Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 55    
10%
Rs. 50/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸ್ಟಾಂಡರ್ಡ್ ಬುಕ್ ಕಂಪನಿ, Standard Book Company
ಈಗಿನ ಮುದ್ರಣದ ಸಂಖ್ಯೆ : 37
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Crown Size
ಕೋಡ್ : 172745

ಕೆ.ಎಸ್. ನರಸಿಂಹಸ್ವಾಮಿಯವರು ಹುಟ್ಟಿದ್ದು ೧೯೧೫ರಲ್ಲಿ, ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ. ೧೯೨೧ರಿಂದ ೧೯೨೮ರವರೆಗಿನ ಅವಧಿಯಲ್ಲಿ ಮೈಸೂರು ಟ್ರೈನಿಂಗ್ ಕಾಲೇಜಿನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ; ೧೯೨೮ರಿಂದ ೧೯೩೧ರವರೆಗಿನ ಅವಧಿಯಲ್ಲಿ ಮೈಸೂರಿನ ಮಹಾರಾಜ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ; ೧೯೩೪ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅಪೂರ್ಣ ಶಿಕ್ಷಣ. ೧೯೩೭ರಲ್ಲಿ ಸರಕಾರಿ ನೌಕರಿಗೆ ಸೇರಿದ ಅವರು ೧೯೭೦ರಲ್ಲಿ ಹೌಸಿಂಗ್ ಬೋರ್ಡ್ ನೌಕರಿಯಿಂದ ನಿವೃತ್ತರಾದರು. ಅವರು ನಿಧನರಾದದ್ದು ೨೦೦೩ರಲ್ಲಿ. ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ನರಸಿಂಹಸ್ವಾಮಿಯವರ ಮೊದಲ ಕವನ `ಕಬ್ಬಿಗನ ಕೂಗು` ಪ್ರಕಟವಾದದ್ದು ೧೯೩೧ರಲ್ಲಿ, `ಪ್ರಬುದ್ಧ ಕರ್ಣಾಟಕ` ಪತ್ರಿಕೆಯಲ್ಲಿ. ೧೯೪೨ರಲ್ಲಿ ಅವರಿಗೆ ಕಾಲಾತೀತ ವಿಖ್ಯಾತಿಯನ್ನು ತಂದುಕೊಟ್ಟ ಮೈಸೂರ ಮಲ್ಲಿಗೆ ಹೊರಬಂದಿತು. ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ತೆರೆದ ಬಾಗಿಲು, ನವಪಲ್ಲವ, ದುಂಡು ಮಲ್ಲಿಗೆ, ಸಂಜೆ ಹಾಡು, ಕೈಮರದ ನೆಳಲಲ್ಲಿ, ಎದೆ ತುಂಬ ನಕ್ಷತ್ರ, ಮೌನದಲಿ ಮಾತ ಹುಡುಕುತ್ತ, ದೀಪ ಸಾಲಿನ ನಡುವೆ ಅವರ ಇತರ ಮುಖ್ಯ ಕವನ ಸಂಕಲನಗಳು. ೧೯೮೬ರಲ್ಲಿ ಅವರ ಸಮಗ್ರ ಕಾವ್ಯ ಮಲ್ಲಿಗೆಯ ಮಾಲೆ ಪ್ರಕಟವಾಯಿತು. ಉಪವನ ಅವರ ಪ್ರಬಂಧಗಳ, ವಿಮರ್ಶೆಗಳ ಸಂಕಲನ. ಗಾಂಧೀಜಿಯವರ ಕೃತಿಗಳಿಂದ ಆಯ್ದ ಭಾಗಗಳಿರುವ ನನ್ನ ಕನಸಿನ ಭಾರತ, ಯೂರಿಪಿಡೀಸ್ನ ನಾಟಕ ಮೀಡಿಯ, ಮಾರ್ಕ್ ಟ್ವೇನನ ಕಾದಂಬರಿ ಹಕಲ್ಬರಿ ಫಿನ್ನನ ಸಾಹಸಗಳು ಅವರು ಅನುವಾದಿಸಿರುವ ಮುಖ್ಯ ಗ್ರಂಥಗಳು. ನರಸಿಂಹಸ್ವಾಮಿಯವರು ಪಡೆದಿರುವ ಅನೇಕಾನೇಕ ಪ್ರಶಸ್ತಿ, ಪುರಸ್ಕಾರಗಳಲ್ಲಿ ದೇವರಾಜ ಬಹದ್ದೂರ್ ಬಹುಮಾನ (೧೯೪೩), ಮೈಸೂರು ರಾಜ್ಯದ ಸಂಸ್ಕೃತಿ ಪ್ರಸಾರ ಶಾಖೆಯ ಬಹುಮಾನ (೧೯೫೭), ಕರ್ನಾಟಕ ರಾಜ್ಯ ಪ್ರಶಸ್ತಿ (೧೯೭೨), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೮), ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಫೆಲೋಶಿಪ್ (೧೯೮೫), ಕೇರಳದ `ಕವಿ ಕುಮಾರನ್ ಆಶಾನ್` ಪ್ರಶಸ್ತಿ (೧೯೮೭), ೬೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (೧೯೯೦), ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟೊರೇಟ್ (೧೯೯೨), ಪಂಪ ಪ್ರಶಸ್ತಿ (೧೯೯೬), ಮಾಸ್ತಿ ಪ್ರಶಸ್ತಿ (೧೯೯೬), ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ಫೆಲೋಷಿಪ್ (೧೯೯೯), ಗೊರೂರು ಪ್ರಶಸ್ತಿ (೨೦೦೦) ಮುಖ್ಯವಾದುವು.

ಲೇಖಕರ ಇತರ ಕೃತಿಗಳು
Rs. 600    Rs. 540
10%
ಕೈಮರದ ನೆಳಲಲ್ಲಿ ಮತ್ತು ....
ನರಸಿಂಹಸ್ವಾಮಿ ಕೆ ಎಸ್, Narasimhaswamy K S
Rs. 35    Rs. 32
Rs. 130    Rs. 117
Best Sellers
ನೀಲಿಬಾನಿನಲ್ಲಿ ಕೆಂಪು ಸೂರ್ಯ : ಜೆಎನ್ಯೂ (JNU) ಆಜಾದಿ ಭಾಷಣಗಳು
ಚೇತನಾ ತೀರ್ಥಹಳ್ಳಿ, Chetana Teerthahalli
Rs. 90/-   Rs. 100
ಡಾ. ರಾಜ್ ಕುಮಾರ್ (ಜೀವನ ಚರಿತ್ರೆ)(ವಿಶ್ವಮಾನ್ಯರು)
ನರಸಿಂಹಮೂರ್ತಿ ಕೆ ಎಚ್, Narasimhamurthy K H
Rs. 23/-   Rs. 25
ನಾರೀಕೇಳಾ (ಅಂಕಣ ಬರಹಗಳು)
ಆಶಾದೇವಿ ಎಂ ಎಸ್, Ashadevi M S
Rs. 200/-   Rs. 250
ಬಂಟರು ಬದುಕು ಮತ್ತು ಬದಲಾವಣೆ
ಶೇಖರ , Shekara
Rs. 270/-   Rs. 300

Latest Books
ಅನೇಕ : ವಿಮರ್ಶಾ ಲೇಖನಗಳ ಸಂಕಲನ
ರಾಜಣ್ಣ ತಗ್ಗಿ ಟಿ ಡಿ, Rajanna Thaggi T D
Rs. 162/-   Rs. 180
ಮಹಾಭಾರತ ಹೇಳಿಯೂ ಹೇಳದ್ದು
ಜಗದೀಶಶರ್ಮಾ ಸಂಪ, Jagadisha Sharma Sampa
Rs. 108/-   Rs. 120
ಶಿಕ್ಷಣ ಕ್ರಾಂತಿಗೆ ಆಹ್ವಾನ (ಓಶೋ ಉಪನ್ಯಾಸಗಳು)
ಓಶೋ, Osho
Rs. 180/-   Rs. 200
ಸನ್ಯಾಸಿ ಮಕ್ಕಳಿಗೆ ಹೇಳಿದ ನೀತಿ ಕಥೆಗಳು
ಕೃಷ್ಣಾ, Krishna
Rs. 108/-   Rs. 120


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.