Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 150   
10%
 
 
Rs. 135/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 210
ಪುಸ್ತಕದ ಗಾತ್ರ : 1/8 Demy Size
ISBN : 9789383052790
ಕೋಡ್ : 184175

ಭಗತ್ ಸಿಂಗ್ (೧೯೦೭-೧೯೩೧) ಭಾರತದ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ, ಮಹಾತ್ಮ ಗಾಂಧಿಯವರ ಅಹಿಂಸಾ ಚಳವಳಿ ಜನತೆಯ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದ ಕಾಲದಲ್ಲಿ ಬದುಕಿದ್ದವನು. ಭಾರತದ ಯುವ ಜನಾಂಗ ಸಾವಿನ ನೆರಳಿನಲ್ಲಿ ಅವನು ತೋರಿದ ಸ್ಥೈರ್ಯದಿಂದ, ‘ಇನ್‌ಕ್ವಿಲಾಬ್ ಜಿಂದಾಬಾದ್‘ ಎಂಬ ಅವನ ಘೋಷಣೆಯಿಂದ ಸ್ಫೂರ್ತಿ ಪಡೆಯುತ್ತಿದ್ದ ಕಾಲವದು. ಬ್ರಿಟಿಷರು ಲಾಹೋರ್ ಪಿತೂರಿ ಮೊಕದ್ದಮೆಯಲ್ಲಿ ಅವನನ್ನು ಒಬ್ಬ ಆರೋಪಿಯನ್ನಾಗಿ ಮಾಡಿದರಷ್ಟೆ. ಆನಂತರ ಅವರು ನಡೆಸಿದ ಒಂದು ಕೃತ್ರಿಮ ವಿಚಾರಣೆಯ ಪರಿಣಾಮವಾಗಿ ಅವನನ್ನು ಅವನ ಇಪ್ಪತ್ಮೂರನೆಯ ವಯಸ್ಸಿನಲ್ಲಿ ಗಲ್ಲಿಗೇರಿಸಲಾಯಿತು. ಅವನು ಜೈಲಿನಲ್ಲಿದ್ದಾಗ ಬರೆದಿಟ್ಟ ಬರಹಗಳು ೧೯೪೭ರಲ್ಲಿ ಭಾರತ ಸ್ವಾತಂತ್ರ್ಯ ಗಳಿಸಿದ ಮೇಲಷ್ಟೆ ಬೆಳಕಿಗೆ ಬಂದವು. ಆ ಬರಹಗಳು ಅವನನ್ನು ಒಬ್ಬ ಅದಮ್ಯ ಸ್ವಾತಂತ್ರ್ಯ ಹೋರಾಟಗಾರನೆಂದೂ, ಮಾರ್ಕ್ಸ್, ಲೆನಿನ್, ಬರ್ಟ್ರಂಡ್ ರಸೆಲ್, ವಿಕ್ಟರ್ ಹ್ಯೂಗೊ ಮೊದಲಾದವರ ಬರಹಗಳಿಂದ ಸ್ಫೂರ್ತಿ ಪಡೆದ ಬುದ್ಧಿಜೀವಿಯೆಂದೂ, ಜಾತ್ಯತೀತ ಭಾರತದ ಕನಸು ಕಂಡವನೆಂದೂ ಚಿತ್ರಿಸುತ್ತವೆ.

ಪ್ರಖ್ಯಾತ ಪತ್ರಕರ್ತ ಕುಲದೀಪ್ ನಯ್ಯರ್ ಅವರ ಈ ಕೃತಿ ಹಲವು ವರ್ಷಗಳ ಸಂಶೋಧನೆಯ ಫಲ. ಅವರು ಈ ಕೃತಿಗೆಂದೇ ಅನೇಕ ಐತಿಹಾಸಿಕ ದಾಖಲೆಗಳನ್ನು, ಕಾಗದ ಪತ್ರಗಳನ್ನು ಪರಿಶೋಧಿಸಿದ್ದುಂಟು, ಆ ಕಾಲದ ಹಲವರನ್ನು ಸಂದರ್ಶಿಸಿದ್ದುಂಟು. ಹಾಗಾಗಿ ಭಗತ್ ಸಿಂಗನನ್ನು ಕುರಿತು ಇದುವರೆಗೆ ಪ್ರಕಟವಾಗಿರುವ ಕೃತಿಗಳಿಗಿಂತ ತೀರ ಭಿನ್ನವಾಗಿರುವ ಈ ಕೃತಿ ಅವನ ವ್ಯಕ್ತಿತ್ವವನ್ನು ಹೊಸ ಬೆಳಕಿನಲ್ಲಿ ಶೋಧಿಸುವ ಮೂಲಕ ಸ್ವತಃ ಒಂದು ಅಪರೂಪದ ಅಧಿಕೃತ ದಾಖಲೆಯೆನಿಸಿದೆ.

ತೊಂಬತ್ತರ ಎತ್ತರದಲ್ಲಿರುವ ಕುಲದೀಪ್ ನಯ್ಯರ್ ಭಾರತದ ಸುಪ್ರಸಿದ್ಧ ಪತ್ರಕರ್ತ, ಅಂಕಣಕಾರ, ಲೇಖಕ, ಮಾನವ ಹಕ್ಕುಗಳ ಪ್ರತಿಪಾದಕ ಮತ್ತು ಸಮಕಾಲೀನ ಚರಿತ್ರಕಾರ. ಎಲ್ಲ ರಾಜಕೀಯ ಬೆಳವಣಿಗೆಗಳ ಮಧ್ಯೆ ಪ್ರೇಕ್ಷಕನಂತೆ ಇದ್ದೂ ಅವುಗಳಾಚೆ ನಿಂತು ಎಡಬಲಗಳನ್ನು ಹೇಳಬಲ್ಲ ರಾಜಕೀಯ ವಿಶ್ಲೇಷಕ. ಉಪಖಂಡದಲ್ಲಿ ಅವರಿಗೆ ಪರಿಚಯವಿಲ್ಲದ ರಾಜಕೀಯ ನಾಯಕರು ಇಲ್ಲ; ಆದರೆ ಎಲ್ಲರ ಪಾಲಿಗೂ ಅವರು ‘ವಿರೋಧ ಪಕ್ಷದ ನಾಯಕ’. ಲಂಡನ್‌ನಲ್ಲಿ ಭಾರತದ ಹೈಕಮೀಷನರ್, ರಾಜ್ಯಸಭೆಯ ಸದಸ್ಯ ಮತ್ತು ಇನ್ನೂ ಏನೇನೋ ಆಗಿದ್ದರೂ ಕುಲದೀಪ್ ನಯ್ಯರ್ ಮೂಲತಃ ತೆರೆದ ಕಣ್ಣು, ತೆರೆದ ಮನದ ಒಬ್ಬ ಪತ್ರಕರ್ತ. ಆದ್ದರಿಂದಲೇ ಅವರ ‘ಬಿಟ್ವೀನ್ ದಿ ಲೈನ್ಸ್’ ಸಿಂಡಿಕೇಟ್ ಅಂಕಣಕ್ಕೆ ದೇಶವಿದೇಶಗಳಲ್ಲಿ 14 ಭಾಷೆಗಳಲ್ಲಿ 80ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಪ್ರಕಟವಾಗುವ ಗೌರವ.

ON LEADERS AND ICONS FROM JINNAH TO MODI
Kuldip Nayar (1923 - 2018) Began his career as an Urdu reporter in the 1950s. He moved to english journalism with the United News of India (UNI) which he was instrumental in setting up. He later became editor of the Delhi edition of The Statesman, and also had a long association with the Indian Express. An outspoken critic of Indira Gandhi, he was arrested during the emergency years (1975-77). He was also a human rights activist and a member of India”s delegation to the United Nations in 1996. He was appointed high commissioner to the UK in 1990 and nominated to the Rajya Sabha in 1997. His weekly columns and op - eds appeared in over eighty newspapers, including the Deccan Herald, The Daily Star, The Sunday Guardian, and Dawn, Pakistan. Nayar authored fifteen books, including Beyond the Lines: An Autobiography.

ಲೇಖಕರ ಇತರ ಕೃತಿಗಳು
Rs. 695    Rs. 626
Rs. 499    Rs. 449
50%
ಒಂದು ಜೀವನ ಸಾಲದು ....
ಕುಲದೀಪ್ ನಯ್ಯರ್, Kuldip Nayar
Rs. 495    Rs. 248
10%
ಜಿನ್ನಾರಿಂದ ಮೋದಿವರೆಗೆ
ಕುಲದೀಪ್ ನಯ್ಯರ್, Kuldip Nayar
Rs. 140    Rs. 126
Best Sellers
ಅಪೂರ್ವ ಪಶ್ವಿಮ : ಕಾದಂಬರಿ
ಶಿವರಾಮ ಕಾರಂತ ಕೆ, Shivarama Karantha K
Rs. 162/-   Rs. 180
ಸ್ವಾತಂತ್ರ್ಯೋತ್ತರ ಭಾರತ
ಬಿಪಿನ್ ಚಂದ್ರ, Bipin Chandra
Rs. 744/-   Rs. 875
ಪ್ರೇಮಸೂತ್ರ
ರವಿಕುಮಾರ್ ಅಜ್ಜೀಪುರ, Ravikumar Ajjipura
Rs. 135/-   Rs. 150
ಆಹಾ ಎಷ್ಟೊಂದು ಚಟುವಟಿಕೆಗಳು
ಅರವಿಂದ ಗುಪ್ತ, Aravind Gupta
Rs. 135/-   Rs. 150

Latest Books
ವಿಷಯಾಂತರ
ಗುರುರಾಜ್ ಸನಿಲ್
Rs. 135/-   Rs. 150
ಶಾಸನ ಅಧ್ಯಯನ ಕೆಲ ಹೆಜ್ಜೆಗುರುತುಗಳು
ಗೋಪಾಲರಾವ್ ಎಚ್ ಎಸ್, Gopalarao H S
Rs. 225/-   Rs. 250
ಹಿಂದೂಗಳು : ಬೇರೊಂದು ಚರಿತ್ರೆ
ವೆಂಡಿ ಡೊನಿಗರ್, WENDY DONIGER
Rs. 450/-   Rs. 500
India 2016 Year Book
Ministry of Information And Broadcasting
Rs. 315/-   Rs. 350


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.