Items
0
Total
  0.00 
Welcome Guest.

 
Rs. 240    
10%
Rs. 216/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಶಂಕರ ಬಟ್ ಡಿ.ಎನ್, D N Shankara Bhat
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು :
ಪುಸ್ತಕದ ಗಾತ್ರ : 1/8 Demy Size
ಕೋಡ್ : 188873

ಪುಸ್ತಕದ ಬಗ್ಗೆ ವಿವರಣೆ:
ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣವೊಂದನ್ನು ಒದಗಿಸಿಕೊಡುವ ಡಿ. ಎನ್. ಶಂಕರ ಭಟ್ ಅವರ ಪ್ರಯತ್ನದಲ್ಲಿ ಇದು ಐದನೆಯ ತುಂಡಾಗಿ ಹೊರಬರುತ್ತಿದೆ. ಇದರಲ್ಲಿ ‘ಪರಿಚೆಪದಗಳು’ ಮತ್ತು ‘ಎಣಿಕೆಪದಗಳು’ ಎಂಬ ಎರಡು ವಿಭಾಗಗಳಿವೆ.
ಈ ಪುಸ್ತಕದಲ್ಲಿನ ಮೊದಲನೇ ಪಾಠದಲ್ಲಿ ಅಗಲ, ಉದ್ದ, ಕೆಂಪು, ಉರುಟು, ಮೊದಲಾದ ಹೆಸರುಪರಿಚೆಗಳನ್ನು ಮತ್ತು ಮೆಲ್ಲಗೆ, ಹಿಂದೆ, ಬಳಿಕ, ತುಸು, ಮೊದಲಾದ ಎಸಕಪರಿಚೆಗಳನ್ನು ಗುಂಪಿಸುವುದು ಹೇಗೆ, ಅವನ್ನು ಬೇರೆ ಬಗೆಯ ಪದಗುಂಪುಗಳಿಂದ ಬೇರ್ಪಡಿಸುವುದು ಹೇಗೆ, ಸೊಲ್ಲುಗಳಲ್ಲಿ ಅವನ್ನು ಹಂತಪದಗಳೊಂದಿಗೆ ಮತ್ತು ಹೋಲಿಕೆಯ ನುಡಿತಗಳೊಂದಿಗೆ ಬಳಸುವುದು ಹೇಗೆ ಎಂಬುದನ್ನೂ ಈ ಪಾಠದಲ್ಲಿ ತಿಳಿಸಲಾಗಿದೆ.
ಎರಡನೇ ಪಾಠದಲ್ಲಿ ಒಂದು, ಎರಡು, ಮೂರು ಮೊದಲಾದ ಎಣಿಕೆಯ ಪದಗಳನ್ನು ಹೆಸರುಪದ ಮತ್ತು ಪರಿಚೆಪದಗಳಿಂದ ಬೇರ್ಪಡಿಸುವುದು ಹೇಗೆ, ಅವನ್ನು ಬಳಸಿರುವ ಪದಗಳಲ್ಲಿ ಕಾಣಿಸುವ ಇಟ್ಟಳಗಳು ಎಂತಹವು, ಮತ್ತು ಸೊಲ್ಲುಗಳಲ್ಲಿ ಅವುಗಳ ಬಳಕೆಯೆಂತಹುದು ಎಂಬುದನ್ನು ತಿಳಿಸಲಾಗಿದೆ.

ಡಾ. ಡಿ. ಎನ್. ಶಂಕರ ಭಟ್ ಅವರು ಜಗತ್ತಿನ ಹೆಸರಾಂತ ಭಾಷಾ ವಿಜ್ಞಾನಿಗಳು. ಮದ್ರಾಸ್ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ. ಮತ್ತು ಪುಣೆ ವಿಶ್ವವಿದ್ಯಾಲಯದಿಂದ ನುಡಿಯರಿಮೆ(linguistics)ಯಲ್ಲಿ ಪಿ.ಎಚ್.ಡಿ. ಪಡೆದಿರುವ ಭಟ್ಟರು, ಅಮೇರಿಕಾದ ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯೂನಿವರ್ಸಿಟಿ, ಬೆಲ್ಜಿಯಂ ದೇಶದ ಆಂಟ್ವರ್ಪ್ ಯೂನಿವರ್ಸಿಟಿ, ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್‍ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಸಂಶೋಧಕರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಸಂಶೋಧನೆಯ ಪೇಪರಗಳು (research papers) ಜಗತ್ತಿನೆಲ್ಲೆಡೆ ಹೆಸರುಗಳಿಸಿವೆ.

ಕನ್ನಡ ನುಡಿಯ ಬಗ್ಗೆ ಶಂಕರ ಭಟ್ಟರು ಹಲವು ವರ್ಷಗಳ ಆಳವಾದ ಸಂಶೋಧನೆ ನಡೆಸಿದ್ದು, ಈ ನಿಟ್ಟಿನಲ್ಲಿ ಪಡೆದುಕೊಂಡ ತಿಳುವಳಿಕೆಗಳನ್ನು ಒಗ್ಗೂಡಿಸಿ ಹಲವು ಹೊತ್ತಗೆಗಳನ್ನು ಬರೆದಿದ್ದಾರೆ. ಕನ್ನಡ ನುಡಿಯು ನಡೆದು ಬಂದ ದಾರಿ, ಕನ್ನಡದಲ್ಲಿರುವ ವ್ಯಾಕರಣದ ನಿಜವಾದ ಕಟ್ಟಲೆಗಳು, ಕನ್ನಡದ ಪದ ಸೊಗಡು ಮುಂತಾದವುಗಳ ಕುರಿತು ಭಟ್ಟರು ಬರೆದಿರುವ ಕನ್ನಡ ನುಡಿಯರಿಮೆಯ ಹೊತ್ತಗೆಗಳು, ಹಿಂದಿನಿಂದ ಕಣ್ಣುಮುಚ್ಚಿ ನಂಬಿಕೊಂಡು ಬಂದಿದ್ದ ಹಲವಾರು ತಪ್ಪು ತಿಳುವಳಿಕೆಗಳನ್ನು ಮತ್ತು ಅವುಗಳನ್ನು ಸರಿಪಡಿಸುವ ಬಗೆಗಳನ್ನು ಕನ್ನಡ ಸಮಾಜಕ್ಕೆ ತೋರಿಸಿಕೊಟ್ಟಿವೆ.

ಭಾಷಾ ವಿಜ್ಞಾನದಲ್ಲಿ ಇವರ ಕೆಲಸವನ್ನು ಗುರುತಿಸಿ ಹಂಪಿ ವಿಶ್ವವಿದ್ಯಾಲಯವು ಇವರಿಗೆ `ನಾಡೋಜ` ಪದವಿಯನ್ನೂ ಹಾಗೂ ಕರ್ನಾಟಕ ಸರಕಾರವು ಪಂಪ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.

ಲೇಖಕರ ಇತರ ಕೃತಿಗಳು
10%
ಕನ್ನಡ ಬರಹದ ಸೊಲ್ಲರಿಮೆ ....
ಶಂಕರ ಬಟ್ ಡಿ.ಎನ್, Shankara Bhat D N
Rs. 200    Rs. 180
10%
ಕನ್ನಡದ ಸೊಲ್ಲರಿಮೆ : ....
ಶಂಕರ ಬಟ್ ಡಿ.ಎನ್, Shankara Bhat D N
Rs. 50    Rs. 45
10%
ಕನ್ನಡ ನುಡಿಯರಿಮೆಯ ಇಣುಕುನೋಟ
ಶಂಕರ ಬಟ್ ಡಿ.ಎನ್, Shankara Bhat D N
Rs. 100    Rs. 90
10%
ಕನ್ನಡ ವ್ಯಾಕರಣವನ್ನು ಕಲಿಸುವುದು ....
ಶಂಕರ ಬಟ್ ಡಿ.ಎನ್, Shankara Bhat D N
Rs. 125    Rs. 113
Best Sellers
ಮನೋರೋಗಕ್ಕೆ ಚಿಕಿತ್ಸೆ ಏನು ?
ಚಂದ್ರಶೇಖರ್ ಸಿ ಆರ್, Chandrashekar C R
Rs. 23/-   Rs. 25
1600 ವರ್ಷಗಳ ಒಕ್ಕಲಿಗರ ಇತಿಹಾಸ
ಪಾಂಡುಕುಮಾರ್ ಬಿ, Pandukumar B
Rs. 270/-   Rs. 300
ಸಮರಸವೇ ಜೀವನ (ಬೇಂದ್ರೆ ದ ರಾ)
ಬೇಂದ್ರೆ ದ ರಾ, ಅಂಬಿಕಾತನಯದತ್ತ, Bendre D R
Rs. 135/-   Rs. 150
ಕರುಣಾಳು ಬಾ ಬೆಳಕೆ–13
ಗುರುರಾಜ ಕರಜಗಿ, Gururaj Karajagi
Rs. 113/-   Rs. 125

Latest Books
ತೊಟ್ಟಿಕ್ಕುತ್ತಲೇ ಇದೆ ನೆತ್ತರು...
ಅಗ್ನಿ ಶ್ರೀಧರ್, Agni Sreedhar
Rs. 315/-   Rs. 350
ದೂರ ಸಾಗರ : ಅಂಕಣ ಬರಹ ಮತ್ತಿತರ ಲೇಖನಗಳ ಸಂಗ್ರಹ
ಮೀರಾ ಪಿ ಆರ್, Meera P R
Rs. 108/-   Rs. 120
ದಿಗಂಬರವೇ ದಿವ್ಯಾಂಬರ : ಬೆಂಕಿಯಲ್ಲಿ ಬೈಚಿಟ್ಟ ಕೋಲಿನ ಕಥೆ
ಓಶೋ, Osho
Rs. 162/-   Rs. 180
ಅಮ್ಮನ ನೆನಪು ಭಾಗ--1
ಚಂದ್ರಕಾಂತ ವಡ್ಡು, Chandrakanta Vaddu
Rs. 135/-   Rs. 150


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.