|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಆರ್. ಕೆ. ನಾರಾಯಣ್ ಅವರ ಬರಹವೆಂದರೆ ದಕ್ಷಿಣ ಭಾರತದ ಮಧ್ಯಮವರ್ಗದ ಜನರಿಗೆ ಒಂದು ರಸದೌತಣವಿದ್ದಂತೆ. ಅವರ ಕಲ್ಪನೆಯ ಮಾಲ್ಗುಡಿ ನಮ್ಮ ಮನೋರಾಜ್ಯದ ಆಶೋತ್ತರಗಳನ್ನೆಲ್ಲ ಸಾಕರಗೊಳಿಸುವ ಯಶಸ್ವೀ ಪ್ರಯತ್ನ. ಮಾಲ್ಗುಡಿಯ ವರ್ಣಮಯ ಜೀವನಸಿರಿಗೆ ಮೂವತ್ತೆರಡು ಸಣ್ಣ ಕಥೆಗಳನ್ನು ಸೇರಿಸುವ ಮೂಲಕ ಅದರ ರುಚಿವೈವಿಧ್ಯವನ್ನು ‘ಮಾಲ್ಗುಡಿ ದಿನಗಳು‘ ಇನ್ನೂ ಹೆಚ್ಚಿಸಿದೆಯೆಂದರೆ ಅತಿಶಯೋಕ್ತಿಯಾಗಲಾರದು. ನಿರ್ಭಾವುಕತೆಯೊಂದಿಗೆ ಜೀವಕಾರುಣ್ಯವನ್ನೂ ಸೇರಿಸಿ ಎರಕ ಹೊಯ್ದಂತಿರುವ ಆರ್. ಕೆ. ನಾರಾಯಣ್ ಅವರ ದೃಷ್ಟಿಯಿಂದ ಭಾರತೀಯ ಸಮಾಜದ ಯಾವ ಅಂಶವೂ ತಪ್ಪಿಸಿಕೊಂಡಿಲ್ಲ. ವ್ಯಾಪಾರಿಗಳು, ಭಿಕ್ಷುಕರು, ದನಗಾಹಿಗಳು, ಗೋಸಾಯಿಗಳು, ಶಿಕ್ಷಕರು, ಕಳ್ಳಕೊರಮರು-ಎಲ್ಲ ರೀತಿಯ ಪಾತ್ರಗಳೂ ಮೂರ್ತೀಭವಿಸಿ ಬಂದು ನಾರಾಯಣ್ ಅವರ ಸಾಹಿತ್ಯದ ನಳಪಾಕಕ್ಕೆ ಮಾನವ ಜೀವನಾನುಭವದ ತಮ್ಮ ತಮ್ಮ ಭಾಗಗಳನ್ನು ತಂದು ಸುರಿದು ಅನುಪಮ ಸ್ವಾದವನ್ನುಂಟುಮಾಡುತ್ತಾರೆ.
|
| | |
|
|
|
|
|
|
|
|