Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 110    
50%
Rs. 55/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ISBN : 9788184674262
ಕೋಡ್ : 002280

ಮಹಿಳೆಯರನ್ನು ಕೇಂದ್ರವಾಗಿರಿಸಿಕೊಂಡು ಅವಳ ಹಿಂದಿನ-ಇಂದಿನ ಸ್ಥಾನಮಾನಗಳತ್ತ ವಿಶ್ಲೇಷಣಾತ್ಮಕ ನೋಟ ಬೀರಿ ವಾಸ್ತವದತ್ತ ಮುಖ ಮಾಡಿದ ಲೇಖನಗಳು. ಅವಳ ಸುತ್ತ ಮೌಢ್ಯದ ಕೋಟೆ ಕಟ್ಟಿ, ನಿಬಂಧನೆಗಳನ್ನು ಹೇರಿ ಅಂದಿನ ಪುರುಷ ಪ್ರಾಧಾನ್ಯ ಸಮಾಜ ಆಕೆಯನ್ನು ಹೈರಾಣಗೊಳಿಸಿತ್ತು. ಸಂಪ್ರದಾಯದ ನೆಪದಲ್ಲಿ ಇಂದಿಗೂ ಅವಳು ಈ ಕೋಟೆಯಿಂದ ಹೊರಬಂದಿಲ್ಲವೆಂದು ಇಲ್ಲಿನ ಲೇಖನಗಳು ಹೇಳುತ್ತಿವೆ. ಎಷ್ಟೇ ಆಧುನಿಕ ಸಮಾಜದಲ್ಲಿ ಜೀವಿಸುತ್ತಿದ್ದರೂ ಹಲವು ಕುಟುಂಬಗಳಲ್ಲಿ ಮೇಲ್ವರ್ಗ-ಕೆಳವರ್ಗಗಳೆಂಬ ತಾರತಮ್ಯವಿಲ್ಲದೆ ಅವಳು ವಿಧವಿಧವಾದ ಕಟ್ಟುಪಾಡುಗಳಿಗೆ ಗುರಿಯಾಗಿದ್ದಾಳೆ. ನೆರೆಯ ರಾಜ್ಯವಿರಬಹುದು ದೂರ ರಾಷ್ಟ್ರವಿರಬಹುದು - ಆಯಾ ಪ್ರದೇಶದ ಕ್ರೂರ - ಮೂಢನಂಬಿಕೆಗಳಿಗೆ ಅವಳು ಬಲಿಯಾಗಿದ್ದಾಳೆ. ಹೆಣ್ಣನ್ನು ಒಂದು ಆಸ್ತಿ ಎಂದು ಪರಿಗಣಿಸಿ ಇನ್ನಿತರ ವಸ್ತುಗಳ ಮೇಲಿನ ಒಡೆತನದಂತೆ ಆಕೆಯ ಮೇಲೆ ಗಂಡಿನ ಅಧಿಕಾರವಿತ್ತೆಂದೂ ಅವಳಿಗೆ ಸ್ವತಂತ್ರವಾಗಿ ಯೋಚಿಸುವ ಹಕ್ಕು ಕೂಡ ಇಲ್ಲಿಲ್ಲ ಎಂಬ ಅಂಶವನ್ನು ಇಲ್ಲಿ ಹಲವು ಸಾಹಿತ್ಯಗಳ ಓದಿನಿಂದ ಶ್ರುತಪಡಿಸಲಾಗಿದೆ. ಇಂದು ಇಂಥ ವ್ಯವಸ್ಥೆಯಿಂದ ಹೊರಬರುವ ಸಾಧ್ಯತೆಗಳು ಸಾಕಷ್ಟಿದ್ದು ನಿಧಾನವಾಗಿ ಅದರತ್ತ ಮುಖಮಾಡಿದ ಕ್ರಾಂತಿಕಾರಿ ಬದಲಾವಣೆಯ ಬಗ್ಗೆಯೂ ಇಲ್ಲಿ ಸ್ತ್ರೀ ದನಿ ಎತ್ತಿದ್ದಾಳೆ.

ಡಾ|| ವಸುಂಧರಾ ಭೂಪತಿ ಪ್ರಖ್ಯಾತ ಆಯುರ್ವೇದ ವೈದ್ಯೆ. ಪ್ರವೃತ್ತಿಯಲ್ಲಿ ಸಾಹಿತಿಯಾದ ಇವರ ೩೬ ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಕೆಲವು ಪುಸ್ತಕಗಳು ಅನುವಾದಗೊಂಡಿವೆ. ವೈದ್ಯಲೋಕ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. ಇವರು ಸಹಲೇಖಕಿಯಾಗಿ ರಚಿಸಿದ ಮನೆಯಂಗಳದಲ್ಲಿ ಔಷಧಿವನ ಪುಸ್ತಕ ಹಲವು ಮುದ್ರಣಗಳನ್ನು ಕಂಡಿದ್ದು, ‘ಶ್ರೇಷ್ಠ ಲೇಖಕಿ ಪುರಸ್ಕಾರ‘ ದೊರೆತಿದೆ. ೨೦೦೭ರಲ್ಲಿ ಎಚ್.ಐ.ವಿ.ಏಡ್ಸ್ ಲೇಖನಕ್ಕೆ ‘ಯೂನಿಸೆಫ್ ಪತ್ರಿಕೋದ್ಯಮ ಪ್ರಶಸ್ತಿ‘, ಹೂವು ಮತ್ತು ಆರೋಗ್ಯ ಪುಸ್ತಕಕ್ಕೆ ‘ಅಕಲಂಕ ಪ್ರಶಸ್ತಿ‘, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ೨೦೧೨ರಲ್ಲಿ ‘ಶ್ರೇಷ್ಠ ವಿಜ್ಞಾನ ಸಂವಹನಕಾರ ರಾಜ್ಯ ಪ್ರಶಸ್ತಿ‘, ಮುಂತಾದ ಪ್ರಶಸ್ತಿಗಳು ದೊರೆತಿವೆ. ಪ್ರಸ್ತುತ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದಾರೆ.

ಲೇಖಕರ ಇತರ ಕೃತಿಗಳು
Rs. 140    Rs. 126
10%
ಆರೋಗ್ಯ ವೈವಿಧ್ಯ
ವಸುಂಧರಾ ಭೂಪತಿ, Vasundhara Bhupathi
Rs. 125    Rs. 113
Rs. 30    Rs. 27
10%
ಡಾ. ಯಲ್ಲಾಪ್ರಗಡ ಸುಬ್ಬರಾವ್ ....
ವಸುಂಧರಾ ಭೂಪತಿ, Vasundhara Bhupathi
Rs. 25    Rs. 23
Best Sellers
ಲಿಂಗಾಯತ : ಹಿಂದೂ ಅಲ್ಲ, ವೀರಶೈವವೂ ಅಲ್ಲ
ಚೆನ್ನಬಸಪ್ಪ ಕೋ (ಕೋಚೆ), Chennabasappa Koche
Rs. 18/-
ಅಪ್ರತಿಮ ಕೊಡುಗೆ
ಯಗಟಿ ರಘು ನಾಡಿಗ್, Yagati Raghu Nadig
Rs. 86/-   Rs. 95
ದೇಶಪ್ರೇಮಿಗಳು ಮತ್ತು ಪಕ್ಷಪಾತಕರು
ರಂಗನಾಥ ರಾವ್ ಜಿ ಎನ್, Ranganatha Rao G n
Rs. 270/-   Rs. 300
ಡಿ ವಿ ಗುಂಡಪ್ಪ (ಜೀವನ ಮತ್ತು ಸಾಧನೆ)
ವೆಂಕಟರಮಣನ್ ಡಿ ಆರ್, Venkataramanan D R
Rs. 72/-   Rs. 80

Latest Books
ನಿಜದನಿ
ನಾಯಕ ಜಿ ಎಚ್, Nayak G H
Rs. 180/-   Rs. 200
ಬಿಡದಾ ಭುವಿಯಾ ಮಾಯೆ... ತಾಯಿ
ಪ್ರೊ. ಜಿ ಜಿ ಮಠಪತಿ, Prof G G Matapathi
Rs. 77/-   Rs. 85
ಕಂದೀಲು-ಕಾದಂಬರಿ
ಸೋಮು ರೆಡ್ಡಿ, Somu Reddy
Rs. 117/-   Rs. 130
ನೀರೊಳಗಿನ ಕಲ್ಲೇಕೆ ಹಗುರ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೨
ಆವಲ ಮೂರ್ತಿ ಎ ಓ, Avala Murthy A O
Rs. 50/-   Rs. 55


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.