Items
Total
   
 
Welcome Guest.

 
Rs. 80
10%
Rs. 72/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ಕೋಡ್ : 156202

ಆಧುನಿಕ ಅನುಭವದ ವಿಚ್ಛಿದ್ರತೆಯನ್ನು ಪರಿಶೀಲಿಸುವ ಇಲ್ಲಿಯ ಕತೆಗಳ ಹೊಸತನ ಮತ್ತು ಪ್ರಯೋಗಶೀಲತೆ ಒಮ್ಮೆಲೇ ಮನಸ್ಸನ್ನು ಸೆಳೆಯುತ್ತದೆ. ಕಥಾರಚನೆಯ ಮತ್ತು ಭಾಷಾಪ್ರಯೋಗದ ಅನೇಕ ಹೊಸ ಸಾಧ್ಯತೆಗಳು ಇಲ್ಲಿವೆ. ಹಲವು ವಾಸ್ತವಗಳು, ಹಲವು ಭ್ರಾಮಕಗಳು ಕೂಡಿ ಉಂಟಾದ ಈ ಜಗತ್ತು, ಒಂದು ಸಾಧ್ಯತೆಯಾಗಿ ನಮ್ಮೊಳಗೇ ಎಲ್ಲೋ ಅವಿತು ಕೂತಿದೆಯೇನೋ ಎಂಬ ತಲ್ಲಣವನ್ನೂ ಹುಟ್ಟಿಸುತ್ತದೆ. ಬಹುಮುಖ್ಯವಾದುದೆಂದರೆ ಇವು ಕನ್ನಡದ ಒಳಗೇ ಹುಟ್ಟಿದ ಹೊಸ ರಚನೆಗಳು. ಹೀಗೆ ಭಾಷೆಯ ಹೊಟ್ಟೆಯಿಂದ ಬಂದ ಪ್ರಯೋಗಶೀಲತೆ ಮಾತ್ರ ಗಟ್ಟಿಯಾಗಿರುತ್ತದೆ ಹಾಗೂ ಕನ್ನಡ ಬದುಕಿನ ಹೃದಯವನ್ನು ಹಿಡಿಯಲು ಶಕ್ತವಾಗಿರುತ್ತದೆ.

ಕಿರುಗತೆಗಳಿಗೆ ಚುರುಕುತನ ಮಾತ್ರ ಇದ್ದರೆ ಸಾಲದು; ಜೊತೆಗೆ ಪರಿಣಿತ ಕಲೆಗಾರಿಕೆಯೂ ಬೇಕು. ಆ ಸಾಮರ್ಥ್ಯ ಇಲ್ಲಿಯ ಎಲ್ಲ ಕತೆಗಳಲ್ಲೂ ಕಾಣುತ್ತದೆ. ಜೊತೆಗೆ ಕನ್ನಡ ಸಾಹಿತ್ಯ ಸ್ಮೃತಿಯಿಂದ ಹೆಕ್ಕಿದ, ಜೋಗಿಯವರಿಗೇ ವಿಶಿಷ್ಟವಾದ ಕೆಲವು ಪದಪ್ರಯೋಗಗಳು ಪಾತ್ರಗಳು, ಹೆಸರುಗಳು, ಸಂದರ್ಭಗಳು ಇವೆ. ಇವು ಆಯಾ ಕತೆಯ ಹರವನ್ನು ಮಾತ್ರವಲ್ಲ, ಕೆಲವೊಮ್ಮೆ ಮೂಲದ ಪ್ರಸ್ತುತತೆಯನ್ನೂ ಹಿಗ್ಗಿಸುತ್ತವೆ. ಹಾಗಾಗಿ ಈ ಕತೆಗಳ ಜೇವಜಾಲವು ಹಿಂದೆಂದೋ ಶುರುವಾಗಿ ಮುಂದೆಲ್ಲೋ ದೂರದವರೆಗೂ ಹರಡಿಕೊಂಡಂತಿದೆ.

ಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರ ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹುಟ್ಟಿದ್ದು ನವೆಂಬರ್ ೧೬. ೧೯೬೫. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ, ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರಸ್ತುತ ಪುರವಣಿ ಸಂಪಾದಕರಾಗಿದ್ದಾರೆ.

uploads/authorimages/989.jpg
ಲೇಖಕರ ಇತರ ಕೃತಿಗಳು
10%
ನೋಟ್ ಬುಕ್ - ....
ಜೋಗಿ, Jogi
Rs. 120    Rs. 108
10%
ನಾಳೆ ಬಾ
ಜೋಗಿ, Jogi
Rs. 95    Rs. 86
10%
ಮಸಾಲೆ ದೋಸೆಗೆ ಕೆಂಪು ....
ಜೋಗಿ, Jogi
Rs. 150    Rs. 135
10%
ಅಂಕಣ ಗಾಳಿಯಾಟ
ಜೋಗಿ, Jogi
Rs. 120    Rs. 108
Best Sellers
ಜಗತ್ತಿನ ಉದಾತ್ತ ಚಿಂತಕರು
ಸೊಂದಲಗೆರೆ ಲಕ್ಷ್ಮೀಪತಿ, Sondalagere Lakshmipati
Rs. 293/-   Rs. 325
ಆಚಾರ್ಯ ವಿನೋಬಾ ಭಾವೆ (ವಿಶ್ವಮಾನ್ಯರು)
ಆನಂದ್ ಎನ್ ಎಲ್, Anand N L
Rs. 20/-   Rs. 25
ಚಿಕವೀರ ರಾಜೇಂದ್ರ (ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ)
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 540/-   Rs. 600
Discover Your Destiny
ರಾಬಿನ್ ಶರ್ಮ, Robin Sharma
Rs. 245/-   Rs. 275

Latest Books
ಕ್ಷಣ ಹೊತ್ತು ಆಣಿಮುತ್ತು - ೬
ಷಡಕ್ಷರಿ ಎಸ್, Shadakshari S
Rs. 88/-   Rs. 98
ನಾದಗಳು ನುಡಿಯಾಗಲೇ : ಚಂದ್ರಶೇಖರ ಕಂಬಾರರ ಕಾವ್ಯದ ಕುರಿತು
ವಿಕ್ರಮ ವಿಸಾಜಿ, Vikram visaji
Rs. 180/-   Rs. 200
ನೇತಾಜಿ ಸುಭಾಷ್ ಚಂದ್ರ ಬೋಸ್ (ವಿಶ್ವಮಾನ್ಯರು)
ಮುರಳೀಧರನ್ ವೈ ಜಿ, Muralidharan Y G
Rs. 20/-   Rs. 25
ನಗುವ ನಯನ ಮಧುರ ಮೌನ : ಆರ್ ಎನ್ ಜಯಗೋಪಾಲ್ ಅವರ ಆಯ್ದ ಚಿತ್ರಗೀತೆಗಳು
ಶ್ರೀಧರಮೂರ್ತಿ ಎನ್ ಎಸ್, Sridharmurthy N S
Rs. 176/-   Rs. 195


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.