Items
0
Total
  0.00 
Welcome Guest.

 
Rs. 70    
10%
Rs. 63/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Demy Size
ಕೋಡ್ : 104107

ಮೃತ್ಯುದೇವತೆಯ ಮೇಲೆ ಮನುಷ್ಯ ವಿಜಯ ಸಾಧಿಸುವ ಕತೆ ಜಗತ್ತಿನಾದ್ಯಂತ ಸಾಹಿತ್ಯದ ವಸ್ತುವಾಗಿದೆ. ಮಾರ್ಕಂಡೇಯ ಪುರಾಣದಲ್ಲಿ ಅದನ್ನು ಭಕ್ತಿಯ ಮೂಲಕ ಸಾಧಿಸಲಾಗುತ್ತದೆ. ಸಾವಿತ್ರಿ ಕತೆಯಲ್ಲಿ ಜ್ಞಾನದ ಮೂಲಕ, ಹರ್ಕ್ಯುಲೆಸ್ ಪುರಾಣದಲ್ಲಿ ಬರೇ ಶಾರೀರಿಕ ಶಕ್ತಿಯಿಂದ. ಈ ವಸ್ತುವಿಗೆ ಬಹಳ ಸಂಕೀರ್ಣವೂ, ನವೀನವೂ ಆದ ತಿರುವನ್ನು ‘ಮಹಾಮಾಯಿ’ ನಾಟಕ ನೀಡಿದೆ. ಇದರಲ್ಲಿ ಪೂರ್ವ ನಿಗದಿತವಾದ ಸಾವು ಮುಟ್ಟುವ ಹಾಗೆ ರಾಜಕುಮಾರಿಯನ್ನು ಕಾಪಾಡುವುದು ಕಥಾನಾಯಕನ ವೈದ್ಯಕೌಶಲವಲ್ಲ; ಪ್ರೇಮ.

‘ಮಹಾಮಾಯಿ’ಯಲ್ಲಿ ಕಂಬಾರರು ನಾಟಕ, ನಿರೂಪಣೆ, ಕಾವ್ಯ - ಹೀಗೆ ಮೂರು ಮಾದರಿಗಳನ್ನು ಏಕತ್ರಗೊಳಿಸಿದ್ದಾರೆ. ಬೇರೆ ಬೇರೆ ಮೂಲಗಳಿಂದ ಆಯ್ದ ವಿಸ್ಮಯಕಾರಿಯಾದ ಸಂಕೇತಗಳ ಸರಮಾಲೆಯೇ ಇಲ್ಲಿ ಕಂಡುಬಂದಿದ್ದು, ಅದರ ದೃಶ್ಯೀಯ ಹಾಗೂ ಕಾಲ್ಪನಿಕ ಶಕ್ತಿಯನ್ನು ಗಮನಿಸಿದರೆ ಕನ್ನಡ ನಾಟಕಗಳಲ್ಲಿ ಏಕೆ, ಭಾರತೀಯ ನಾಟಕಗಳಲ್ಲೇ ಇದಕ್ಕೆ ಸರಿಸಮಾನವಾದ ಇನ್ನೊಂದು ಕೃತಿ ಇದೆ ಎಂದು ಅನ್ನಿಸುವುದಿಲ್ಲ.

ಡಾ. ಚಂದ್ರಶೇಖರ ಕಂಬಾರ (ಜನನ - ಜನವರಿ ೨, ೧೯೩೭) ಬೆಳಗಾವಿ ಜಿಲ್ಲೆ ಘೋಡಿಗೇರಿ ಗ್ರಾಮದಲ್ಲಿ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಗೋಕಾಕ್ ನ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ, ೧೯೬೨ರಲ್ಲಿ `ಕರ್ನಾಟಕ ವಿವಿ`ಯಿಂದ ಎಂ.ಎ ಪದವಿ ಹಾಗೂ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ. ಡಾ. ಚಂದ್ರಶೇಖರ ಕಂಬಾರರು ರಾಷ್ಟ್ರಮಟ್ಟದಲ್ಲಿ ಕನ್ನಡದ ಸಿದ್ಧಿ-ಸಾಧನೆಗಳನ್ನು ಎತ್ತಿ ಹಿಡಿದಿರುವ ಹಾಗೂ ಅದರ ಪ್ರತೀಕವಾಗಿರುವ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕಾವ್ಯ, ನಾಟಕ, ಕಾದಂಬರಿ ಮತ್ತು ಜಾನಪದ ಕ್ಷೇತ್ರಗಳಲ್ಲಿ ಮಹತ್ವದ ಕೃತಿಗಳನ್ನು ಕಾಣಿಕೆಯಾಗಿತ್ತಿರುವುದು ಮಾತ್ರವಲ್ಲದೆ, ತಮ್ಮ ಆಯ್ಕೆಯ ಈ ಎಲ್ಲ ಕ್ಷೇತ್ರಗಳಿಗೆ ಹೊಸ ಆಯಾಮವನ್ನು ಜೋಡಿಸಿದ ಹಿರಿಮೆಯೂ ಅವರದಾಗಿದೆ. ತಮ್ಮ ಸಾಹಿತ್ಯ ಕೃತಿಗಳಿಗಾಗಿ ಹಲವಾರು ರ‍್ಟ್ರಾಯ ಪ್ರಶಸ್ತಿಗಳನ್ನು ಗಳಿಸಿದ ಅವರು ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಿದಾಗಲೂ ಅದೇ ವಿಕ್ರಮವನ್ನು ಮೆರೆದಿದ್ದಾರೆ. ಕನ್ನಡ ವಿಶ್ವವಿದ್ಯಾನಿಲಯದ ಪ್ರಥಮ ಕುಲಪತಿಗಳಾಗಿದ್ದ ಅವರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಾಧನೆಗಳು ಕನ್ನಡ ನಾಡಿಗೇ ಹೆಮ್ಮೆಯನ್ನು ತರುವಂಥ ಸಂಗತಿಗಳಾಗಿವೆ.

uploads/authorimages/729.jpg
ಲೇಖಕರ ಇತರ ಕೃತಿಗಳು
Rs. 395    Rs. 356
10%
ಶಿವನ ಡಂಗುರ (ಕಾದಂಬರಿ)
ಚಂದ್ರಶೇಖರ ಕಂಬಾರ, Chandrashekhara Kambar
Rs. 225    Rs. 203
Rs. 80    Rs. 72
Best Sellers
ಇಗೋ ಕನ್ನಡ ಸಂಪುಟ - 1 (ಸಾಮಾಜಿಕ ನಿಘಂಟು)
ವೆಂಕಟಸುಬ್ಬಯ್ಯ ಜಿ, Venkatasubbaiah G
Rs. 248/-   Rs. 275
ಇಷ್ಟಕಾಮ್ಯ (ನಾಗತಿಹಳ್ಳಿ ನಿರ್ದೇಶದಲ್ಲಿ ಚಲನಚಿತ್ರವಾಗಿರುವ ಕಾದಂಬರಿ)
ದೋಡ್ಡೇರಿ ವೆಂಕಟಗಿರಿರಾವ್, Dodderi Venkatagiri Rao
Rs. 135/-   Rs. 150
ವಿಜ್ಞಾನದ ರಮ್ಯ ಕಥೆಗಳು (ಕಿರಿಯರ ಕಥಾಮಾಲೆ)
ಸಹನ, Sahana
Rs. 45/-   Rs. 50
ಕರುಣಾಳು ಬಾ ಬೆಳಕೆ - 4
ಗುರುರಾಜ ಕರಜಗಿ, Gururaj Karajagi
Rs. 113/-   Rs. 125

Latest Books
ಭೋಧಿಸತ್ವ (ನಾಟಕ)
ಧರ್ಮಾನಂದ ಕೊಸಾಂಬಿ, Dharmanand Kosambi
Rs. 45/-   Rs. 50
ಟಿ ಸುನಂದಮ್ಮ : ಸಾಹಿತ್ಯ ಸಂಪುಟ - 1
ಸಂಪಾ : ಡಾ. ವಸುಂಧರಾ ಭೂಪತಿ, Vasundhara Bhupati
Rs. 225/-   Rs. 250
ಸಮಗ್ರ ಹಾಸ್ಯ : ಬೇಲೂರು ರಾಮಮೂರ್ತಿ
ಬೇಲೂರು ರಾಮಮೂರ್ತಿ, Belur Ramamurthy
Rs. 360/-   Rs. 400
ಸಾಮಾನ್ಯ ಕನ್ನಡ FDA SDA
ಕೆ ಎಂ ಸುರೇಶ್, K M Suresh
Rs. 314/-   Rs. 330


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.