|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮನದೊಳಗಿನ ಮಾತು
ಇಂದಿನ ದಿನಗಳಲ್ಲಿ ಆಪ್ತ ಸಮಾಲೋಚನೆ ಎಂಬ ಒಂದು ಚಿಕಿತ್ಸಾ ರೂಪದ ಸಾಂತ್ವನವು ಎಲ್ಲೆಡೆ ಕೇಳಿಬರುವುದಷ್ಟೇ ಅಲ್ಲ ಅನೇಕರು ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಎಲ್ಲೆಲ್ಲೂ ಒತ್ತಡಗಳ ಜೊತೆಗೆ ಇನ್ನಿತರ ವೈಯಕ್ತಿಕ ಕಾರಣಗಳಿಂದಾಗಿ ಏನು ಮಾಡಬೇಕೆಂಬುದನ್ನು ಸ್ವತಃ ನಿರ್ಧಾರ ಕೈಗೊಳ್ಳಲಾಗದೆ ಚಡಪಡಿಸಿ ಗೊಂದಲಕ್ಕೆ ಸಿಲುಕುತ್ತಾರೆ. ಒಂದು ಸಮಾಧಾನದ ಮಾತು ಹಾಗೂ ಸ್ಪಷ್ಟ ನಡೆಯ ಬಗ್ಗೆ ಅವರಿಗೆ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಅಂತಹ ಸಹಾನುಭೂತಿಯುಳ್ಳ ಸಲಹೆಯ ಒಂದು ಚಿಕಿತ್ಸಾಕ್ರಮವನ್ನು ಈ ಕೃತಿಯಲ್ಲಿ ಲೇಖಕರು ವಿವರವಾಗಿ ತಿಳಿಸಿದ್ದಾರೆ. ತರಬೇತಿಗೊಂಡ ಆಪ್ತ ಸಮಾಲೋಚಕರು ಸಹಾಯಾರ್ಥಿಯೊಡನೆ ಯಾವ ರೀತಿ ಹಂತಹಂತವಾಗಿ ಆತನ ಸಮಸ್ಯೆಯನ್ನು ಗುರುತಿಸಿ, ಚಿಕಿತ್ಸೆ ನೀಡಿ ಆತನನ್ನು ಹರ್ಷಚಿತ್ತನನ್ನಾಗಿ ಮಾಡುವರೆಂದು ಇಲ್ಲಿ ಓದಿ ತಿಳಿದುಕೊಳ್ಳಿ.
|
ಶ್ರೀ ಗಣೇಶ್ರಾವ್ ನಾಡಿಗೇರ್ ಆಪ್ತಸಲಹೆ-ಮನೋಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವೀಧರರು. ಸಮಾಜ ಸೇವೆಯಲ್ಲಿ ಆಸಕ್ತಿ. ಮಾನಸಾಧಾರ ಪುನಶ್ಚೇತನ ಕೇಂದ್ರದಲ್ಲಿ ಆಪ್ತಸಲಹೆಗಾರರಾಗಿ ಒಂಬತ್ತು ವರ್ಷ ಸೇವೆ ಸಲ್ಲಿಸಿದ ಅನುಭವ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಭಾಷಣ, ಸಂದರ್ಶನಗಳು ಪ್ರಸಾರವಾಗಿವೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ಸಮ್ಮೇಳನ-ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನ್ಜಿರ್ವಹಿಸಿದ್ದಾರೆ. ಪರಮಹಂಸ ಪ್ರತಿಷ್ಠಾನ, ಆಸರೆ ಆಶಕ್ತ ಹಿರಿಯರ, ಅಂಗವಿಕಲರ ಸೇವಾ ಕೇಂದ್ರ ಮತ್ತು ಸ್ಪಂದನ ಆಪ್ತಸಲಹಾ ಕೇಂದ್ರಗಳನ್ನು ಸ್ಥಾಪಿಸಿ ಸಮಾಜಸೇವೆ ಮಾಡುತ್ತಿದ್ದಾರೆ.
|
|
| |
|
|
|
|
|
|
|
|
|