Items
0
Total
  0.00 
Welcome Guest.

 
ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೊ
ಲೇಖಕರು: ರಾವ್ ಜಾದವ್ ಅ ನಾ, Rao Jadhav A N

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 70
20%
Rs. 56/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Crown Size
ISBN : 9788184670523
ಕೋಡ್ : 002331

ಪೂರ್ಣಚಂದ್ರ ತೇಜಸ್ವಿಯವರು ಕಥೆ-ಕಾದಂಬರಿಗಳನ್ನಷ್ಟೇ ಅಲ್ಲದೆ, ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ನಿರಂತರ ಕೃಷಿಮಾಡಿದವರು. ಅವರು ಬರೆದದ್ದು ಒಂದೇ ನಾಟಕ. ಅದು ಯಮಳ ಪ್ರಶ್ನೆ. ಆ ನಂತರ ಅವರು ನಾಟಕ ಬರೆವ ಗೋಜಿಗೆ ಹೋಗಲೇ ಇಲ್ಲ. ನನಗೆ ರಂಗ ಕಲೆಯ ಬಗ್ಗೆಯಾಗಲೀ, ನಾಟಕಗಳ ಬಗ್ಗೆಯಾಗಲೀ ಹೆಚ್ಚು ಪರಿಶ್ರಮ ಇಲ್ಲ ಎಂದೇ ಹೇಳುತ್ತಿದ್ದರು. ಆದರೂ ರಂಗಭೂಮಿಗೂ ಅವರಿಗೂ ಅಪಾರ ನಂಟು. ಅದು ಒಬ್ಬ ನಾಟಕಕಾರನಿಗಿಂತ ಹೆಚ್ಚೆಂದೇ ಹೇಳಬಹುದು. ತಬರನ ಕಥೆ, ತುಕ್ಕೋಜಿ, ಕುಬಿ ಮತ್ತು ಇಯಾಲ, ಅಬಚೂರಿನ ಪೋಸ್ಟಾಫೀಸು, ಚಿದಂಬರ ರಹಸ್ಯ, ಕಿರಗೂರಿನ ಗಯ್ಯಾಳಿಗಳು, ಕೃಷ್ಣೇಗೌಡರ ಆನೆ, ಜುಗಾರಿ ಕ್ರಾಸ್... ಹೀಗೆ ಅವರ ಸಾಲು ಸಾಲು ಕಥೆ-ಕಾದಂಬರಿಗಳು ರಂಗವೇರಿ ವಿಜೃಂಭಿಸಿವೆ. ಬಹುಶಃ ಇನ್ನಾರ ಕೃತಿಗಳೂ ಹೀಗೆ ರಂಗವೇರಿದ ಉದಾಹರಣೆಗಳಿಲ್ಲ. ಅವರ ಕೃತಿಗಳ ವೈಶಿಷ್ಟ್ಯವೇ ಅಂಥದ್ದು. ಪ್ರತಿಯೊಂದು ಕೃತಿಯು ಕೌತುಕ ಹುಟ್ಟಿಸುವ ಕಥಾನಕಗಳು. ಅವರ ಕರ್ವಾಲೊ ಕೂಡ ಅಂಥದ್ದೇ ಒಂದು ಕೃತಿ. ಜೀವಿಪರಿಸರದ ಹಿನ್ನೆಲೆಯಲ್ಲಿ, ಆಸಕ್ತಿ ಹುಟ್ಟಿಸುವ ಕುತೂಹಲಕಾರಿ ಕಥಾ ಹಂದರವನ್ನೊಳಗೊಂಡಿದ್ದ ಕರ್ವಾಲೊ ಕಾದಂಬರಿಯನ್ನು ಶ್ರೀ. ಅ.ನಾ.ರಾವ್ ಜಾದವ್ ನಾಟಕವಾಗಿ ರೂಪಾಂತರಿಸಿದ್ದಾರೆ. ಕಾದಂಬರಿಯ ಲೇಖಕರೇ ನಾಟಕದ ಪಾತ್ರವಾಗಿ ರಂಗದ ಮೇಲೆ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಅವರ ಕುಂಟುಂಬದ ಸದಸ್ಯರು, ಜೀವಿವಿಜ್ಞಾನಿ ಕರ್ವಾಲೊ, ಮಂದಣ್ಣ, ಲಕ್ಷ್ಮಣ, ಪ್ಯಾರಾ, ಪ್ರಭಾಕರ, ನಾರ್ವೆ ರಾಮಯ್ಯ, ಕರಿಯ ಮತ್ತು ಎಂಗ್ಟ ಹೀಗೆ ನಾಟಕದ ಎಲ್ಲ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ.

ಅ ನಾ ರಾವ್ ಜಾದವ್ ಹತ್ತು-ಹಲವಾರು ಹವ್ಯಾಸಗಳುಳ್ಳ ವ್ಯಕ್ತಿ. ನಟನೆ, ನಾಟಕ ರಚನೆ, ನಿರ್ದೇಶನ, ಚಾರಣ, ಛಾಯಾಗ್ರಹಣ, ಬರವಣಿಗೆ, ಪಕ್ಷಿವೀಕ್ಷಣೆ, ಮರ-ಗಿಡಗಳ ಅಧ್ಯಯನ... ಹೀಗೆ ಅನೇಕ ಕ್ಷೇತ್ರಗಳನ್ನು ಹಚ್ಚಿಕೊಂಡವರು. ಅನೇಕ ನಾಟಕಗಳಲ್ಲಿ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಂಗದಲ್ಲಿ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’ ಮತ್ತು ‘ಕರ್ವಾಲೊ’ ಕೃತಿಗಳನ್ನಾಧರಿಸಿ ನಾಟಕಗಳನ್ನು ರಚಿಸಿದ್ದಾರೆ. ‘ಬೆಕ್ಕಿಗೆ ಘಂಟೆ ಕಟ್ಟಿದವರು ಯಾರು?’ ಎಂಬ ಮಕ್ಕಳ ನಾಟಕವನ್ನೂ ರಚಿಸಿದ್ದಾರೆ. ‘ಹಿಮಗಿರಿಯ ಕಣಿವೆಗಳಲ್ಲಿ’ ಇವರ ಪ್ರಕಟಗೊಂಡಿರುವ ಚಾರಣ ಕಥನ ಕೃತಿ. ‘ಪ್ರಕೃತಿ-ಪರಂಪರೆ’ ಕುರಿತಾದ ಇವರ ಅಸಂಖ್ಯ ಚಿತ್ರ-ಲೇಖನಗಳು ನಾಡಿನ ಪ್ರಸಿದ್ಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಹಾಗೇ ಇವರ ಅನೇಕ ಹನಿಗವನಗಳೂ ಪ್ರಕಟಗೊಂಡಿವೆ. ಇವರ ಛಾಯಾಚಿತ್ರಗಳು ರಾಷ್ಟ್ರಮಟ್ಟದ ಪ್ರಶಸ್ತಿ - ಪುರಸ್ಕಾರಗಳನ್ನು ಪಡೆದಿವೆ. ನಮ್ಮ ಸುತ್ತಮುತ್ತಲಿನ ಮರ-ಗಿಡಗಳು ಮತ್ತು ಪಕ್ಷಿ ಸಮೂಹಗಳ ಮಾಹಿತಿಯನ್ನು ಸಹ ಒದಗಿಸಬಲ್ಲರು. ದೇಶದ ಉದ್ದಗಲಕ್ಕೂ ‘ಚಾರಣ’ವೆಂದು ಕಾಡು-ಮೇಡು ಅಲೆದಿದ್ದಾರೆ. ನಾಟಕ ಪ್ರದರ್ಶನಗಳನ್ನು ನೀಡುತ್ತಿರುವ, ಇವರ ‘ರಂಗ ವಿಸ್ಮಯ’ ತಂಡದ ಮೂಲಕ ಇದೀಗ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಸುವುದರೊಂದಿಗೆ ಅಭಿನಯದ ಪಾಠಗಳನ್ನೂ ಬೋಧಿಸುತ್ತಿದ್ದಾರೆ.

ಲೇಖಕರ ಇತರ ಕೃತಿಗಳು
20%
ಪೂರ್ಣಚಂದ್ರ ತೇಜಸ್ವಿಯವರ ಕಿರಗೂರಿನ ....
ರಾವ್ ಜಾದವ್ ಅ ನಾ, Rao Jadhav A N
Rs. 50    Rs. 40
20%
ತೇಜಸ್ವಿ ಪರಿಸರ ಕಥಾಪ್ರಸಂಗ
ರಾವ್ ಜಾದವ್ ಅ ನಾ, Rao Jadhav A N
Rs. 60    Rs. 48
Best Sellers
ಮಹಾಭಾರತ (18 ಪರ್ವಗಳು)

Rs. 621/-   Rs. 690
ಅರಮನೆ ಗುಡ್ಡದ ಕರಾಳ ರಾತ್ರಿಗಳು (ಮಲೆನಾಡಿನ ರೋಚಕ ಕತೆಗಳು ಭಾಗ-೨)
ಗಿರಿಮನೆ ಶ್ಯಾಮರಾವ್, Girimane Shyamarao
Rs. 117/-   Rs. 130
ಬಿಗ್ ಥಿಂಕಿಂಗ್ (ವಸಂತ ಪ್ರಕಾಶನ)
ರಾಘವೇಂದ್ರರಾವ್ ಎಂ ಎಲ್, Ragahvendrarao M L
Rs. 81/-   Rs. 90
ಕನ್ನಡ ಕನ್ನಡಿಗ ಕರ್ನಾಟಕ
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 252/-   Rs. 280

Latest Books
ಗತಿ ಸ್ಥಿತಿ ಮತ್ತೆಲ್ಲ
ಗಿರಿ, Giri
Rs. 405/-   Rs. 450
ಕರ್ನಲ್‌ನಿಗೆ ಯಾರೂ ಬರೆಯುವುದಿಲ್ಲ
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್, Gabriel Garcia Marquez
Rs. 72/-   Rs. 80
ಮರೆತು ಹೋದ ಮೈಸೂರಿನ ಪುಟಗಳು
ಧರ್ಮೇಂದ್ರ ಕುಮಾರ್ ಅರೇನಹಳ್ಳಿ, Dharmendra Kumar Arena
Rs. 113/-   Rs. 125
ಜಾತಿ ವ್ಯವಸ್ಥೆ : ಸಮಸ್ಯೆ ಸವಾಲುಗಳು
ಬಾಬು ಜಗಜೀವನರಾಮ್, Babu Jagajeevanram
Rs. 108/-   Rs. 120


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.