Items
0
Total
  0.00 
Welcome Guest.

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸೇತುರಾಮ್ ಎಸ್. ಎನ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 118
ಪುಸ್ತಕದ ಗಾತ್ರ : 1/8 Demy Size
ಕೋಡ್ : 12569878

"ನಾವಲ್ಲ"ದ ಬದುಕಿನ ಪಾತ್ರಗಳು
ಸೇತುರಾಮ್‌ ಎಷ್ಟು ಬೇಕೋ ಅಷ್ಟೇ ಮಾತನಾಡಿ, ಮೌನಕ್ಕೇ ಒತ್ತುಕೊಟ್ಟು– ಆ ಖಾಲಿ ಜಾಗವನ್ನು ಓದುಗರು ತಮ್ಮ ಮನಸ್ಸಿನೊಳಗೆ ತುಂಬಿಸಿಕೊಳ್ಳಲಿ ಎಂದು ಸುಮ್ಮನಾಗುವ ರೀತಿಯ ಕಥೆಗಾರರಲ್ಲ. ಬದಲಿಗೆ ನಮ್ಮ ಸೋ ಕಾಲ್ಡ್‌ ಸಜ್ಜನಿಕೆಯ ಮುಖವಾಡದ ನಾಗರಿಕ ಜೀವನ ವ್ಯವಸ್ಥೆಯ ಹಲವು ಪದರುಗಳಲ್ಲಿ ತಣ್ಣಗೆ ಹರಿಯುತ್ತಿರುವ ವಿಷಜಲದ ಕಠೋರ ಸತ್ಯಗಳನ್ನು..

ಮಂಥನ, ದಿಬ್ಬಣ, ಅನಾವರಣಗಳಂಥ ಕಿರುತೆರೆ ಧಾರಾವಾಹಿಗಳು, ನಿಮಿತ್ತ, ಗತಿ, ಅತೀತಗಳಂಥ ನಾಟಕಗಳನ್ನು ಕೊಟ್ಟಿರುವ ಸೇತುರಾಮ್‌ ಅವರ ಮೊದಲ ಕಥಾ ಸಂಕಲನ ‘ನಾವಲ್ಲ’.
ಈ ಕಥಾ ಸಂಕಲನದ ಬಗ್ಗೆ ಹೇಳುವಾಗ ಅವರ ಹಿಂದಿನ ಕಿರುತೆರೆ–ರಂಗಭೂಮಿ ಪ್ರಯೋಗಗಳನ್ನು ನೆನಪಿಸಿಕೊಳ್ಳಲು ಕಾರಣವಿದೆ. ಸೇತುರಾಮ್‌ ಅವರ ಧಾರಾವಾಹಿ ಮತ್ತು ನಾಟಕಗಳನ್ನು ನೋಡಿದವರಿಗೆ ಈ ಸಂಕಲನದಲ್ಲಿನ ಪಾತ್ರಗಳು, ಅವುಗಳ ಸ್ವಭಾವ–ಸಂಕಟಗಳು, ಅವುಗಳನ್ನು ಮಂಡಿಸುವ ಶೈಲಿಗಳ ಗುರುತು ಇರುತ್ತದೆ.

‘ನಾವಲ್ಲ’ ಇದು ಸೇತುರಾಮ್‌ ಅವರ ಕಿರುತೆರೆ ಮತ್ತು ರಂಗಭೂಮಿಯಲ್ಲಿ ಪ್ರಕಟವಾದ ಅಭಿವ್ಯಕ್ತಿಯ ಮುಂದುವರಿಕೆ. ಎಷ್ಟರಮಟ್ಟಿಗೆ ಎಂದರೆ ಅವರ ಧಾರಾವಾಹಿಗಳಲ್ಲಿ, ಕಿಟಕಿಯಿಂದ ಹೊರಗೆ ನೋಡುತ್ತ ನಿರ್ಲಿಪ್ತವಾಗಿ ಹರಿತ ಮಾತಿನ ಬಾಣ ಎಸೆವ ಕುದಿಮನದ ಹೆಣ್ಣುಮಕ್ಕಳು, ನಾಟಕಗಳಲ್ಲಿನ ಪರಮ ಅಪ್ರಾಮಾಣಿಕ, ಲಜ್ಜೆಗೇಡಿ ಗಂಡಸರು ಆ ಪ್ರಕಾರಗಳ ರಸ್ತೆದಾಟಿ ಹೊಸ ಹೆಸರಿಟ್ಟುಕೊಂಡು ಈ ಕಥೆಗಳನ್ನು ಆಡುತ್ತಿದ್ದಾರೇನೋ ಅನ್ನಿಸುವಷ್ಟು. ಹಾಗೆಯೇ ಈ ಕಥೆಯ ಪಾತ್ರಗಳು ಟಿಪಿಕಲ್‌ ಸೇತುರಾಮ್‌ ಶೈಲಿಯಲ್ಲಿ ಆಡುವ ಮಾತುಗಳನ್ನು ಅವರ ಧಾರಾವಾಹಿ–ರಂಗಭೂಮಿ ಪಾತ್ರಗಳ ಬಾಯಲ್ಲಿ ಇಟ್ಟು ಕಲ್ಪಿಸಿಕೊಳ್ಳಬಹುದು. ಪ್ರಕಾರ ಬದಲಾಗಿದೆ; ಆದರೆ ಅಭಿವ್ಯಕ್ತಿಯ ಕ್ರಮ– ಉದ್ದೇಶ ಹಾಗೆಯೇ ಉಳಿದಿದೆ.

ಸೇತುರಾಮ್‌ ಎಷ್ಟು ಬೇಕೋ ಅಷ್ಟೇ ಮಾತನಾಡಿ, ಮೌನಕ್ಕೇ ಒತ್ತುಕೊಟ್ಟು– ಆ ಖಾಲಿ ಜಾಗವನ್ನು ಓದುಗರು ತಮ್ಮ ಮನಸ್ಸಿನೊಳಗೆ ತುಂಬಿಸಿಕೊಳ್ಳಲಿ ಎಂದು ಸುಮ್ಮನಾಗುವ ರೀತಿಯ ಕಥೆಗಾರರಲ್ಲ. ಬದಲಿಗೆ ನಮ್ಮ ಸೋ ಕಾಲ್ಡ್‌ ಸಜ್ಜನಿಕೆಯ ಮುಖವಾಡದ ನಾಗರಿಕ ಜೀವನ ವ್ಯವಸ್ಥೆಯ ಹಲವು ಪದರುಗಳಲ್ಲಿ ತಣ್ಣಗೆ ಹರಿಯುತ್ತಿರುವ ವಿಷಜಲದ ಕಠೋರ ಸತ್ಯಗಳನ್ನು ರಪ್ಪನೆ ಮುಖಕ್ಕೆ ರಾಚಿ ತಬ್ಬಿಬ್ಬುಗೊಳಿಸುವ ಕಥೆಗಾರ. ಈ ಶಾಕ್‌ ನಮ್ಮೆಲ್ಲರ ಮುಖದ ಮೇಲಿನ ಸ್ವಾಸ್ಥ್ಯದ ಮುಖವಾಡವನ್ನು ಒಮ್ಮೆ ಅಲ್ಲಾಡಿಸಿಬಿಡುತ್ತದೆ.

ತಾವು ಕಂಡ ಸತ್ಯಗಳನ್ನು ಕಂಡ ಹಾಗೆ ‘ಹೇಳುವುದು’, ಅದೂ ಮುಖಕ್ಕೆ ಹೊಡೆದ ಹಾಗೆ ಹೇಳುವುದು ಅವರ ಶೈಲಿ. ಈ ಅಭಿವ್ಯಕ್ತಿಗೆ ಅವರಿಗೆ ಒದಗಿಬರುವುದು ಜ್ವಲಿಸುವ ಬೆಂಕಿಯುಂಡೆಯಂಥ ಮಾತುಗಳು. ಅದರಿಂದಲೇ ಅದರಿಂದ ಕಟ್ಟಿದ ಮಂಟಪದ ಮಧ್ಯ ಬದುಕಿನ ವೈಕಲ್ಯಗಳನ್ನು– ಮನುಷ್ಯನ ವಿಕ್ಷಿಪ್ತತೆಗಳನ್ನು ತೆರೆದಿಡುತ್ತಾರೆ.

ಈ ಸಂಕಲನದಲ್ಲಿನ ಯಾವ ಕಥೆಯ ಯಾವ ಪಾತ್ರವೂ ಕಥೆಗಾರನ ನಿಯಂತ್ರಣ ತಪ್ಪಿ ವರ್ತಿಸುವುದಿಲ್ಲ. ಅವರಿಗಿಷ್ಟ ಬಂದ ಹಾಗೆ ಮಾತಾಡುವುದಿಲ್ಲ. ಪ್ರಧಾನ ಪಾತ್ರಗಳ ಹಾಗೆಯೇ ಸಣ್ಣಪುಟ್ಟ ಪಾತ್ರಗಳೂ ಕಥೆಗಾರನ ಉದ್ದೇಶಕ್ಕೆ ಪೂರಕವಾಗಿಯೇ ವರ್ತಿಸುತ್ತವೆ. ಹೀಗಾಗಿಯೇ ಇವರ ಕಥೆಯಲ್ಲಿನ ಎಲ್ಲ ಪಾತ್ರಗಳು ಮಾತನಾಡುವ ಕ್ರಮವೂ ಒಂದೇ ರೀತಿ ಇರುತ್ತದೆ!

ಇಲ್ಲಿನ ಕಥೆಗಳಲ್ಲಿ ಕಥಾಪಾತ್ರಕ್ಕಿಂತ ಕಥೆಗಾರನೇ ಮುಖ್ಯವಾಗಿರುವುದು; ಅವನೇ ಮುನ್ನೆಲೆಯಲ್ಲಿ ನಿಂತು ಹೇಳುತ್ತಿರುವ ಹಾಗೆ ಅವು ರಚಿತಗೊಳ್ಳುವುದಕ್ಕೂ ಇದೇ ಕಾರಣ ಎನಿಸುತ್ತದೆ. ಈ ಕಥೆಗಾರನಿಗೆ ತಾನು ಕಂಡ ಸತ್ಯಗಳನ್ನು ಹೇಳುವುದು ಮುಖ್ಯ. ಹಾಗೆ ಹೇಳುವಾಗ ಅವನು ನಿರ್ಲಿಪ್ತನಲ್ಲ; ಬರೀ ನಿರೂಪಕನಲ್ಲ. ಅವನಿಗೆ ಸರಿ–ತಪ್ಪುಗಳ ವ್ಯತ್ಯಾಸ ಗೊತ್ತಿದೆ. ಮುಖವಾಡಗಳ ಉದುರಿಸಿ ‘ಮನುಷ್ಯರನ್ನಾಗಿಸುವುದು ಹೇಗೆ’ ಎಂದು ಗೊತ್ತಿದೆ. ಸೋಗಲಾಡಿಗಳ ಸಭ್ಯತೆಯ ಮುಖವಾಡ ಕಳಚಿಬೀಳಲು ಎಲ್ಲಿ ಹೇಗೆ ಹೊಡೆಯಬೇಕು ಎನ್ನುವುದು ತಿಳಿದಿದೆ.

ಹಾಗೆಯೇ ಒಳ್ಳೆಯತನದ ಪರ ವಹಿಸಲು ಅವನಿಗೆ ಯಾವ ಹಿಂಜರಿಕೆಯೂ ಇಲ್ಲ. ಬರೆಯುತ್ತಲೇ ಯೋಚಿಸುವ ಅಥವಾ ಶೋಧಿಸುವ ಕಥನಕ್ರಮ ಸೇತುರಾಮ್‌ ಅವರದಲ್ಲ. ಬದಲಿಗೆ ಈಗಾಗಲೇ ಗೊತ್ತಿರುವ ಸಂಗತಿಗಳನ್ನು ಬೆಚ್ಚಿಬೀಳುವಂತೆ ಹೇಳುವುದು ಅವರ ಕ್ರಮ. ಇಲ್ಲಿನ ಯಾವ ಕಥೆಯ ಯಾವ ಪಾತ್ರಗಳ ನಿಲುವುಗಳ ಬಗ್ಗೆಯೂ ಲೇಖಕನಿಗೆ ಗೊಂದಲಗಳಿಲ್ಲ. ಅದರ ಮೂಲಕ ಅವನು ಯಾವುದೋ ಸತ್ಯವನ್ನು ಹುಡುಕಲು ಹೊರಟಿಲ್ಲ. ಬದಲಿಶ್ರೀಗೆ ತನ್ನ ಕಣ್ಣೆದುರಿಗೆ ಕಂಡ ಸತ್ಯವನ್ನು ಆ ಪಾತ್ರಗಳ ಮೂಲಕ ಹೇಳಿಸುತ್ತಿದ್ದಾನೆ.

ಈ ಪುಸ್ತಕದ ಆರಂಭದಲ್ಲಿನ "ಲೇಖಕನ ಮಾತು"ಗಳನ್ನು ಓದಿದರೆ ಈ ವಿಷಯ ಇನ್ನಷ್ಟು ಸ್ಪಷ್ಟವಾದೀತು.
"ಭ್ರಷ್ಟ ಯಾಂತ್ರೀಕೃತ ಕಸಾಯಿ ಅಲಗುಗಳಲ್ಲೆಲ್ಲ ಕೆಂಪಾಗಿ ತೇಲುತ್ತಿರುವ ಅಸಹಾಯಕ ಹಾಲು ಗಲ್ಲಗಳು!" ಇದು "ಲೇಖಕರ ಮಾತು"ವಿನಲ್ಲಿರುವ ಸಾಲುಗಳು.

ಈ ಸಂಕಲನದ ಕೊನೆಯ ಕಥೆ "ನಾವಲ್ಲ" ಇದೇ ಮಾತಿನ ವಿಸ್ತರಣೆಯಾಗಿ ಕಾಣುತ್ತದೆ. ಹಾಗೆ ನೋಡಿದರೆ ಈ ಲೇಖಕರ ಮಾತುಗಳನ್ನು ಒಂದು ಕಥೆಯನ್ನಾಗಿಯೇ ಓದಿಕೊಳ್ಳಬಹುದು. ಅದನ್ನೇ ಇನ್ನೊಂದು ರೀತಿಯಲ್ಲಿ ಹೇಳುವು ದಾದರೆ ಇಲ್ಲಿನ ಎಲ್ಲ ಕಥೆಗಳಲ್ಲಿ ಇರುವುದೂ ಲೇಖಕರ ಮಾತುಗಳೇ. ಇದು ಈ ಸಂಕಲನದ ಶಕ್ತಿಯೂ ಹೌದು, ಮಿತಿಯೂ ಹೌದು. "ನಾವಲ್ಲ"ದ ಬದುಕನ್ನು ಬದುಕುತ್ತಿರುವ ಮನುಷ್ಯರೇ ಇಲ್ಲಿನ ಪಾತ್ರಗಳು. ನಿಜದ ನಾವು ಮತ್ತು ನಾವಲ್ಲದ ಮುಖವಾಡಕ್ಕೆ ನಡುವೆ ಇರುವ ವೈಪರೀತ್ಯವೇ ಇಲ್ಲಿನ ಎಲ್ಲ ಕಥೆಗಳ ವಸ್ತು.

ಹೆಣ್ಣು– ಹೆಣ್ಣಿನಂಥ ಪ್ರಕೃತಿ ಮತ್ತು ಅದರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಸೇತು ರಾಮ್‌ ನೋಡುವ ಕ್ರಮ ತುಂಬ ಭಿನ್ನವಾಗಿದ್ದು. ಹೆಣ್ಣನ್ನು ದೇವಿಯ ಪಟ್ಟಕ್ಕೆ ಕಟ್ಟಿಹಾಕುವ ಪುರುಷತಂತ್ರದ ಬಗ್ಗೆ ತಿಳಿದಿದೆ. ಆದರೆ ಆ ದೇವಿಯಾಗುವ ಸಾಧ್ಯತೆಯನ್ನು "ಮೌನಿ" ಕಥೆಯ ಮಂದಾಕಿನಿ ಒಗ್ಗಿಸಿಕೊಳ್ಳುವ ರೀತಿ ನೋಡಿ. "ವಿದ್ಯೆಯ ಸರಸ್ವತಿಗೆ ಮಕ್ಳಿಲ್ಲ. ಸುಖದ ಲಕ್ಷ್ಮಿಗೆ ಮಕ್ಳಿಲ್ಲ. ಹಸಿವು ನೀಗುವ ಅನ್ನ ಪೂರ್ಣೇಶ್ವರಿಗೆ ಮಕ್ಕಳಿಲ್ಲ. ಕಾಯೋ ದೇವಿ ದುರ್ಗೆನೂ ಬಂಜೆನೇ. ಹೆರೋರು ತಾಯಿ ಆದ್ರು, ಹೆರದೋರು ದೇವರಾದ್ರು. ತಾಯಿಯಾಗ್ಲಿಲ್ಲ ಬಿಡು. ದೇವಿ ಆಗ್ತೀನಿ..." ಈ ದೇವಿ ಮೇಲೆ ಹೇಳಿದ ಪುರುಷತಂತ್ರದ ಬುಡವನ್ನೇ ಅಲ್ಲಾಡಿಸುವಂಥವಳು ಇಂಥ ಹಲವು ಮಾತಿನ ತಪರಾಕಿಗಳು ಅವರ ಕಥೆಗಳಲ್ಲಿ ಮತ್ತೆ ಮತ್ತೆ ಸಿಗುತ್ತವೆ. "ಕಾತ್ಯಾಯಿನಿ" ಈ ಸಂಕಲನದಲ್ಲೆಲ್ಲ ಹೆಚ್ಚು ಯಶಸ್ವಿಯಾದ ಕಥೆ. ಉಳಿದ ಕಥೆಗಳಲ್ಲಿ ಕಾಣದಿರುವ ಮೌನದ ಹಲವು ದಟ್ಟ ತಾಣಗಳು ಈ ಕಥೆಯಲ್ಲಿವೆ. ಅವು ನಮ್ಮನ್ನು ಕಾಡುತ್ತವೆ. ಪದೇ ಪದೇ ಬಂದೆರಗುವ ಬೀಸುಗಾಳಿಗೆ ಹುಲ್ಲಾಗಿ ನೆಲಕ್ಕೆ ಬಾಗಿ ಮತ್ತೆ ಎದ್ದುನಿಲ್ಲುವ ಕಾತ್ಯಾಯಿನಿ ನಮ್ಮ ಮನಸ್ಸಲ್ಲುಳಿಯುತ್ತಾಳೆ. ಒಂದು ಸಾಹಿತ್ಯ ಕಲಾಕೃತಿಯಾಗಿ ಯಶಸ್ವಿ ಯಾಗಬೇಕು ಎಂಬ ಹಟ ಈ ಕಥೆಗಾರರಿಗೆ ಇಲ್ಲವಾದ್ದರಿಂದ ಆ ನೆಲೆಯಲ್ಲಿ ಇಟ್ಟು ಚರ್ಚಿಸಬೇಕಾಗಿಲ್ಲ. ಆದರೆ ಈ ಸಂಕಲನದಲ್ಲಿ ಆರೂ ಕಥೆಗಳೂ ಒಂದಲ್ಲ ಒಂದು ಬಗೆಯಲ್ಲಿ ಓದುಗರಿಗೆ ಶಾಕ್‌ ನೀಡುತ್ತವೆ. ಪುಸ್ತಕದಲ್ಲಿ ಮತ್ತೆ ಮತ್ತೆ ಎದುರಾಗುವ ಕಾಗುಣಿತ ದೋಷಗಳು ಸರಾಗ ಓದಿಗೆ ಅಡಚಣೆ ಉಂಟುಮಾಡುವುದನ್ನೂ ಇಲ್ಲಿ ಉಲ್ಲೇಖಿಸಲೇಬೇಕು.


-‌ಪದ್ಮನಾಭ ಭಟ್‌

ಲೇಖಕರ ಇತರ ಕೃತಿಗಳು
Rs. 150    Rs. 135
Rs. 100    Rs. 90
Best Sellers
ವಿಚಿತ್ರ ಕಕ್ಷಿದಾರ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ಚಿಟ್ಟಿ (ಕಾದಂಬರಿ)
ಚಂದ್ರಿಕಾ ಪಿ, Chandrika P
Rs. 180/-   Rs. 200
ಜೋಕುಮಾರಸ್ವಾಮಿ (ನಾಟಕ)
ಚಂದ್ರಶೇಖರ ಕಂಬಾರ, Chandrashekhara Kambar
Rs. 45/-   Rs. 50
ಅಂದನಾ ತಿಂಮ
ಬೀChi, Beechi
Rs. 72/-   Rs. 80

Latest Books
ಮೆಲುಕು
ಗಿರೀಶ ಕಾರ್ನಾಡ, Girish Karnad
Rs. 180/-   Rs. 200
Selfie ವಿಥ್ ಲೈಫ್
ವಿಶ್ವೇಶ್ವರ ಭಟ್, Vishweshwar Bhat
Rs. 176/-   Rs. 195
ಜ್ಞಾನಪೀಠಕೆ ಮೆರುಗು ಕನ್ನಡದ ಬೆಡಗು : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರ ಬದುಕು ಬರಹ
ಗೋಪಾಲ್ ಟಿ ಎಸ್, Gopal T S
Rs. 162/-   Rs. 180
ಸಾಧನೆಯ ಹಾದಿಯಲ್ಲಿ

Rs. 176/-   Rs. 195


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.