|
|

| Rs. 1000 | 5% |
Rs. 950/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಕರ್ನಾಟಕ ಜನಪದ ಕಲೆಗಳ ಕೋಶದಲ್ಲಿ‘ ಧರ್ಮ, ದೇವರು, ಆರಾಧನೆ, ಪಂಥ, ಪಂಗಡ ಹಾಗೂ ಸಾಮಾಜಿಕ ಶ್ರೇಣಿಕರಣಗಳ ಸಂಕೀರ್ಣ ಬದುಕು ಹೇಗೆ ಈ ಕಲಾ ಜಗತ್ತಿನ ಮೇಲೆ ಪ್ರಭಾವ ಬೀರಿತು ಮತ್ತು ಆ ಮೂಲಕ ಜನಪದ ಕಲೆಗಳು ಕಂಡುಕೊಂಡ ಸ್ಥಾನಗಳೇನು ಎಂಬ ವಿಚಾರಗಳು ಕರ್ನಾಟಕದ ಮಟ್ಟಿಗಂತೂ ವಿಸ್ಮಯಕಾರಿ. ಮನುಷ್ಯನ ಸಾಂಸ್ಕೃತಿಕ ಚರಿತ್ರೆಗೂ ಜನಪದ ಕಲೆಗಳ ಉಗಮಕ್ಕೂ ಅವಿನಾಭಾವ ಸಂಬಂಧವಿದೆ.
ಆರಾಧಾರನೆ ಮತ್ತು ಆಚರಣೆಗಳ ಕ್ರಿಯೆಗಳೇ ಕಲೆಗಳಾಗಿ ವಿಕಸನ ಹೊಂದಿ ಪೂರ್ಣಸ್ವರೂಪದ ಕಲೆಗಳಾದದ್ದು ಒಂದು ಬಗೆಯಾದರೆ: ಧರ್ಮ ಅಥವಾ ಪಂಥ ಪ್ರಸಾರಕ್ಕಾಗಿ ಹುಟ್ಟಿದ ಕಲೆಗಳು ನಂತರ ಧರ್ಮಪಂಥದ ಉದ್ದೇಶ ಮೀರಿ ಸಾರ್ವಜನಿಕ ಕಲೆಗಳಾದದ್ದು ಇನ್ನೊಂದು ಬಗೆ. ಕಲೆಯೇ ವೃತಿಯಾಗಿ ನಂತರದಲ್ಲಿ ಅದೊಂದು ಪರಂಪರೆಯಾಗಿ ಬೆಳೆದದ್ದು ಒಂದು ಬಗೆಯಾದರೆ. ಇರುವ ವ್ಯವಸ್ಥೆಗೆ ಪ್ರತಿಭಟನೆಯಾಗಿ ಹೊಸ ಕಲೆಗಳೇ ಹುಟ್ಟಿಕೊಂಡದ್ದು ಮತ್ತೊಂದು ಬಗೆ. ಹೀಗೆ ಹಲವು ಕುತೂಹಲಗಳನ್ನು ಕೆರಳಿಸುವ ಕರ್ನಾಟಕದ ಕೆಲೆಗಳು ನಮ್ಮ ಸಂಸ್ಕೃತಿಯ ಅಧ್ಯಯನಕ್ಕೆ ಪ್ರಧಾನ ಆಕರಗಳಾಗುತ್ತವೆ. ಇಂಥ ಕಲೆಗಳ ಶೋಧನೆಯಿಂದ ಬಹುತೇಕ ದುಡಿಯುವ ವರ್ಗದ ಜನರ ಮೌಖಿಕ ಇತಿಹಾಸವನ್ನು ನಿಜಸ್ವರೂಪದಲ್ಲಿ ಅರ್ಥೈಸಿಕೊಳ್ಳಲು ಸಾಧ್ಯ. ಅಲ್ಲದೆ, ಈ ಮೂಲಕ ಇತಿಹಾಸವನ್ನು ಕೂಡ ಸತ್ಯದ ಬರೆಗಲ್ಲಿಗೆ ಹಚ್ಚಿ ಪುನರ್ ರೂಪಿಸಬಹುದಾಗಿದೆ.
ಆಧುನಿಕತೆಯ ನಾಗಾಲೋಟದಲ್ಲಿ ಕ್ರಮಿಸುತ್ತಿರುವ ನಮ್ಮ ಬದುಕು ಹೊಸಹೊಸದನ್ನು ಹುಡುಕುತ್ತ ತುಡಿಯುತ್ತಾ ನೆಲಮೂಲದ ಸಂಗತಿಗಳನ್ನು ಮರೆಯುತ್ತಿದ್ದೇವೆ. ನೆಲಮೂಲದ ಬಗೆಗಿನ ನಮ್ಮೆಲ್ಲಾ ಕಾಲಜಿ, ಪ್ರೀತಿ, ಬದ್ಧತೆಗಳನ್ನು ಮೀರಿ ಗೊತ್ತೇ ಇಲ್ಲದಂತೆ ಪರೋಕ್ಷವಾಗಿ ಸಮಸ್ಥವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ರಾಕ್ಷಸ ಬಾಹುಗಳ ಈ ಆಧುನಿಕತೆಯಲ್ಲಿ ಜನಪದ ಕಲೆಯನ್ನು ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವೇ ಎಂಬ ಸಂದಿಗ್ಧಿದಲಿ ನಾವಿದ್ದೇವೆ. ಆಧುನಿಕತೆಯ ಸಕಾರಾತ್ಮಕ ದ್ರೌವ್ಯವನ್ನು ಬಳಸಿಕೊಂಡು ನಮ್ಮ ಕಲೆಗಳನ್ನು ಕಲಾವಿದರನ್ನು ಆ ವ್ಯವಸ್ಥೆಗೆ ಮುಖಾಮುಖಿ ಯಾಗಿಸುವ ಪ್ರಯತ್ನ ಮಾಡಬೇಕಾಗಿದೆ
|
| |
|
|
|
|
|
|
|
|
|