|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕನಕದಾಸರು ದಾಸಶ್ರೇಷ್ಠರಾಗಿರುವಂತೆಯೇ ಉತ್ತಮ ಕವಿಯೂ ಆಗಿರುವರು. ನಳ ಚರಿತ್ರೆ, ಹರಿಭಕ್ತಿಸಾರ, ನೃಸಿಂಹಸ್ತವ, ರಾಮಧಾನ್ಯ ಚರಿತೆ ಹಾಗೂ ಮೋಹನ ತರಂಗಿಣಿ ಎನ್ನುವ ಕಾವ್ಯಗಳನ್ನು ರಚಿಸಿರುವರು. ಕನಕದಾಸರು ಪೂರ್ವಾಶ್ರಮದಲ್ಲಿ ತಿಮ್ಮಪ್ಪ ಎಂಬ 70 ಹಳ್ಳಿಗಳ ಡಣಾಯಕ. ಕೃಷ್ಣದೇವರಾಯನ ಅಸಂಖ್ಯ ಡಣಾಯಕರಲ್ಲಿ ಒಬ್ಬರು. ಡಣಾಯಕನಾಗಿದ್ದ ಕಾರಣ, ಆತ ವಿಜಯನಗರದ ಸಾಮ್ರಾಜ್ಯದ ವೈಭವವನ್ನು ಕಣ್ಣರೆ ಕಂಡಿದ್ದರು. ಈ ಅನುಭವನ್ನು ಮೋಹನ ತರಂಗಿಣಿ ಕಾವ್ಯವನ್ನು ಬರೆಯುವಾಗ ಬಳಸಿಕೊಂಡರು. ಕೃಷ್ಣನ ದ್ವಾರಕಾನಗರಿಯ ವರ್ಣನೆಯನ್ನು ಮಾಡಲು ತಾನು ಕಂಡ ಹಂಪಿಯ ವರ್ಣನೆಯನ್ನೇ ಮಾಡುತ್ತಾರೆ. ಕನಕದಾಸರ ಕವಿತಾಶಕ್ತಿಯ ಶಿಖರ ‘ರಾಮಧಾನ್ಯ ಚರಿತೆ‘ಯಲ್ಲಿ ಕಂಡುಬರುತ್ತದೆ. ಭಾರತದ ಯಾವುದೇ ಕಾಲದ ಸಾಹಿತ್ಯದಲ್ಲಿ ಕಂಡುಬರದಂತಹ ಅಪರೂಪದ ವಿಷಯವನ್ನು ತೆಗೆದುಕೊಂಡು, ಅಕ್ಕಿ ಶ್ರೇಷ್ಠವೋ? ರಾಗಿ ಶ್ರೇಷ್ಠವೋ? ಎಂದು ಚರ್ಚಿಸುವುದರ ಮೂಲಕ ಶ್ರೀಮಂತ-ಬಡವ, ನಿಜಭಕ್ತಿ ಹಾಗೂ ಡಾಂಭಿಕ ಭಕ್ತಿಯ ಬಗ್ಗೆ ಬರೆಯುವ ಪರಿ ಅನ್ಯಾದೃಶವಾಗಿದೆ.
|
| |
|
|
|
|
|
|
|
|
|