Items
Total
   
 
Welcome Guest.

 
Rs. 40
20%
Rs. 32/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/8 Demy Size
ISBN : 9788184670219
ಕೋಡ್ : 001226

ಕರುಣಾಳು ಬುದ್ಧ, ಮಾನವೀಯ ಅನುಕಂಪೆಯ ಸಾಕಾರಮೂರ್ತಿ ಬಸವೇಶ್ವರ ಹಾಗೂ ಕಹಿ ಉಂಡು ಕರ್ತೃತ್ವ ಶಕ್ತಿಯಿಂದ ಕೀರ್ತಿ ಶಿಖರಕ್ಕೇರಿದ ಬಾಬಾಸಾಹೇಬ ಅಂಬೇಡ್ಕರ್ ಈ ಮೂವರೂ ಭಿನ್ನ ಕಾಲಮಾನದಲ್ಲಿ ವಿಭಿನ್ನ ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ಬಂದವರಾದರೂ, ಇವರನ್ನು ಒಂದೇ ಸೂತ್ರದಲ್ಲಿ ಹಿಡಿದಿರಿಸಬಹುದಾಗಿದೆ. ಸಮತೆಯೇ ಈ ಸೂತ್ರ. ಮಾನವರೆಲ್ಲ ಒಂದೆ, ಅವರೆಲ್ಲ ಸಮಾನರು. ವಿಷಮತೆ, ಶೋಷಣೆಗಾಗಿ ನಿರ್ಮಿತ ಕೃತ್ರಿಮ ವ್ಯವಸ್ಥೆ ಎಂಬುದನ್ನು ಈ ಮೂವರೂ ಅರಿತುಕೊಂಡಿದ್ದರು. ಕರುಣಾರ್ದ್ರ ಹೃದಯಿಗಳಾದ ಇವರು ಮಾನವೀಯ ಅನುಕಂಪೆಯನ್ನು ತಮ್ಮ ರೋಮರೋಮಗಳಲ್ಲಿ ಇಂಗಿಸಿಕೊಂಡವರು. ಸಮಾಜಜೀವಿಯಾಗಿರುವ ಮಾನವ ಪ್ರಾಣಿಯ ದುಃಖದ ತೀವ್ರ ಅರಿವು ಉಳ್ಳ ಇವರು ಅಷ್ಟೇ ತೀವ್ರ ಚಿಂತಕರೂ ಆಗಿದ್ದರು. ಲೋಕೋತ್ತರ ಪ್ರತಿಭೆಯ ಈ ಮಹಾ ಪುರುಷರು ಮಾನವೀಯ ದುಃಖವನ್ನು ಕುರಿತು ಆಳವಾಗಿ ಚಿಂತಿಸಿ, ತಾತ್ವಿಕವಾಗಿ ಅನ್ವೇಷಿಸಿ, ಪರಿಹಾರೋಪಾಯಗಳನ್ನು ಕಂಡುಹಿಡಿದು ಕಾರ್ಯಪ್ರಣಾಲಿಯನ್ನು ರೂಪಿಸಿದವರು. ಕವಿ ಹೃದಯಿಗಳೂ, ಚಿಂತನಶೀಲರೂ ಆದ ಮೂಡ್ನಾಕೂಡು ಚಿನ್ನಸ್ವಾಮಿಯವರು ತಮ್ಮ ಕಿರಿದಾದರೂ ಪಿರಿದರ್ಥವುಳ್ಳ ಈ ಗ್ರಂಥದಲ್ಲಿಯ ಬುದ್ಧ ಚಳವಳಿ, ಬಸವ ಚಳವಳಿ, ಬಾಬಾಸಾಹೇಬ ಚಳವಳಿ ಎಂಬ ಮೂರು ಲೇಖನಗಳನ್ನು ‘ಸಮತೆ’ಯ ಸೂತ್ರದಲ್ಲಿಯೇ ಪೋಣಿಸಿದ್ದಾರೆ. ಜೀವಪರ ದೃಷ್ಟಿಕೋನವುಳ್ಳ ಪರಿವರ್ತನವಾದಿ ಆಂದೋಳನಗಳೆಂದೇ ಕರೆಯಬಹುದಾದ ಈ ಮೂರು ಚಳವಳಿಗಳನ್ನು ಚಿನ್ನಸ್ವಾಮಿಯವರು ವಿಶ್ಲೇಷಿಸಿ, ವಿವರಿಸಿ ಅವುಗಳಲ್ಲಿಯ ಸಮಾನ ಅಂಶಗಳನ್ನು ಗುರುತಿಸಿದ್ದಾರೆ. ಸಾಮಾನ್ಯ ಓದುಗರಿಗೆ, ಸುಲಭವಾಗಿ ಸರಿಯಾದ ತಿಳುವಳಿಕೆ ಉಂಟುಮಾಡುವುದಲ್ಲದೆ, ವಿಶೇಷ ಅಭ್ಯಾಸಿಗಳಿಗೂ ಚಿಂತನೆಗೈಯಲು ಪ್ರೇರೇಪಿಸುವಂಥವಿವೆ ಈ ಬರಹಗಳು.

ಲೇಖಕರ ಇತರ ಕೃತಿಗಳು
Rs. 180    Rs. 162
Rs. 150    Rs. 120
Best Sellers
ಮಹಾತ್ಮ ಗಾಂಧಿ (ವಿಶ್ವಮಾನ್ಯರು ಜೀವನ ಚರಿತ್ರೆ ಮಾಲೆ)
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 20/-   Rs. 25
ಗೃಹಭಂಗ-(Hard Cover)
ಭೈರಪ್ಪ ಎಸ್ ಎಲ್, SL Byrappa
Rs. 394/-   Rs. 415
ಶರಣ ಚರಿತಾಮೃತ (Hard Cover)
ಸಿದ್ಧಯ್ಯ ಪುರಾಣಿಕ, Siddhaiah Puranika
Rs. 540/-   Rs. 600
ಭಲೇ ಬೊಂಬಾಟ್ ಭೋಜನ (ಅಡಿಗೆ ಪುಸ್ತಕ)
ಅನ್ನಪೂರ್ಣ , Annapoorna
Rs. 54/-   Rs. 60

Latest Books
ಕ್ರಿಶ್ಚಿಯಾನ್ ಬರ್ನಾರ್ಡ್ (ವಿಶ್ವಮಾನ್ಯರು)
ಚಂದ್ರಶೇಖರ್ ಸಿ ಆರ್, Chandrashekar C R
Rs. 20/-   Rs. 25
ಸಮಗ್ರ ನಿರೀಶ್ವರವಾದ
ಶರದ ಬೇಡೆಕರ, Sharad Bedekar
Rs. 132/-   Rs. 165
ಶ್ರೀ ರಾಮಕೃಷ್ಣ ಪರಮಹಂಸ ದರ್ಶನ
ಯು ಎನ್ ಸಂಗನಾಳಮಠ, U N Sanganalamath
Rs. 108/-   Rs. 120
ಕಾಡುವ ಕಾದಂಬರಿ ತುಂಗಾ
ಗಾಯತ್ರಿ ವಿ, Gayathri V
Rs. 135/-   Rs. 150


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.