|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ನಳ-ದಮಯಂತೀ’ ಕಥೆಯ ಮೂಲ ಕಥಾಕಾರರು ಭಗವಾನ್ ವೇದವ್ಯಾಸರು. ಅವರ ಶ್ರೀಮಹಾಭಾರತ, ಪಾಂಡವ ಕೌರವರಕಥೆಯನ್ನು ಮೂಲದಲ್ಲಿಟ್ಟು ಹೆಣೆದದ್ದಾದರೂ ಅದರಲ್ಲಿ ಇನ್ನೂ ಇತರ ಕಥೆಗಳ ಸಾಗರವೇ ಅಡಗಿರುವ ಮಹಾಸಾಗರ, ಅದು ಆಗಿದೆ. ನಳನ ಕಥೆಗೆ ಮನಸೋಲದವರಾರು? ಕವಿ ರವೀಂದ್ರರು, ಮಹರ್ಷಿ ಅರವಿಂದರು ಇದರ ತುಣುಕುಗಳನ್ನು, ಭಾಷಾಂತರಿಸಿ, ಆಧರಿಸಿ, ಪುನಾರಚಿಸಿ, ತಮ್ಮ ಮೋಹವನ್ನು ಪ್ರದರ್ಶಿಸಿದ್ದಾರೆ. ಶೈಲಿ ಎಂದರೆ ವ್ಯಾಸರದ್ದು!
ನಮಗೆ ನಾವೇ ಪರಕೀಯರಾಗುತ್ತ, ನಮ್ಮ ಸಾಹಿತ್ಯ, ಸಂಗೀತ, ಕಲೆ, ವಿಜ್ಞಾನಗಳಲ್ಲಿ ಅಶ್ರದ್ಧೆ ತಳೆದು, ಅರ್ಥಹೀನ ವಿಚಾರ, ದುರ್ಮೌಲ್ಯ, ದುಷ್ಟ ಅನುಕರಣೆಯ ಮಾದರಿಗಳನ್ನು ನಾಚಿಕೆಯಿಲ್ಲದೆ ‘ಆಮದು’ ಮಾಡಿಕೊಳ್ಳುತ್ತಿರುವ ಈ ಕಾಲದಲ್ಲಿ ವ್ಯಾಸ-ವಾಲ್ಮೀಕಿಗಳ ಕಥೆಗಳ ರೋಚಕತೆ, ಆಧುನಿಕ ಮಾನವನ ಮನದಮೇಲೂ ಅವು ಹಿಡಿತ ಸಾಧಿಸಬಲ್ಲವೆಂಬ ವಿಶ್ವಾಸ ನಮ್ಮ ಯುವಪೀಳಿಗೆಯ ಮನಕ್ಕೆ ಬರಬೇಕು. ನಾವು ನಾವಾಗಿ ಅಲ್ಲದೆ ಭಾರತೀಯತೆ ಕಳೆದುಕೊಂಡು ಬಾಳಲಾರೆವು.
ಈ ದೆಸೆಯಲ್ಲಿ ಸಮಗ್ರ ರಾಮಾಯಣ, ಮಹಾಭಾರತ, ಭಾಗವತಗಳ ಕಾದಂಬರೀಕರಣದ ಯತ್ನ ಅವಶ್ಯವೆನಿಸಿ, ಈಗಾಗಲೇ ಅನೇಕ ಕೃತಿಗಳು ಹೊರಬಂದು ಜನಪ್ರಿಯವಾಗಿವೆ.
|
| |
|
|
|
|
|
|
|
|
|