|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಾಗದ ಮಡಿಕೆಗಳಲ್ಲಿ ಪಠ್ಯಪುಸ್ತಕದ ಗಣಿತವನ್ನು ಮೊದಲಿಗೆ ಪರಿಚಯಿಸಿದವರು ತಂದನಂ ಸುಂದರರಾಯರು. ಇವರ ಪುಸ್ತಕ ಪ್ರಕಟವಾದದ್ದು 1895ರಲ್ಲಿ. ಅಂದಿನಿಂದ ಇಂದಿನವರೆಗೆ ಕಾಗದ ಮಡಿಸುವ ಕಲೆ(ಒರಿಗಾಮಿ)ಗೂ ಗಣಿತಕ್ಕೂ ಸಂಬಂಧ ಬೆಳೆಯುತ್ತಲೇ ಇದೆ. ನಮ್ಮ ದೇಶದಲ್ಲೂ ಸಹಾ ಬದಲಾದ ಪಠ್ಯಕ್ರಮಕ್ಕೆ ಒರಿಗಾಮಿ ಮಾದರಿಗಳನ್ನು ಪರಿಚಯಿಸುವ ಪ್ರಯತ್ನಗಳು ಆಗಿದ್ದರೂ ಸಂಪೂರ್ಣವಾಗಿ 11ನೇ ತರಗತಿಯವರೆಗಿನ ಗಣಿತ ಪರಿಕಲ್ಪನೆಗಳನ್ನು ಆಧರಿಸಿದ ಪುಸ್ತಕ ಇದೊಂದೇ ಆಗಿದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಗಣಿತದಲ್ಲಿ ಮತ್ತು ಒರಿಗಾಮಿಯಲ್ಲಿ ಆಸಕ್ತಿ ಉಳ್ಳವರಿಗೆಲ್ಲ ಈ ಕೃತಿ ಬಹಳ ಉಪಯುಕ್ತವಾಗಿದೆ.
|
ಶ್ರೀ ವಿ.ಎಸ್.ಎಸ್. ಶಾಸ್ತ್ರಿ ಬಹುಮುಖ ಚಟುವಟಿಕೆ ಹಮ್ಮಿಕೊಂಡಿರುವ ಸದಾ ಕ್ರಿಯಾಶೀಲ ವ್ಯಕ್ತಿ. ಗಣಿತ ಸಂವಹನಕಾರರು, ಓರಿಗಾಮಿ ಕುಶಲಿ. ಬ್ಯಾಂಕ್ನಲ್ಲಿ ಉದ್ಯೋಗಿ. ಸಾಹಿತ್ಯರಚನೆ-ಅನುವಾದಗಳನ್ನು ಮಾಡುವುದರಲ್ಲಿ ಆಸಕ್ತಿ. ಅರವಿಂದ ಗುಪ್ತ ಬರೆದ ಪ್ರಯೋಗ, ಚಟುವಟಿಕೆಗಳ ನಾಲ್ಕು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಇತ್ತೀಚಿನ ಕೃತಿ ‘ನೀವೇ ಮಾಡಿ : ಪ್ಲೇಟೋನ ಘನಾಕಾರಗಳು’ ಗಣಿತ ಸಂವತ್ಸರ ಮಾಲಿಕೆಯಲ್ಲಿ ಬಂದಿದೆ. ಇವೆಲ್ಲ ನವಕರ್ನಾಟಕದಿಂದ ಪ್ರಕಟಗೊಂಡಿವೆ. ಸುಮಾರು ಎಂಟುನೂರಕ್ಕೂ ಮಿಗಿಲಾಗಿ ಓರಿಗಾಮಿ ಬಗ್ಗೆ ಕಾರ್ಯಾಗಾರಗಳನ್ನು ದೇಶಾದ್ಯಾಂತ ನಡೆಸಿದ್ದಾರೆ. ಕರ್ನಾಟಕ ಸರ್ಕಾರ ನೀಡುವ ವಿಷನ್ ಅವಾರ್ಡ್ ಇವರಿಗೆ ಬಂದಿದೆ.
|
|
| |
|
|
|
|
|
|
|
|
|