|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಈ ಪುಸ್ತಕ ಓದುವಾಗ ನೀವು ನೀವೇ ಆಗಿರುತ್ತೀರೆಂಬ ಖಚಿತತೆ ನನಗಿಲ್ಲ. ನನ್ನ ಈ ತರಹದ ಮಾತು ಧಿಮಾಕಿನಂತೆ ಕಂಡರೆ ಆಶ್ಚರ್ಯವಿಲ್ಲ. ಎಲ್ಲ ಅಧ್ಯಾಯದ ಪ್ರತಿಯೊಂದು ಘಟನೆಯಲ್ಲಿ ಪರಕಾಯ ಪ್ರವೇಶ ಮಾಡಿ ಅಲ್ಲಿ ನನ್ನ ಪಾಟ್ರ ಯಾವುದು ಎಂಬ ಯೋಚನೆಯೊಂದಿಗೆ ಪುಸ್ತಕ ಮುಗುಚಿಟ್ಟಾಗ ನನ್ನೊಳಗೆ ಇನ್ನೂಬ್ಬನಿದ್ದಾನೆಯೇ ಎಂಬ ಸಂದೇಹ ಮೂಡದೇ ಇರಲಾರದು. ನೀವು ಒಬ್ಬರೆ ಓದುತ್ತಿದ್ದರೂ ನಿಮ್ಮಲ್ಲಿ ಇನ್ನೊಬ್ಬ ಕೇಳಿಸಿಕೊಳ್ಳುತ್ತಿದ್ದಾನೆ. ಈ ಪುಸ್ತಕ ಓದಲು ನಿಮ್ಮ ಬೆಡ್ರೂಮಿನ ಬೆಡ್ಲ್ಯಾಂಪೇ ಸಾಕು. ಪ್ರಶಾಂತ ಮನಸ್ಥಿತಿಯಲ್ಲಿ ಮೊದಲನೆಯ ಪುಟ ಓದುವ ಪ್ರಯತ್ನವನ್ನಷ್ಟೇ ಮಾಡಿ. ನಿಮ್ಮನ್ನು ಕಡೆಯ ಪುಟದವರೆಗೆ ಕರೆದೊಯ್ಯುವ ಪ್ರಾಮಾಣಿಕ ಪ್ರಯತ್ನ ನನ್ನದು. ನೀವು ಓದಿ ಮುಗಿಸುವವರೆಗೆ ನಿಮ್ಮ ದಿಂಬೆ ಇದಕ್ಕೆ ರಕ್ಷಣೆ ನೀಡಲಿ. ಓದಿ ಮುಗಿಸಿ ಮೈ ಕೊಡುವಿಕೊಂದು ಎದ್ದು ನಿಂತಾಗ ನೀವು ಮೊದಲಿಗಿಂತ ಸುಂದರವಾಗಿ ಕಾಣುತ್ತೀರಿ. ನಿಮ್ಮ ಬದಲಾವಣೆಯನ್ನು ಇತರರು ಕೇಳದೆ ಇರಲಾರರು. ಆಗ ನೀವು ಅವರ ಕೈಗೆ ಖಂಡಿತ ಈ ಪುಸ್ತಕ ಕೊಡುತ್ತೀರಿ. ಅವರ ಬದಲಾವಣೆಗೆ ನೀವೂ ಕಾರಣರಾಗುತ್ತೀರಿ.
|
| |
|
|
|
|
|
|
|
|