|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಅರ್ಥವಾಗದ್ದು ನಮ್ಮ ಬದುಕಿನಲ್ಲಿ ಎಷ್ಟೋ ನಡೆದುಹೋಗುತ್ತೆ. ಕೆಲವೊಮ್ಮೆ ಬೊಟ್ಟು ಮಾಡಿದವರು ಹೊಣೆಗಾರರಲ್ದೇ ಹೋಗುತ್ತಾರೆ. ಅಭಿಷೇಕನ್ನ ನೀನು ನಿರಾಕರಿಸೋಲ್ಲ ಎನ್ನುವ ನಂಬ್ಕೇ’ ಇಂಥ ಒಂದು ಸತ್ಯನ ವಿಭಾ ಮುಂದೆ ಬಿಚ್ಚಿಟ್ಟರು. ಇಂಥ ಒಂದು ಅನುಭವ ಎಲ್ಲರ ಬದುಕಿನಲ್ಲು ಬಂದು ಹೋಗಿರುತ್ತದೆ!
ಪ್ರತಿಯೊಬ್ಬರು ಸತ್ಯಾನ್ವೇಷಣೆಗೆ ತಮ್ಮ ಮನಸ್ಸನ್ನ ಹಚ್ಚಿದಾಗ ಇಂಥ ಎಷ್ಟೋ ವಿಷಯಗಳು ಬೆಳಕಿಗೆ ಬರುತ್ತೆ. ಜೊತೆಯಲ್ಲಿ ಇದ್ದವರು ಏನೂ ಅಲ್ಲವಾಗಿ ಹೋಗುತ್ತಾರೆ. ಕ್ಷಣ ಕಂಡವರೇ ಜೀವನದಲ್ಲಿ ಉಳಿದು ಹೋಗ್ತಾರೆ. ಇದೊಂದು ವಿಪರ್ಯಾಸ. ಅದಕ್ಕೆ ‘ಮತ್ತೊಂದು ಬಾಡದ ಹೂ’ನ ವಿಭಾ ಮತ್ತು ಅಭಿಷೇಕ್ ಸಾಕ್ಷಿಯಾದರು.
|
ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.
|
|
| |
|
|
|
|
|
|
|
|
|