|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ರಾಮಾಯಣದ ಹನುಮಂತ ಸಮುದ್ರವನ್ನು ಹಕ್ಕಿಯಂತೆ ಹಾರುತ್ತ ದಾಟಿಹೋಗುತ್ತಾನೆ. ರಸ್ತೆಯಲ್ಲಿ ನಡೆದಾಡಿದಷ್ಟು ಸಲೀಸಾಗಿ ನಾರದರು ಗಗನದಲ್ಲಿ ಮೂರು ಲೋಕಗಳನ್ನೂ ಕ್ರಮಿಸಿಬಿಡುತ್ತಾರೆ. ಗ್ರೀಕ್ ಪುರಾಣದ ಡಯೆದೆಲಸ್, ಇಕಾರಸ್ರು ರೆಕ್ಕೆ ಕಟ್ಟಿಕೊಂಡು ಬಾನಂಗಳದಲ್ಲಿ ಅಡ್ಡಾಡುತ್ತಾರೆ. ಹಕ್ಕಿಗೇನು - ಗಗನವೇ ಆಡುಂಬೊಲ! ಗರುಡ ರೆಕ್ಕೆ ಬಿಚ್ಚಿ ಮಲಗಿದಂತೆ ಆಗಸದಲ್ಲಿ ಗಿರಕಿ ಹೊಡೆಯುತ್ತದೆ. ಕೈ ಬಿಟ್ಟ ಬಲೂನು, ತವರುಮನೆಗೋಡುವ ಹೆಣ್ಣುಮಗಳ ಹಾಗೆ ಮೇಲೆ ಹಾರುತ್ತದೆ. ಬಾನಲ್ಲಿ ಗಾಳಿಪಟ ಓಲಾಡುವುದನ್ನು ನೋಡಲು ಎಷ್ಟು ಖುಷಿ! ತನಗೂ ಹಾಗೆ ಹಾರಲು ಬರುವಂತಿದ್ದರೆ ! ಹೀಗೆ ಸಾಗುತ್ತದೆ ವಿಮಾನಯಾನದ ಮಹಾಕತೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಮಾನವನ ಕಲ್ಪನೆ-ಆಶೊತ್ತರಗಳು, ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ ಎನ್ನುವ ಆತನ ತುಡಿತ-ಚಡಪಡಿಕೆಗಳು ಈ ಹೊತ್ತಗೆಯ ಮುಖ್ಯ ಹೂರಣ. ಭೂಮಿಯ ಮೇಲಿದ್ದುಕೊಂಡೇ ಆಕಾಶಕ್ಕೆ ಏಣಿ ಚಾಚಿ ಸಿಗುವಷ್ಟನ್ನು ಬೊಗಸೆ ತುಂಬ ಹಿಡಿದುಬಿಡಬೇಕೆಂಬ ಮನುಷ್ಯನ ಕುತೂಹಲಬುದ್ಧಿಗೆ ಪುಷ್ಪಕ ವಿಮಾನ ಒಂದು ಪ್ರತೀಕವೂ ಹೌದು.
|
ರೋಹಿತ್ ಚಕ್ರತೀರ್ಥ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಪ್ರವಾಸಿ. ನಾಟಕ, ಜನಪದ, ಛಾಯಾಗ್ರಹಣ - ಇನ್ನಿತರ ಆಸಕ್ತಿಗಳು.
|
|
| |
|
|
|
|
|
|
|
|
|