uploads/bookpathimages/5248.jpg Navakarnataka Publications Pvt.Ltd., Bangalore - Online Book Store,Kannada Books
   
Items
0
Total
  0.00 
Welcome Guest.

 
Rs. 60    
10%
Rs. 54/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : Revised
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 80
ಪುಸ್ತಕದ ಗಾತ್ರ : 1/8 Demy Size
ಕೋಡ್ : 1256987

ಪುಸ್ತಕದಿಂದ ಆಯ್ದ ಭಾಗ....

ನವ್ಯತೆಯ ಪರಿಕಲ್ಪನೆ...
ಚಲನಶೀಲವಾದ ಬದುಕಿನಲ್ಲಿ ಬದಲಾವಣೆ ತೀರ ಸಹಜ; ಅದು ಜೀವಂತಿಕೆಯ ಲಕ್ಷಣವೂ ಹೌದು. ಅಂತೆಯೇ ಜೀವಂತ ಭಾಷೆಯ ಸಾಹಿತ್ಯದಲ್ಲೂ ಕಾಲಕಾಲಕ್ಕೆ ಬದಲಾವಣೆ ನಡೆಯುತ್ತಿರುತ್ತದೆ. ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯವನ್ನು ಗಮನಿಸಿದರೂ ಈ ಮಾತು ನಿಜ. ಒಂದು ಮಾದರಿಯ ಬರವಣಿಗೆ ಕ್ರಮೇಣ ತನ್ನ ಉತ್ಸಾಹ , ಶಕ್ತಿ ಕಳೆದುಕೊಂಡು ಸತ್ವಹೀನವಾಗುತ್ತದೆ. ಒಂದು ಸಂಪ್ರದಾಯ ವಾಗಿ ರೂಪುಗೊಂಡ ಕಾವ್ಯಮಾರ್ಗ ಕೆಲವು ಉತ್ತಮ ಕೃತಿಗಳನ್ನು ನೀಡಿದ ನಂತರದಲ್ಲಿ ತನ್ನನ್ನೇ ತಾನು ಅನುಕರಿಸುತ್ತಾ , ಶಬ್ದವಿಲಾಸವಾಗಿ ತತ್ಕಾಲೀನತೆಯ ಅಗತ್ಯವನ್ನು ಪೂರೈಸುವ ಶಕ್ತಿ ಕಳೆದುಕೊಳ್ಳುತ್ತದೆ. ಆಗ ಅದಕ್ಕೆ ಪ್ರತಿಭಟನೆ ಎಂಬಂತೆ ಹೊಸ ರೀತಿಯ ಬರವಣಿಗೆ ಚಲಾವಣೆಗೆ ಬರುತ್ತದೆ. ಕ್ರಮೇಣ ಅದೂ ಒಂದು ಸಂಪ್ರದಾಯವಾಗಿ ಇನ್ನೊಂದು ರೀತಿಗೆ ಹಾದಿ ಮಾಡಿಕೊಡುತ್ತದೆ. ಸಾವಿರ ವರ್ಷಗಳ ಇತಿಹಾಸ ದ ಕನ್ನಡ ಸಾಹಿತ್ಯ ಚರಿತ್ರೆಯನ್ನೇ ಗಮನಿಸಿದರೂ ಅನೇಕ ಬದಲಾವಣೆಗಳನ್ನು ನಾವು ಗಮನಿಸ ಬಹುದು. ಆರಂಭದಲ್ಲಿ ಪಂಪ ರನ್ನ ನಾಗಚಂದ್ರ ಮೊದಲಾದವರು ಚಂಪುವಿನಲ್ಲಿ ಬರೆದರು. ನಂತರ ಹನ್ನೆರಡನೇ ಶತಮಾನದ ವೇಳೆಗೆ ಮಹತ್ವದ ಪಲ್ಲಟ ಸಂಭವಿಸಿ ವಚನ ಚಳುವಳಿ ರೂಪುಗೊಂಡಿತು. ನಂತರದ ಹರಿಹರ ರಗಳೆಯನ್ನು ಬಳಸಿದ. ಹರಿಹರನ ನಂತರದ ಕವಿಗಳು ಷಟ್ಪದಿ ಸಾಂಗತ್ಯ ಬಳಸಿದರು. ಹೀಗೆ ಯಾವುದೇ ಸಾಹಿತ್ಯ ಪರಂಪರೆಯಾಗಲೀ ಕಾಲಕಾಲಕ್ಕೆ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಾ, ತನ್ನ ಕಾಲದ ಅಗತ್ಯಕ್ಕೆ ತಕ್ಕಂತೆ ಹೊಸ ರೂಪ ಪಡೆಯುತ್ತಾ ಹೋಗುತ್ತದೆ.
ಹೊಸ ಕಾವ್ಯಮಾರ್ಗವೊಂದು ಬಂದಾಗ ಅದು ಹಳೆಯದನ್ನು ಪ್ರತಿಭಟಿಸಿ ಅದರ ಸತ್ವ ತೀರಿತೆಂದು ಘೋಷಿಸುವುದು ಸಹಜ. ಅಂದಮಾತ್ರಕ್ಕೆ ಆ ಕಾವ್ಯಮಾರ್ಗದ ಉತ್ತಮಾಂಶಗಳನ್ನು , ಶ್ರೇಷ್ಠ ಕೃತಿಗಳನ್ನು ಹೊಸ ಕಾವ್ಯಮಾರ್ಗ ತಿರಸ್ಕರಿಸುತ್ತದೆ ಎಂದು ಅರ್ಥವಲ್ಲ. ಯಾವುದೇ ಹೊಸ ಕಾವ್ಯಮಾರ್ಗ ಹಳೆಯದರ ಮುಂದುವರಿದ ರೂಪವೇ ಆಗಿರುತ್ತದೆ, ಆದರೆ ಅದಕ್ಕಿಂತ ಭಿನ್ನವಾಗಿರುತ್ತದೆ ಅಷ್ಟೆ. ‘ಪರಂಪರೆಯ ತಳಹದಿಯ ಮೇಲೆಯೇ ಎಲ್ಲ ಹೊಸ ಪ್ರಯೋಗಗಳೂ ನಡೆಯುವುದು. ಹರಳೀಕರಣಗೊಂಡ ಪ್ರಯೋಗ ಗಳೇ ಪರಂಪರೆಯಾಗಿ ರೂಪುಗೊಳ್ಳುವುದು’ ಎಂಬ ಲೂಯಿಸ್ ಮ್ಯಾಕ್‍ನೀಸ್ ನ ಮಾತುಗಳನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಹೊಸದು ಬಂದಾಗ ಪರಂಪರೆ ಅದನ್ನು ತಕ್ಷಣ ಒಪ್ಪಿಕೊಳ್ಳುವುದಿಲ್ಲ , ತಿರಸ್ಕರಿಸುತ್ತದೆ. ಹಾಗೆಯೇ ಹೊಸದು ಹಳೆಯದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತ ತನ್ನನ್ನು ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಈ ಸಂಘರ್ಷ ಎಲ್ಲ ಕಾಲದಲ್ಲೂ ಸಹಜ ಪ್ರಕ್ರಿಯೆ. ಈ ಪ್ರಕ್ರಿಯೆಯ ಮೂಲಕವೇ ಸಾಹಿತ್ಯ ಪರಂಪರೆಯೊಂದು ನಿರ್ಮಾಣಗೊಳ್ಳುತ್ತದೆ. ತನ್ನ ಭಾಷೆಯ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತದೆ.
-ನರಹಳ್ಳಿ ಬಾಲಸುಬ್ರಹ್ಮಣ್ಯ

ಲೇಖಕರ ಇತರ ಕೃತಿಗಳು
10%
ಕುವೆಂಪು ಕಾವ್ಯ ಸಂಸ್ಕೃತಿ ....
ನರಹಳ್ಳಿ ಬಾಲಸುಬ್ರಹ್ಮಣ್ಯ, Narahalli Balasubramanya
Rs. 95    Rs. 86
Rs. 100    Rs. 90
Rs. 750    Rs. 675
10%
ಸುತ್ತುವ ಗ್ರಹಗಳಿಂದ ಚಲಿಸುವ ....
ನರಹಳ್ಳಿ ಬಾಲಸುಬ್ರಹ್ಮಣ್ಯ, Narahalli Balasubramanya
Rs. 200    Rs. 180
Best Sellers
ಮಕ್ಕಳ ವಿಶ್ವ ಜ್ಞಾನ ಕೋಶ - 2
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 117/-   Rs. 130
ಹತ್ತು ತಮಿಳು ಕತೆಗಳು
ವಿವಿಧ ಲೇಖಕರು, Various Authors
Rs. 72/-   Rs. 80
ಮಹಾತ್ಮ : ಗಾಂಧೀ ವಾದದ ಗೊತ್ತು - ಗುರಿಗಳು
ಓಶೋ, Osho
Rs. 135/-   Rs. 150
ಸುಭಾಷ್ ಇಂಗ್ಲೀಷ್ ಇಂಗ್ಲೀಷ್ ಕನ್ನಡ ನಿಘಂಟು
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 248/-   Rs. 275

Latest Books
ಮಹಾಮಾತೆ ಕುನ್ತೀ ಕಂದೆರೆದಾಗ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 135/-   Rs. 150
ಮನೋಬಲ
ಚಂದ್ರಶೇಖರ್ ಸಿ ಆರ್, Chandrashekar C R
Rs. 54/-   Rs. 60
ಭೂಮಿಯೆಂಬ ಗಗನನೌಕೆ : ಇರುವುದೊಂದೇ ಭೂಮಿಯ ಮುಂದುವರೆದ ಆಖ್ಯಾಯಿಕೆ
ನಾಗೇಶ ಹೆಗಡೆ, Nagesh Hegde
Rs. 162/-   Rs. 180
ವಿಸ್ತಾರ - ಮನಸ್ಸು ಇದ್ದ ಮಾರ್ಗದಲ್ಲಿ ದಿಗ್ವಿಜಯ
ಶ್ರೀನಿವಾಸ ರೆಡ್ಡಿ ಕೆ, Srinivasa Reddy K
Rs. 203/-   Rs. 225


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.