|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಸಂತ ಪ್ರಕಾಶನ, Vasantha Prakashana |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
106 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789383052967 |
ಕೋಡ್ |
: |
189323 |
ಇಂಗ್ಲಿಷ್ ಸಾಹಿತ್ಯದಲ್ಲಿ ಆಲಿವರ್ ಗೋಲ್ಡ್ಸ್ಮಿತ್ (1728-1774)ನಂತೆ ನಮ್ಮ ಪ್ರೀತಿಯನ್ನು ಗೆದ್ದುಕೊಳ್ಳುವವರು ವಿರಳ. ‘ಅಗಸ್ಟಿನ್ ಯುಗ’ದ ಶ್ರೇಷ್ಠ ಪ್ರಬಂಧಕಾರನಾಗಿದ್ದ ಅವನು ಕವಿತೆ, ನಾಟಕ, ಕಾದಂಬರಿ, ಜೀವನ ಚರಿತ್ರೆಗಳನ್ನೂ ರೋಮನ್, ಇಂಗ್ಲೆಂಡ್ ಹಾಗೂ ಗ್ರೀಸಿನ ಚರಿತ್ರೆಗಳನ್ನೂ ಬರೆದಿದ್ದಾನೆ.
ಗೋಲ್ಡ್ಸ್ಮಿತ್ನ ‘ಡೆಸರ್ಟೆಡ್ ವಿಲೆಜ್’ ನಮ್ಮ ಇಂಗ್ಲಿಷ್ ಪಠ್ಯಪುಸ್ತಕಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ, ಬಹುಮಂದಿ ವಿದ್ಯಾವಂತರಿಗೆ ಪರಿಚಿತವಾಗಿರುವ ಕವನ. ಚೀನೀ ಪ್ರವಾಸಿಯೊಬ್ಬ ತನ್ನ ಗುರುವಿಗೆ ಮತ್ತು ಇತರರಿಗೆ ಬರೆದಂತಿರುವ ಅವನ ಪತ್ರ ಸ್ವರೂಪೀ ಪ್ರಬಂಧ ಸಂಗ್ರಹ ‘ದಿ ಸಿಟಿಜನ್ ಆಫ್ ದಿ ವರ್ಲ್ಡ್’ - ಗೋಲ್ಡ್ಸ್ಮಿತ್ನ ಹೆಸರನ್ನು ಶಾಶ್ವತಗೊಳಿಸಿದೆ. ಪ್ರಪಂಚದ ಹಲವು ಭಾಷೆಗಳಿಗೆ ಭಾಷಾಂತರಗೊಂಡಿರುವ ಅವನ ‘ಷಿ ಸ್ಟೂಪ್ಸ್ ಟು ಕಾನ್ಕರ್’ ಅಂದು ಹೇಗೋ ಇಂದೂ ಹಾಗೇ ಜನರಂಜನೆ ಮಾಡಬಲ್ಲ ಸುಪ್ರಸಿದ್ಧ ನಾಟಕ. ‘ವಿಕಾರ್ ಆಫ್ ವೇಕ್ಫೀಲ್ಡ್’ ಅವನ ಏಕೈಕ ಕಾದಂಬರಿ.
ಗೋಲ್ಡ್ಸ್ಮಿತ್ನ ಜೀವನ ಮತ್ತು ಸಾಹಿತ್ಯವನ್ನು, ಆ ಕಾಲದ ಇಂಗ್ಲಿಷ್ ಸಾಹಿತ್ಯ ಪ್ರಪಂಚವನ್ನು ಈ ಕಿರು ಹೊತ್ತಿಗೆ ಸಮಗ್ರವಾಗಿಯೂ ಸಮರ್ಪಕವಾಗಿಯೂ ಪರಿಚಯಿಸುತ್ತದೆ. ನಾಲ್ಕು ದಶಕಗಳ ಹಿಂದೆ ಮೊದಲು ಪ್ರಕಟಗೊಂಡಿದ್ದ ಈ ವಿಮರ್ಶಾಕೃತಿ ಬಹುಶಃ ಗೋಲ್ಡ್ಸ್ಮಿತ್ನನ್ನು ಕುರಿತು ಕನ್ನಡದಲ್ಲಿ ಬಂದಿರಬಹುದಾದ ಮೊದಲ ಕೃತಿಯಾಗಿದ್ದು ಇದೀಗ ಮರುಮುದ್ರಣಗೊಂಡಿದೆ.
|
| |
|
|
|
|
|
|
|
|
|