|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
208 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
171808 |
ಮಹಾಭಾರತ ಓದಿಲ್ಲದವರಿಗೂ ಅಲ್ಲಿನ ಕಥೆಗಳು ಅಪರಿಚಿತವೇನಲ್ಲ. ಯಾರೋ ಹೇಳಿದ, ಎಲ್ಲೋ ಓದಿದ, ಎಲ್ಲೋ ಕೇಳಿದ ಈ ಕಥೆಗಳನ್ನು ಒಂದೆಡೆ ಗಮನಿಸಿದಾಗ, ಅರೆ! ಇವೆಲ್ಲಾ ಮಹಾಭಾರತದಲ್ಲಿವೆಯೇ ಎಂದು ಅಚ್ಚರಿಯಾಗುತ್ತದೆ. ಮೂಲ ಕಥೆಯೊಂದಿಗೆ ಈ ಉಪಕಥೆಗಳೂ ಹಾಸು ಹೊಕ್ಕಾಗಿವೆ. ಒಂದು ಉಪಕಥೆಯನ್ನು ಬಳಸಿಕೊಳ್ಳುವುದು ಇಲ್ಲಿಯ ಸ್ವಾರಸ್ಯ. ಹಾಗಾಗಿ ಮಹಾಭಾರತ, ನೂರಾರು ಉಪಕಥೆಗಳ ಸಮುದ್ರವೇ ಆಗಿದೆ.
ಮೂಲ ಕಥೆಯೊಂದಿಗೆ ಓದಿದಾಗ ಅಲ್ಲಿಯ ಭಾಗವಾಗಿವೇ ಕಾಣುವ ಕಥೆಗಳು, ಸ್ವತಂತ್ರ ಕಥೆಗಳಾಗಿಯೂ ಪ್ರಸಿದ್ಧವಾಗಿವೆ. ಕಿರಾತಾರ್ಜುನಿಯ, ನಳದಮಯಂತಿ, ಶಾಕುಂತಲ ಮುಂತಾದ ಕಥೆಗಳಂತೂ ಸ್ವತಂತ್ರವಾಗಿ ಬೆಳೆದು ಪ್ರತ್ಯೇಕ ಗ್ರಂಥಗಳ ಸ್ವರೂಪತಾಳಿವೆ. ಇಡೀ ಮಹಾಭಾರತವೇ ಒಂದು ನೀತಿಕಥೆ. ಇಲ್ಲಿಯ ಉಪಕಥೆಗಳೂ ಅದಕ್ಕೆ ಹೊರತಲ್ಲ. ರಂಜನೆ, ನೀತಿ, ಹಾಸ್ಯ, ಶೃಂಗಾರ ಮುಂತಾದವುಗಳನ್ನೊಳಗೊಂಡ ಈ ಕಥೆಗಳು ಮೂಲ ಕಥೆಯಂತೆಯೇ ರಂಜಿಸುತ್ತವೆ. ಈ ಕಥೆಗಳ ಸ್ವಾರಸ್ಯವನ್ನು ಓದಿಯೇ ತಿಳಿಯಬೆಕು.
|
| |
|
|
|
|
|
|
|
|
|