|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಸಿದ್ಧರಾಗಿರುವ ವ್ಯಕ್ತಿಗಳ ಮಡದಿಯ ಸ್ಥಾನ ಕತ್ತಿಯಂಚೇ ಹೌದು. ಪ್ರಸಿದ್ಧ ವ್ಯಕ್ತಿಗಳಿಗೆ ತಮಗೆ ದೊರೆತ ಸ್ಥಾನಮಾನವನ್ನು ಕಾದಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಅವರು ತಮ್ಮ ಮನೆ ಹಾಗೂ ಮಕ್ಕಳ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೆಂಡತಿಯ ಮೇಲೆ ಹೊರಿಸುತ್ತಾರೆ. ಗಾಂಧೀಜಿಯವರು ಮಹಾ ದರ್ಪಿಷ್ಠರು. ಹೆಂಡತಿಯೆನಿಸಿಕೊಂಡವಳು ಅಂಕೆಯಲ್ಲಿರಬೇಕು. ಆಕೆ ಭೋಗದ ವಸ್ತು. ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಅಧಿಕಾರ ಚಲಾಯಿಸಬಹುದು. ತಾನು ಹೇಳಿದ ಹಾಗೆ ಆಕೆ ಕೇಳಿಕೊಂಡಿರಬೇಕು. ಆಕೆಗೆ ಸ್ವಂತ ಭಾವನೆಗಳಿರುವುದಿಲ್ಲ - ಇತ್ಯಾದಿ ನಿಲುವು ಗಾಂಧೀಜಿಯವರದ್ದು. ಕಸ್ತೂರಬಾ ಅವರದ್ದು ಮೃದು ಸ್ವಭಾವ. ಆದರೆ ಮಹಾ ಸ್ವಾಭಿಮಾನಿ. ಆಕೆಗೆ ಸಾರ್ವಜನಿಕ ಬದುಕಿಗಿಂತ ಖಾಸಗೀ ಬದುಕೇ ಇಷ್ಟ. ಆದರೆ ಗಾಂಧೀಜಿಯವರಿಗೆ ಕಸ್ತೂರಬಾ ತನ್ನ ಸಮನಕ್ಕೆ ಹೆಜ್ಜೆ ಹಾಕುತ್ತಿಲ್ಲ ಎನ್ನುವ ಕೋಪ. ಆರಂಭದಲ್ಲಿ ಪ್ರತಿಭಟಿಸುವ ಕಸ್ತೂರಬಾ ಕ್ರಮೇಣ ತಮ್ಮನ್ನು ಬದಲಿಸಿಕೊಳ್ಳುತ್ತಾರೆ. ಅದಕ್ಕೆ ಸರಿಯಾಗಿ ಗಾಂಧೀಜಿಯವರೂ ಸ್ಪಂದಿಸುತ್ತಾರೆ. ಕೊನೆಗೆ ಕಸ್ತೂರಬಾ, ಗಾಂಧೀಜಿಯವರ ಎದೆಯ ಮೇಲೆಯೇ ಪ್ರಾಣಬಿಡುತ್ತಾರೆ. ಕಸ್ತೂರಬಾ ಅವರನ್ನು ಡಾ|| ಗೀತಾ ಶೆಣೈ ಈ ಕೃತಿಯಲ್ಲಿ ಸೊಗಸಾಗಿ ಪರಿಚಯಿಸಿದ್ದಾರೆ.
|
ಡಾ|| ಗೀತಾ ಶೆಣೈ ತಮ್ಮ ಬರವಣಿಗೆಯಲ್ಲಿ ಸೌಂದರ್ಯ ಮತ್ತು ಲಾಲಿತ್ಯವನ್ನು ಕಾಪಿಟ್ಟುಕೊಂಡವರು. ಕನ್ನಡದಲ್ಲಿ ಎಂ.ಎ., ಪಿಎಚ್.ಡಿ. ಪದವೀಧರರು. ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ ಭಾಷೆಗಳನ್ನು ಬಲ್ಲವರು. ಸಂಶೋಧನೆ, ಭಾಷಾಂತರ ಬರೆಹಗಳಂತಹ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಉತ್ಸಾಹ. ಕರ್ನಾಟಕದ ಅನೇಕ ಪತ್ರಿಕೆಗಳಲ್ಲಿ ಇವರ ನೂರಕ್ಕು ಹೆಚು ಬರೆಹಗಳು ಪ್ರಕಟವಾಗಿವೆ. ಹಲವಾರು ಸಂಸ್ಥೆಗಳಲ್ಲಿ ಗೌರವ ಹುದ್ದೆ, ಸದಸ್ಯತ್ವ ಹೊಂದಿದ್ದವರು. ಸಾಹಿತ್ಯ ಸಂಪದ ಮಾಲಿಕೆಯ ‘ಗೋಪಾಲಕೃಷ್ಣ ಪೈ’, ಡಾ|| ಜ್ಯೋತ್ಸ್ನಾ ಕಾಮತ್ ಕೊಂಕಣಿಯಲ್ಲಿ ಬರೆದ ‘ಕಮಲಾದೇವಿ ಚಟ್ಟೋಪಾಧ್ಯಾಯ : ಬದುಕು-ಸಾಧನೆ’ಯನ್ನು ಕನ್ನಡಕ್ಕೆ ಅನುವಾದಿಸಿದ್ದು ಅವು ನವಕರ್ನಾಟಕದಿಂದ ಪ್ರಕಟವಾಗಿವೆ. ಇವರ ಸುಮಾರು 31 ಕೃತಿಗಳು ಇದುವರೆಗೆ ಪ್ರಕಟವಾಗಿವೆ.
|
|
| |
|
|
|
|
|
|
|
|
|