Items
0
Total
  0.00 
Welcome Guest.

 
Rs. 260
10%
Rs. 234/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಕ್ಷರ ಪ್ರಕಾಶನ, Akshara Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 392
ಪುಸ್ತಕದ ಗಾತ್ರ : 1/8 Demy Size
ಕೋಡ್ : 180125

ಮೇಲುನೋಟಕ್ಕೆ ಬಿಡಿ ಲೇಖನಗಳ ಸಂಕಲನವೆಂದು ತೋರಿದರೂ ಅವೆಲ್ಲ ಒಗ್ಗೂಡಿ ಆಧುನಿಕ ಕನ್ನಡ ಸಣ್ಣಕತೆಯ ‘ಕತೆ’ಯೇ ಆಗಿಬಿಡುವುದು ಟಿ.ಪಿ. ಅಶೋಕರ ‘ಕಥನ ಪ್ರೀತಿ’ಯ ವೈಶಿಷ್ಟ್ಯ. ಆಯಾ ಕತೆಯ ವಸ್ತು-ತಂತ್ರ-ದರ್ಶನಗಳನ್ನು ತೆರೆದು ತೋರುತ್ತ, ಅದರ ಐತಿಹಾಸಿಕ ಸಂದರ್ಭ ಮತ್ತು ಸಮಕಾಲೀನ ಪ್ರಸ್ತುತತೆಗಳ ಬಗ್ಗೆ ಓದುಗರ ಗಮನ ಸೆಳೆಯುತ್ತ, ಅದರ ಒಡಲಿನಿಂದ ಮೂಡುವ ಕಥಾಮೀಮಾಂಸೆಯನ್ನೂ, ಅದು ಇತರ ಕೃತಿಗಳೊಂದಿಗೆ ಸೃಷ್ಟಿಸಿಕೊಳ್ಳುವ ಅಂತರ್‌ಪಠ್ಯೀಯ ಸಂಬಂಧಗಳನ್ನೂ ಶೋಧಿಸುತ್ತ ಸಾಗುವ ಈ ವಿಮರ್ಶಾ ‘ಕಥನ’ವು ಕನ್ನಡ ವಿಮರ್ಶೆಯ ಸಂದರ್ಭದಲ್ಲೇ ಒಂದು ಅನನ್ಯ, ಅಪೂರ್ವ ಪ್ರಯೋಗವಾಗಿದೆ.

ಟಿ.ಪಿ. ಅಶೋಕ ಹುಟ್ಟಿದ್ದು ೧೯೫೫ರಲ್ಲಿ, ನಂಜನಗೂಡಿನಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಎರಡು ವರ್ಷ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಸದ್ಯ ಸಾಗರದ ಲಾಲ್ ಬಹಾದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಹಾಗೂ ಇಂಗ್ಲಿಷ್ ವಿಭಾಗದ ಮುಖ್ಯಸ್ಥರು. ಆರನೆಯ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಅವರಿಗೆ ಲಭಿಸಿದೆ. ನಾಡಿನಾದ್ಯಂತ ಸಾಹಿತ್ಯ, ರಂಗಭೂಮಿ ಮತ್ತು ಚಲನಚಿತ್ರ ಸಹೃದಯತೆ ಕುರಿತು ಸುಮಾರು ಮುನ್ನೂರು ಕಿರು ಅವದಿಯ ಶಿಬಿರಗಳನ್ನು ನಡೆಸಿರುವ ಸಾಧನೆ ಅವರದು. ಸದ್ಯ ’ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿ ಪ್ರತಿ ಭಾನುವಾರ ’ಆಂತರ್ಯ’ ಎಂಬ ಅಂಕಣವನ್ನೂ, ’ಕಸ್ತೂರಿ’ ಮಾಸಿಕದಲ್ಲಿ ಪ್ರತಿ ತಿಂಗಳು ’ಪುಸ್ತಕ ಸನ್ನಿಧಿ’ ಎಂಬ ಅಂಕಣವನ್ನೂ ಬರೆಯುತ್ತಿದ್ದಾರೆ. ಕಳೆದ ಮೂರು ದಶಕಗಳಿಂದ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹ, ಹೀಗೆ ಹಲವು ಪ್ರಕಾರಗಳಲ್ಲಿ ತೊಡಗಿಕೊಂಡಿರುವ ಅವರು ಇದುವರೆಗೆ ಇಪ್ಪತ್ತೊಂಬತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ಸಾಹಿತ್ಯ ಸಂಪರ್ಕ, ಸಾಹಿತ್ಯ ಸಂದರ್ಭ, ಶಿವರಾಮ ಕಾರಂತ: ಎರಡು ಅಧ್ಯಯನಗಳು, ವಾಸ್ತವತಾವಾದ, ಪುಸ್ತಕ ಪ್ರೀತಿ, ಪುಸ್ತಕ ಸಮಯ, ಸಾಹಿತ್ಯ ಸಂಬಂಧ, ತೇಜಸ್ವಿ ಕಥನ, ಯು.ಆರ್. ಅನಂತಮೂರ್ತಿ: ಒಂದು ಅಧ್ಯಯನ ಮುಖ್ಯ ಕೃತಿಗಳು. ಅವರು ಸಂಪಾದಿಸಿರುವ ಕೃತಿಗಳಲ್ಲಿ ಎ.ಕೆ. ರಾಮಾನುಜನ್ ನೆನಪಿನ ಸಂಪುಟ, ಶಿವರಾಮ ಕಾರಂತ: ಈ ಶತಮಾನದ ನೋಟ, ಕಂಬಾರರ ಕಾವ್ಯ: ಕೆಲವು ಅಧ್ಯಯನಗಳು, ಆರ್ಕೆಸ್ಟ್ರಾ ಮತ್ತು ತಂಬೂರಿ (ಗೌರೀಶ ಕಾಯ್ಕಿಣಿಯವರ ಆಯ್ದ ಲೇಖನಗಳು), ಅರೆಶತಮಾನದ ಅಲೆಬರಹಗಳು (ಕೆ.ವಿ.ಸುಬ್ಬಣ್ಣನವರ ಸಮಗ್ರ ಲೇಖನಗಳು), ವೈದೇಹಿ ವಾಚಿಕೆ ಗಮನಾರ್ಹವಾದುವು. ಫಾದರ್ ಸೆರ್ಗಿಯಸ್, ರಿಕ್ತರಂಗಭೂಮಿ, ಓವರ್ಕೋಟ್ ಅನುವಾದಿತ ಕೃತಿಗಳು. ಸಾಹಿತ್ಯ ಸಂಚಾರ ಇತ್ತೀಚಿನ ಕೃತಿ. ಅಶೋಕ ಅವರು ಪಡೆದಿರುವ ಅನೇಕ ಪ್ರಶಸ್ತಿಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿ.ಎಮ್.ಇನಾಂದಾರ್ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ತೀನಂಶ್ರೀ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಸಂದೇಶ್ ವಿಶೇಷ ಪ್ರಶಸ್ತಿ, ಎಸ್.ವಿ.ಪರಮೇಶ್ವರ ಭಟ್ಟ ಸಂಸ್ಮರಣಾ ಪ್ರಶಸ್ತಿ ಮುಖ್ಯವಾದುವು.

ಲೇಖಕರ ಇತರ ಕೃತಿಗಳು
10%
ವಾಸ್ತವತಾವಾದ
ಅಶೋಕ ಟಿ ಪಿ, Ashoka T P
Rs. 100    Rs. 90
10%
ಕಾವ್ಯ ಪ್ರೀತಿ
ಅಶೋಕ ಟಿ ಪಿ, Ashoka T P
Rs. 155    Rs. 140
10%
ಮತ್ತೆ ಮತ್ತೆ ಮಾಸ್ತಿ
ಅಶೋಕ ಟಿ ಪಿ, Ashoka T P
Rs. 130    Rs. 117
10%
ಸಾಹಿತ್ಯ ಸಂಬಂಧ
ಅಶೋಕ ಟಿ ಪಿ, Ashoka T P
Rs. 200    Rs. 180
Best Sellers
ನಮ್ಮಮ್ಮ ಅಂದ್ರೆ ನಂಗಿಷ್ಟ
ವಸುಧೇಂದ್ರ, Vasudhendra
Rs. 81/-   Rs. 90
ದಶಾವತಾರ ಶ್ರೀರಾಮಕಥಾಸುಧಾ (ಬಾಲಕಾಂಡ) (Hard Cover)
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 315/-   Rs. 350
ಸ್ಪೋಕನ್ ಇಂಗ್ಲೀಷ್ ಕನ್ನಡ ವಿವರಣೆಗಳೊಂದಿಗೆ
ಗಣೇಶ್ ಐ, Ganesh I
Rs. 59/-   Rs. 65
ಪುಟ್ಟ ಕಿಟ್ಟ ವಿಜ್ಞಾನ ಸಂವಾದ 1 ರಿಂದ 12 : ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡವ ಕಥನಗಳು
ಡಾ ಎ.ಓ. ಆವಲ ಮೂರ್ತಿ, Dr A O Avala Murthy
Rs. 496/-   Rs. 620

Latest Books
ವಿಶ್ವದ ಪ್ರಸಿದ್ಧ ಮಹಿಳಾ ಗಣಿತಜ್ಞರು
ಪದ್ಮಾವತಮ್ಮ, Padmavathamma
Rs. 72/-   Rs. 90
ಕಣ್ಣನ್ ನೋಟ : ಹಿರೇಮಗಳೂರು ಕಣ್ಣನ್ ಚಿಂತನ ಬರಹಗಳು
ಹಿರೇಮಗಳೂರು ಕಣ್ಣನ್, Hiremagaluru Kannan
Rs. 203/-   Rs. 225
ಉಪಯುಕ್ತ ಗಿಡಮೂಲಿಕೆಗಳು

Rs. 189/-   Rs. 210
ಬೇರು : ಕಾದಂಬರಿ
ಫಕೀರ, Fakeer (Shridhar Banvasi G C)
Rs. 297/-   Rs. 330


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.