಿ ಇರುವವರು ಅಗತ್ಯವಾಗಿ ಪರಾಮರ್ಶಿಸಬೇಕಾದ ಗ್ರಂಥ ಇದು. ಅನುವಾದಕರಾದ ಪ್ರೊ. ಟಿ. ವೆಂಕಟೇಶಮೂರ್ತಿ ಬೆಂಗಳೂರಿನ ಆಚಾರ್ಯ ಪಾಠಶಾಲಾ ಕಾಲೇಜಿನ ಪ್ರಾಚಾರ್ಯರಾಗಿದ್ದವರು, ಇಂಗ್ಲಿಷ್ ಪ್ರಾಧ್ಯಾಪಕರು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ದಕ್ಷಿಣ ಭಾರತದ ಪ್ರಾದೇಶಿಕ ಘಟಕದಲ್ಲಿ ವಿವಿಧ ಭಾಷೆಗಳ ಸಾಹಿತ್ಯದ ಅನುವಾದಗಳ ಸಂಯೋಜಕರಾಗಿದ್ದವರು. ಇಂಗ್ಲಿಷ್ ಪ್ರಾಧ್ಯಪಕರಾಗಿದ್ದ ಶ್ರೀ ವಿಜಯವಾವನ ಮತ್ತು ಡಾ. ಜಿ. ರಾಮಕೃಷ್ಣ ಅನುವಾದದ ಕೆಲಸದಲ್ಲಿ ಭಾಗಶಃ ಭಾಗವಹಿಸಿದ್ದಾರೆ.
|
| | |
|
|
|
|
|
|
|