Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 180    
5%
Rs. 171/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಒಂಟಿದನಿ ಪ್ರಕಾಶನ, Ontidani Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು :
ಪುಸ್ತಕದ ಗಾತ್ರ : 1/8 Demy Size
ಕೋಡ್ : 154336

ಪ್ರಸನ್ನ

ಮೂಲ ರಾಮಾಯಣ ವಾಲ್ಮೀಕಿ ರಾಮಾಯಣದ ಅನುವಾದವಲ್ಲ. ವಾಲ್ಮೀಕಿ ರಾಮಾಯಣದ ಮೂಲ ಆಶಯ ಹಾಗೂ ಸಮಕಾಲೀನ ಸಂದರ್ಭ ಎರಡನ್ನೂ ಗಮನದಲ್ಲಿರಿಸಿಕೊಂಡು ಬರೆದ ಕೃತಿಯಿದು. ನಿಮ್ಮ ಮುಂದಿರುವುದು ಬಾಲಕಾಂಡ ಹಾಗೂ ಅಯೋಧ್ಯಾ ಕಾಂಡಗಳನ್ನು ಒಳಗೊಂಡಿರುವ ಕೃತಿಯ ಮೊದಲಭಾಗ. ರಾಮಾಯಣವನ್ನು ಅರಿಯುವ ಪ್ರಯತ್ನ ಸುಲಭವಲ್ಲ, ಪ್ರಯತ್ನಿಸಿದ್ದೇನೆ ಮಾತ್ರ. ರಾಮಾಯಣದ ವಿಶ್ಲೇಷಣೆಯನ್ನು ಸಮಕಾಲೀನ ಸಂದರ್ಭದಿಂದಲೇ ಆರಂಭಿಸುತ್ತೇನೆ.

ಮಂದಿರ ನಿರ್ಮಾಣ ಚಳುವಳಿ

೧೯೯೧ರ ಸರಿಸುಮಾರಿನಲ್ಲಿ, ಈ ದೇಶದಲ್ಲಿ ರಾಮಮಂದಿರ ನಿರ್ಮಾಣ ಚಳುವಳಿ ನಡೆದಿತ್ತು. ಚಳುವಳಿಯು ಹಿಂದು ಮುಸಲ್ಮಾನ ಸಮುದಾಯಗಳ ನಡುವಿನ ಧಾರ್ಮಿಕ ಹಾಗೂ ಸಾಮಾಜಿಕ ಭಿನ್ನಾಭಿಪ್ರಾಯಗಳಿಂದಾಗಿ ಆರಂಭವಾಗಿತ್ತು, ಹಿಂಸಾತ್ಮಕವಾಗುವ ಸಾಧ್ಯತೆಯಿತ್ತು. ನಾನು ಚಿಂತಿತನಾಗಿದ್ದೆ. ಹಾಗಾಗಿ, ಆವರೆಗೆ ಕೇವಲ ಸಮಾಜವಾದದ ಚಿಂತನೆ ಮಾಡುತ್ತಿದ್ದ ನಾನು ರಾಮನ ಚಿಂತೆ ಮಾಡತೊಡಗಿದೆ. ರಾಮನನ್ನು ಅರಿಯುವ ನನ್ನ ಪ್ರಯತ್ನವು ಹೀಗೆ, ಮಂದಿರ ನಿರ್ಮಾಣ ಚಳುವಳಿಗೆ ಪ್ರತಿಕ್ರಿಯೆಯಾಗಿ ೧೯೯೧ ರಲ್ಲಿ ಆರಂಭವಾಯಿತು.

ಅಗ್ನಿಪ್ರಳಯದ ಅಪಾಯ

ಎರಡನೆಯ ಸಂದರ್ಭವನ್ನು ನಾನು ಅಗ್ನಿಪ್ರಳಯದ ಅಪಾಯ ಎಂದು ಕರೆಯಲು ಬಯಸುತ್ತೇನೆ. ವಿಜ್ಞಾನಿಗಳು ಇದನ್ನು ಪೃಥ್ವಿ ಬಿಸಿಯಾಗುತ್ತಿರುವ ಸಂದರ್ಭ ಎಂದು ವಿವರಿಸುತ್ತಾರೆ. ಇದರ ಲಕ್ಷಣಗಳು ಇಂತಿವೆ. ಮಳೆಬೆಳೆ ಏರುಪೇರಾಗುವುದು, ಅತಿಯಾದ ಬಿಸಿಲು, ಅತಿವೃಷ್ಟಿಅನಾವೃಷ್ಟಿಗಳ ಮೂಲಕ ಬರಗಾಲ ಉಂಟಾಗುವುದು, ಇತ್ಯಾದಿ. ಇದೆಲ್ಲವೂ ನಮಗೀಗಾಗಲೇ ಅನುಭವಕ್ಕೆ ಬರತೊಡಗಿದೆ. ಆದರೆ ನಮ್ಮ ಅರಿವಿಗೆ ಬಾರದಿರುವ ವೈಜ್ಞಾನಿಕ ಸತ್ಯವೆಂದರೆ, ಇದು ಮಾನವ ನಿರ್ಮಿತ ಅನಾಹುತವಾಗಿದೆ. ಈ ಪ್ರಕ್ರಿಯೆಯನ್ನು ತತ್‌ಕ್ಷಣದಲ್ಲಿ ಹಿಮ್ಮೆಟ್ಟಿಸದಿದ್ದರೆ, ಕೇವಲ ಹದಿನೈದು ವರ್ಷಗಳಲ್ಲಿ ಹಿಮ್ಮೆಟ್ಟಿಸದಿದ್ದರೆ, ಹಿಮ್ಮೆಟ್ಟಿಸುವುದೇ ಅಸಾಧ್ಯವಾಗುತ್ತದಂತೆ. ಇದು ಅಗ್ನಿಪ್ರಳಯ.

ಜಲಪ್ರಳಯ

ಈವರೆಗೆ ನಾವು ಜಲಪ್ರಳಯದ ಬಗ್ಗೆ ಮಾತ್ರ ಕೇಳಿದ್ದೆವು. ಪುರಾಣಗಳಲ್ಲೂ ಕೇಳಿದ್ದೆವು, ವೈಜ್ಞಾನಿಕವಾಗಿಯೂ ಕೇಳಿದ್ದೆವು. ವಿಜ್ಞಾನವು ಜಲಪ್ರಳಯವನ್ನು ಪುರಾಣಗಳಿಗಿಂತ ಕೊಂಚ ಭಿನ್ನವಾಗಿ ನೋಡುತ್ತದೆ. ಐಸ್‌ಏಜ್ ಎಂದು ಅದನ್ನು ಕರೆಯುತ್ತದೆ. ಒಂದು ಲಕ್ಷ ವರ್ಷಗಳಿಗೊಮ್ಮೆ ಬರುತ್ತದೆ ಈ ಐಸ್‌ಏಜ್ ಅಥವಾ ಮಂಜಿನ ಯುಗ. ಈವರೆಗೆ ಅಂತಹ ಐದು ಐಸ್‌ಏಜ್‌ಗಳು ಆಗಿ ಹೋಗಿವೆ. ಆರನೆಯದು ಬರಲಿಕ್ಕೆ ಇನ್ನೂ ಎಂಬತ್ತು ಸಾವಿರ ವರ್ಷ ಬಾಕಿಯಿದೆ.
ಭೂಮಿ ಥಣ್ಣಗಾಗಿ ಮಂಜುಗಡ್ಡೆ ಉಂಟಾಗಿ ಬರಲಿರುವ ಈ ಜಲಪ್ರಳಯಕ್ಕೂ ಬಹಳ ಮೊದಲೇ ಮಾನವನಿರ್ಮಿತ ಅಗ್ನಿಪ್ರಳಯ ಬಂದೆರಗಲಿದೆ ನಮ್ಮ ಮೇಲೆ, ಹಾಗೂ ಸಕಲ ಜೀವಗಳನ್ನು ನಾಶಮಾಡಲಿದೆ. ಹಾಗಾದಾಗ ಭೂಮಿಯೂ ಸಹ ಮಿಕ್ಕ ಗ್ರಹಗಳಂತೆ ಜೀವವನ್ನು ಸಲಹುವ ಶಕ್ತಿ ಕಳೆದುಕೊಳ್ಳಲಿದೆ.

ಲೇಖಕರ ಇತರ ಕೃತಿಗಳು
10%
ಶೂದ್ರರಾಗೋಣ ಬನ್ನಿ
ಪ್ರಸನ್ನ, Prasanna
Rs. 140    Rs. 126
10%
ನಟನೆಯ ಪಾಠಗಳು
ಪ್ರಸನ್ನ, Prasanna
Rs. 200    Rs. 180
10%
ದೇಸಿ ಜೀವನ ಪದ್ಧತಿ
ಪ್ರಸನ್ನ, Prasanna
Rs. 70    Rs. 63
10%
ಯಂತ್ರಗಳನ್ನು ಕಳಚೋಣ ಬನ್ನಿ
ಪ್ರಸನ್ನ, Prasanna
Rs. 140    Rs. 126
Best Sellers
ಕುಂಭಕರ್ಣನ ನಿದ್ದೆ
ಶ್ರೀನಿವಾಸ ಉಡುಪ ಎನ್, Srinivasa Udupa N
Rs. 27/-   Rs. 30
ಶಿಕ್ಷಣ - ಕೃಷ್ಣಮೂರ್ತಿ ಜೆ
ಕೃಷ್ಣಮೂರ್ತಿ ಜೆ, Krishnamurthy J
Rs. 81/-   Rs. 90
ಐ ಬಿ ಎಚ್ ಕನ್ನಡ ಕನ್ನಡ ಇಂಗ್ಲಿಷ್ ನಿಘಂಟು (Hard Cover)
ವೆಂಕಟಸುಬ್ಬಯ್ಯ ಜಿ, Venkatasubbaiah G
Rs. 333/-   Rs. 350
ದುರ್ಗಾಸ್ತಮಾನ
ತ ರಾ ಸು, Ta Ra Su
Rs. 450/-

Latest Books
ಕರ್ನಲ್‌ನಿಗೆ ಯಾರೂ ಬರೆಯುವುದಿಲ್ಲ
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್, Gabriel Garcia Marquez
Rs. 72/-   Rs. 80
ಪತಂಜಲಿ ಯೋಗ ಸೂತ್ರಗಳು : ಓಶೋ
ಓಶೋ, Osho
Rs. 446/-   Rs. 495
ದೈನಿಕ ವರದಿಗಾರಿಕೆ
ನಾಗೇಂದ್ರ ಡಾ, Nagendra Dr
Rs. 126/-   Rs. 140
ಮಹಿಳೆಯ ಮನೋಲೋಕ
ಸಂಪಾ : ಡಾ. ವಸುಂಧರಾ ಭೂಪತಿ, Vasundhara Bhupati
Rs. 86/-   Rs. 95


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.