|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಸತ್ತ ವಿಷಯಗಳಿಗೆ ಚಲನೆ ಬೇಡ; ವಾಸ್ತವ ಬದುಕನ್ನ ಚಿತ್ರಿಸುವತ್ತ ಗಮನ ಕೊಡಿ.’ ಆಲ್ಕೋಹಾಲಿಕ್ ಎಂದು ಅವಹೇಳನಗೊಂಡಿದ್ದ ಉನ್ನತ ವ್ಯಾಸಂಗದ ವಿದ್ಯಾರ್ಥಿ ಮರಳಿ ಹೊಸ ಬದುಕಿಗೆ ಮರಳಿದಾಗ ಬರೆದಿದ್ದ ಪತ್ರವೇ ‘ಮೇಘವರ್ಷಿಣಿ’ಯ ಅಕ್ಷರರೂಪಕ್ಕೆ ಕಾರಣವಾಯಿತು. ಪ್ರತಿಯೊಬ್ಬರ ಬದುಕಿನ ಕನಸು, ಪರಿಶ್ರಮ, ಪ್ರತಿಭೆ ಅದೃಷ್ಟವಾಗುವುದು ಎಲ್ಲೋ ರಘನಂದನ್ ಅಂಥ ಮಹತ್ವಾಕಾಂಕ್ಷಿಗೆ ಮಾತ್ರ ಸಾಧ್ಯ. ಕುಸಿದ ‘ಮೇಘವರ್ಷಿಣಿ’ಯ ಭಾವಿ ಒಡೆಯನಿಗೆ ಆಸರೆಯ ಗೋವರ್ಧನಗಿರಿಯಡವಳೇ ಭೂಮಿಕ. ಎಲ್ಲರಿಗೂ ಎಲ್ಲಿ ದೊರೆತಾಳು ಭೂಮಿಕ?
|
ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.
|
|
| |
|
|
|
|
|
|
|
|
|